ಬುಧವಾರ, ಜೂನ್ 23, 2021
24 °C

ಮಣಿಪುರ: ಕಾಂಗ್ರೆಸ್‌ಗೆ ಹ್ಯಾಟ್ರಿಕ್ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಫಾಲ (ಪಿಟಿಐ): ಮೂರನೇ ಎರಡರಷ್ಟು ಬಹುಮತ ಗಳಿಸಿ ಸತತ ಮೂರನೇ ಅವಧಿಗೆ ಆಯ್ಕೆಯಾಗುವ
ಅಲೆ ವಿರುದ್ಧ ಈಜಿದ ಇಬೊಬಿ

ಐದು ರಾಜ್ಯಗಳ ಚುನಾವಣಾ ಸಮರದಲ್ಲಿ ಕಾಂಗ್ರೆಸ್ ಪಾಲಿಗೆ ಸಮಾಧಾನ ನೀಡಿದ ಏಕೈಕ ರಾಜ್ಯ ಮಣಿಪುರ. ಇಲ್ಲಿ ಪಕ್ಷಕ್ಕೆ ಗೆಲುವು ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಹಾಲಿ ಮುಖ್ಯಮಂತ್ರಿ ಒಕ್ರಂ ಇಬೊಬಿ ಸಿಂಗ್. ಕಳೆದ ಎರಡು ಬಾರಿ ಪಕ್ಷಕ್ಕೆ ಜಯ ತಂದು ಕೊಟ್ಟಿದ್ದ ಅವರು ಈಗ ಕಾಂಗ್ರೆಸ್‌ನ `ಹ್ಯಾಟ್ರಿಕ್ ಹೀರೊ~.

ಮೂಲಕ ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷವು ಹ್ಯಾಟ್ರಿಕ್ ಸಾಧಿಸಿದೆ.ವಿರೋಧ ಪಕ್ಷಗಳ ಕಚ್ಚಾಟವೇ ಇಲ್ಲಿ ಕಾಂಗ್ರೆಸ್‌ಗೆ ವರದಾನವಾಗಿದೆ. ಮಂಗಳವಾರ ಪ್ರಕಟವಾದ  ವಿಧಾನಸಭೆ ಫಲಿತಾಂಶಗಳ ಪೈಕಿ ಮಣಿಪುರದ ಫಲಿತಾಂಶ ಮಾತ್ರ ಕಾಂಗ್ರೆಸ್‌ಗೆ ನೆಮ್ಮದಿ ನೀಡಿದೆ.60 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 42 ಸ್ಥಾನಗಳನ್ನು ಗೆದ್ದುಕೊಂಡಿದೆ. ಎನ್‌ಸಿಪಿ-1, ತೃಣಮೂಲ ಕಾಂಗ್ರೆಸ್- 7, ಎಲ್‌ಜೆಪಿ-1 ಮತ್ತು ನಾಗಾ ಪೀಪಲ್ಸ್ ಫ್ರಂಟ್- 4 ಸ್ಥಾನಗಳನ್ನು ಪಡೆದುಕೊಂಡಿವೆ.ಮುಖ್ಯಮಂತ್ರಿ ಒಕ್ರಂ ಇಬೊಬಿ ಸಿಂಗ್ ಥೊಬಾಲ್ ಕ್ಷೇತ್ರದಲ್ಲಿ ಪುನರಾಯ್ಕೆಯಾಗಿದ್ದಾರೆ. ಅವರು ಬಿಜೆಪಿ ಇಂದಿರಾ ಒಇನಾಮ್ ಅವರನ್ನು 15 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಮುಖ್ಯಮಂತ್ರಿ ಅವರ ಪತ್ನಿ ಲಂಧೋನಿ ದೇವಿ ಖಂಗಾಬೊಕ್ ಕ್ಷೇತ್ರದಲ್ಲಿ ಮಣಿಪುರ ಪೀಪಲ್ಸ್ ಪಕ್ಷದ ಜಾತ್ರಾ ಸಿಂಗ್ ಅವರನ್ನು ಪರಾಭವಗೊಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.