ಎಲ್ಲಾ ಮಠಾಧೀಶರೂ ಜಾತಿ ಭಾವನೆಯಿಂದ ಮುಕ್ತರಾಗಿಲ್ಲ. ಅವರ ನರನಾಡಿಗಳಲ್ಲಿ ಪ್ರವಹಿಸುತ್ತಿರುವುದು ಜಾತಿ ಭಾವನೆಯ ರಕ್ತವೇ. ಅವರು ತಮ್ಮ ದೈನಂದಿನ ಜೀವನದಲ್ಲಿ ಮತ್ತು ಕಾರ್ಯ ಚಟುವಟಿಕೆಗಳಲ್ಲಿ ಅನುಸರಿಸುತ್ತಿರುವುದು `ನೀರಿಗಿಂತ ರಕ್ತ ಗಟ್ಟಿ~ ಎಂಬ ತತ್ವವನ್ನೇ. ಆರಂಭದಿಂದಲೂ ಎಲ್ಲಾ ಮಠಾಧೀಶರು ತಮ್ಮ ಜಾತಿಗಳ ಜನರಿಗೆ ಉತ್ತೇಜನ ನೀಡುತ್ತ ಬಂದಿದ್ದಾರೆ.

ಇವರೆಲ್ಲ ಜಗದ್ಗುರುಗಳು! ಇವರ ಜಗತ್ತು ಎಷ್ಟೆಂದರೆ ಅವರವರ ಸಮುದಾಯ (ಜಾತಿ) ಮಾತ್ರ. ಯಾವ ಮಠದಲ್ಲೂ ಸಹಪಂಕ್ತಿ ಭೋಜನ ಇಲ್ಲ. `ತಮ್ಮವರ~ ಊಟವಾದ ಮೇಲೆಯೇ ಇತರರಿಗೆ ಊಟ ನೀಡುವ ಪರಿಪಾಠ. ಸ್ವಾಮಿ ವಿವೇಕಾನಂದರ `ಸನ್ಯಾಸಿ~ ಪದದ ವ್ಯಾಖ್ಯೆಯನ್ನು ಅವರು ಓದಿದ್ದರೆ ಕಾಷಾಯ ವಸ್ತ್ರ ಧರಿಸಲು ಅವರು ಎಷ್ಟರ ಮಟ್ಟಿಗೆ ಅರ್ಹರು ಎಂಬುದು ಅವರಿಗೇ ವೇದ್ಯವಾದೀತು.

ನನಗೆ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಸಂಪರ್ಕ ಬಹಳ ಹಿಂದಿನಿಂದಲೂ ಇದೆ. ಸ್ವಾಮೀಜಿಯವರ ಜತೆಯಲ್ಲಿ ನನ್ನದು ಕೇವಲ ಔಪಚಾರಿಕ ಸಂಪರ್ಕವಾಗಿರಲಿಲ್ಲ. ಅವರು ನನ್ನ ಬಗೆಗೆ ಆತ್ಮೀಯ ಭಾವನೆ ಹೊಂದಿದ್ದರು.

ಹಾಗೆಯೇ ನಾನು ಅವರ ಬಗ್ಗೆ ಅಪಾರ ಭಕ್ತಿ, ಗೌರವದ ಭಾವನೆಯನ್ನು ಬೆಳೆಸಿಕೊಂಡಿದ್ದೆನು. 1980ರ ದಶಕದಲ್ಲಿ ಅವರು ಮಾಗಡಿಯಲ್ಲಿ ಒಕ್ಕಲಿಗ ಸಮೂಹದ ಕೆಲವರಿಗೆ ಲಿಂಗಧಾರಣೆ ಮಾಡಿದರು. ಲಿಂಗಧಾರಣೆ ಮಾಡಿಸಿಕೊಂಡವರು ಚೇಳೂರು ಒಕ್ಕಲಿಗ ಸಮುದಾಯದವರು. ಅದರ ಫಲವಾಗಿ ಆ ಸಮೂಹ ಕುಟುಂಬಗಳು ಛದ್ರ ಛಿದ್ರವಾದವು.

ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿದ್ದ ಸಿದ್ಧಗಂಗಯ್ಯ ಎಂಬ ಕನ್ನಡ ಪಂಡಿತರೂ ಸ್ವಾಮೀಜಿಯವರಿಂದ ಲಿಂಗಧಾರಣೆ ಮಾಡಿಸಿಕೊಂಡರು. ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಬಹುಕಾಲ ಮದುವೆ ಸಾಧ್ಯವಾಗಲೇ ಇಲ್ಲ.

ಒಕ್ಕಲಿಗ ವರಗಳೂ ಸಿಕ್ಕಲಿಲ್ಲ. ವೀರಶೈವರೂ ಅವರೊಡನೆ ವೈವಾಹಿಕ ಸಂಬಂಧ ಬೆಳೆಸಲು ಸಿದ್ಧವಿರಲಿಲ್ಲ. ಲಿಂಗಧಾರಣೆ ಮಾಡಿಸಿಕೊಂಡ ಕುಂಚಟಿಗ ಒಕ್ಕಲಿಗ ಜನಾಂಗದವರೂ ಇದೇ ಬವಣೆ ಅನುಭವಿಸುತ್ತಿರುವರು.

ತುಮಕೂರಿನ ಸಿದ್ಧಗಂಗಾ ಮಠದ ಹಿಂದಿನ ಗುರುಗಳಾದ ಉದ್ದಾನೇಶ್ವರ ಸ್ವಾಮೀಜಿಯವರ ನಂತರದ ಪೀಠಾಧಿಪತಿಗಳಾಗಿ ಅಧಿಕಾರಕ್ಕೆ ಬಂದ ಶಿವಕುಮಾರ ಸ್ವಾಮೀಜಿಯವರಿಗೆ ವೀರಶೈವ ಜನರು ಮೊದಮೊದಲು ಮಾನ್ಯತೆ ಕೊಡುತ್ತಿರಲಿಲ್ಲ.

ಅದಕ್ಕೆ ಕಾರಣ, ಸ್ವಾಮೀಜಿಯವರು ಒಕ್ಕಲಿಗ ಸಮೂಹದಿಂದ ಬಂದವರೆಂಬುದೇ ಆಗಿದೆ.
ಬಹುಶಃ ಅವರ ತಾತನೋ, ಮುತ್ತಾತನೋ ಲಿಂಗಧಾರಣೆ ಮಾಡಿಸಿಕೊಂಡು ವೀರಶೈವರಾದವರು. ಈ ಕಾರಣದಿಂದ ವೀರಶೈವ ಸಮಾಜದವರು, ಮಠದ ಅಭಿವೃದ್ಧಿಗೆ ಆರಂಭದಲ್ಲಿ ಸಹಕಾರ ನೀಡುತ್ತಿರಲಿಲ್ಲ.

ಸಿದ್ಧಗಂಗಾ ಮಠವು ಅಭಿವೃದ್ಧಿಗೆ ಬಂದದ್ದು ವೀರಶೈವೇತರ ಸಮುದಾಯಗಳ ಜನರ ಸಹಕಾರದಿಂದ. ಎಲ್ಲಾ ಜಾತಿ ಪಂಗಡಗಳ ಜನರೂ ಮಠದ ಏಳಿಗೆಗೆ ಕೈಜೋಡಿಸಿದ್ದಾರೆ. ಅದು ಬೃಹತ್ತಾಗಿ ಬೆಳೆದ ಮೇಲೆ ವೀರಶೈವ ಸಮೂಹದವರು ಅದರ ಸುತ್ತ ಬಂದು ಸೇರಿಕೊಂಡರು. ಅವರ ಪ್ರವೇಶದಿಂದ ಹಿಂದೊಮ್ಮೆ ವಿದ್ಯಾರ್ಥಿ ನಿಲಯದ ವೀರಶೈವೇತರ ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ನಡೆಯಿತು.

ಮಾಗಡಿಯಲ್ಲಿ ನಡೆದ ಒಕ್ಕಲಿಗರ ಸಮೂಹಕ್ಕೆ ಲಿಂಗಧಾರಣೆ ಮಾಡಿದ ಪ್ರಕರಣವನ್ನು ಕುರಿತು ಒಮ್ಮೆ ನಾನು ಮಠದ ಕಚೇರಿಯಲ್ಲಿ ಸ್ವಾಮೀಜಿ ಅವರನ್ನು ಕಂಡು ಪ್ರಶ್ನಿಸಿದೆ. ಅವರ ದರ್ಶನಕ್ಕೆ ಬರುತ್ತಿದ್ದ ಜನರ ಮುಂದೆ ಈ ವಿಷಯ ಚರ್ಚಿಸಲು ಅವರಿಗೆ ಸಂಕೋಚವಾಯಿತು. `ಇಲ್ಲಿ ಆ ವಿಷಯ ಮಾತನಾಡುವುದು ಬೇಡ... ನನ್ನ ವಾಸದ ಮನೆಗೆ ಹೋಗಿ ಮಾತನಾಡೋಣ~ ಎಂದು ಹೇಳಿದರು.

ಸ್ವಲ್ಪ ಹೊತ್ತಾದ ನಂತರ ಅವರ ವಾಸ್ತವ್ಯದ ಮನೆಗೆ ಹೋದೆವು. ಅದು ಹಳೆಯ ಮನೆ. ಅಲ್ಲಿ ಅಡಂಬರ ಸೂಚಿಸುವ ಪೀಠೋಪಕರಣಗಳಿರಲಿಲ್ಲ. ಅಂದು ನಾನು ಅಲ್ಲಿಯೇ ಊಟ ಮಾಡಿದೆ. ನಂತರ ವಿಷಯ ಪ್ರಸ್ತಾಪಿಸುತ್ತಾ ಅವರು ಹೇಳಿದ್ದು `ನಾನು ಆ ಕೆಲಸ ಮಾಡಬಾರದಿತ್ತು. ನನಗೆ ಕೆಲವು ಜನರು ತಪ್ಪು ಮಾಹಿತಿ ನೀಡಿದರು. ಅದರಿಂದ ಈ ಕೆಲಸ ಮಾಡಬೇಕಾಯಿತು. ಈಗ ನನಗೆ ನಾನು ತಪ್ಪು ಮಾಡಿದೆ ಅನ್ನಿಸುತ್ತಿದೆ~ ಎಂದು ಪಶ್ಚಾತ್ತಾಪ ಧ್ವನಿಯಲ್ಲಿ ಹೇಳಿದರು.

1963ರಿಂದ ಇಂದಿನವರೆಗೂ ನಾನು ಹಲವಾರು ಸಲ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೇನೆ. ಈ ಸಂದರ್ಭಗಳಲ್ಲಿ ಅವರು ಯಾವುದೇ ರಾಜಕೀಯ ವಿಷಯವನ್ನು ಮಾತನಾಡಿರಲಿಲ್ಲ. ಇಂದಿನ ಅವರ ನಡೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ. ಮೂರು ಘಟನೆಗಳಿಗೆ ಸಂಬಂಧಿಸಿದಂತೆ ಅವರ ಬಗೆಗಿನ ನನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕೆಂಬ ಭಾವನೆ ಮೂಡುವಂತೆ ಮಾಡಿದೆ.

ಮೊದಲನೆಯದು, ಅವರು ಮೈಸೂರು ದಸರಾ ಉತ್ಸವ ಉದ್ಘಾಟಿಸಲು ಒಪ್ಪಿಕೊಂಡಿದ್ದು. ಎರಡನೆಯದು ಇತ್ತೀಚೆಗೆ ಸಿದ್ಧಗಂಗಾ ಮಠದಲ್ಲಿ ನಡೆದ ಕೋಟಿ ಲಿಂಗ ಪ್ರತಿಷ್ಠಾಪನೆಗೆ ಸಂಬಂಧಿಸಿದ ಗುದ್ದಲಿ ಪೂಜೆ ಸಂದರ್ಭ.

ಕೋಟಿಲಿಂಗ ಸ್ಥಾಪನೆಗೆ ಮಠದಲ್ಲಿ ಅವಕಾಶ ನಿರಾಕರಿಸಿದ್ದನ್ನು ಸಮರ್ಥಿಸಿಕೊಳ್ಳುತ್ತ ಅವರು `ಗುದ್ದಲಿ ಪೂಜೆ ಏತಕ್ಕೆ ಮಾಡುತ್ತಿದ್ದಾರೆ ಎಂಬ ವಿಷಯವೇ ನನಗೆ ಗೊತ್ತಿರಲಿಲ್ಲ. ಗುದ್ದಲಿ ಪೂಜೆ ಏತಕ್ಕೆಂದು ನಾನೇ ಕೇಳಿದೆ~ ಎಂದು ಹೇಳಿದ್ದರು. ಈ ಮಾತುಗಳನ್ನು ಯಾರಾದರೂ ನಂಬಲು ಸಾಧ್ಯವೇ?

ಮೂರನೆಯದು, ಇತ್ತೀಚೆಗೆ ಮುಖ್ಯಮಂತ್ರಿ ಸದಾನಂದ ಗೌಡರು ಅವರ ಆಶೀರ್ವಾದ ಬಯಸಿ ಮಠಕ್ಕೆ ಹೋಗಿ ಅವರ ಪಾದಗಳಿಗೆ ನಮಸ್ಕರಿಸಿದಾಗ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿ ಅವರನ್ನು ಆಶೀರ್ವದಿಸುವಷ್ಟು ಸಹನೆ ಅವರಲ್ಲಿರಲಿಲ್ಲ ಎಂಬುದು.
ಈ ಮೂರೂ ಸಂಗತಿಗಳನ್ನು ಅವರು ಸಮರ್ಥಿಸಿಕೊಳ್ಳುವರೇ?

ಈ ಸಂಗತಿಗಳ ಪರಿಣಾಮದಿಂದ ಸ್ವಾಮೀಜಿ ಅವರ ಬಗ್ಗೆ ಶ್ರೀಸಾಮಾನ್ಯರಲ್ಲಿ ಎಂತಹ ಭಾವನೆಗಳು ಉಂಟಾಗಬಹುದು ಎಂಬ ಬಗ್ಗೆ ಅವರು ಯೋಚಿಸಿದಂತೆ ಕಾಣುವುದಿಲ್ಲ. ಬಹುಶಃ ಇದಕ್ಕೆ ಅವರ ವಯಸ್ಸು ಕಾರಣ ಇರಬಹುದು ಅಥವಾ ತಾವು ವೀರಶೈವರು ಎಂಬ ಭಾವನೆ ಜಾಗೃತವಾಗಿದ್ದರಿಂದ ಉಂಟಾದ `ಅಂಧ ಜಾತಿ~ ಪ್ರೇಮವೋ ತಿಳಿಯಬೇಕು.

ಈ ಮೂರು ಘಟನೆಗಳು ಅವರ ಬಗೆಗೆ ಭಕ್ತಿಗೌರವಗಳನ್ನು ಹೊಂದಿದವರಿಗೆ ಅತೀವ ನೋವು ಉಂಟುಮಾಡಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

(ಲೇಖಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.