ಭಾನುವಾರ, ಜೂನ್ 13, 2021
29 °C

ಮಣಿಪುರ ಯುವಕ, ಯುವತಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಇಪ್ಪತ್ತರ ಹರೆಯದ ಮಣಿಪುರ ಮೂಲದ ಯುವತಿ ಹಾಗೂ ಆಕೆಯ ಸೋದರ ಸಂಬಂಧಿಯನ್ನು ನಿಂದಿಸಿ ಅವರ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ­ರುವ ಘಟನೆ ದೆಹಲಿಯಲ್ಲಿ ನಡೆದಿದೆ.ತಮ್ಮ ವಿರುದ್ಧ ಮಾಡಲಾದ ಜನಾಂಗೀಯ ನಿಂದನೆಯನ್ನು ಮಣಿಪುರದ ಸೋದರ ಸಂಬಂಧಿಗಳು ಪ್ರತಿಭಟಿಸಿದಾಗ ಇಬ್ಬರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ದೆಹಲಿ ವಿಶ್ವವಿದ್ಯಾಲಯದ ಉತ್ತರ­ಭಾಗದ ಕ್ಯಾಂಪಸ್‌ ಬಳಿಯಲ್ಲಿರುವ ವಿಜಯ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಮಣಿಪುರದ ಉಖ್ರುಲ್‌ ಜಿಲ್ಲೆಯ­ರಾದ  24 ವರ್ಷದ ಯುವತಿ ದೆಹಲಿ ವಿ.ವಿಯಲ್ಲಿ ಬಿಇಡಿ ಓದುತ್ತಿದ್ದರು. ಆಕೆಯ ಸೋದರ ಸಂಬಂಧಿ ಪದವಿ ಶಿಕ್ಷಣ ಪಡೆಯುತ್ತಿದ್ದ. ಶುಕ್ರವಾರ ರಾತ್ರಿ ಭೋಜನ  ಮುಗಿಸಿ ಮನೆಗೆ ಹಿಂದಿರು­ಗು­ತ್ತಿ­ದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.