ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಗುಡ್ಡೆ ಕುಸಿದು ನಾಲ್ವರ ಸಾವು

Last Updated 11 ಫೆಬ್ರವರಿ 2011, 19:30 IST
ಅಕ್ಷರ ಗಾತ್ರ

ಸವದತ್ತಿ: ತಾಲ್ಲೂಕಿನ ಉಗರಗೋಳ ಗ್ರಾಮದ ಹತ್ತಿರ ಮಣ್ಣಿನ ಗುಡ್ಡೆ ಕುಸಿದು ನಾಲ್ವರು ಮೃತಪಟ್ಟಿದ್ದು, ಒಬ್ಬ ಪ್ರಾಣಾಪಾಯದಿಂದ ಪಾರದ ಘಟನೆ ಶುಕ್ರವಾರ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ.

ಮೃತರನ್ನು ಬಸಪ್ಪ ಮಲ್ಲಪ್ಪ ಸಿದ್ದಾಪುರ (25), ರಾಯಪ್ಪ ಬಾವುಲಿ (28), ಹನಮಂತ ಉಪಲಿ (35), ರೇಣಪ್ಪ ಸಿದ್ಧಪುರ (ಹಳಕಟ್ಟಿ) (28) ಎಂದು ಗುರುತಿಸಲಾಗಿದೆ.
ಅಶೋಕ ಕಬ್ಬೇರ ಎಂಬಾತನ ಕೈ ಮುರಿದಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಟ್ಟಿಗೆ ತಯಾರಿಸಲು ಗುಡ್ಡದಿಂದ ಮಣ್ಣು ಅಗೆಯುತ್ತಿದ್ದಾಗ ಈ ದುರ್ಘಟನೆ ಸಂಬವಿಸಿದೆ. ಸಿ.ಪಿ.ಐ. ಎಂ.ಎಸ್. ನಾಯಕ, ಪಿ.ಎಸ್.ಐ. ಪ್ರಶಾಂತ ನಾಯಕ, ತಹಸೀಲ್ದಾರ ಶಾರದಾ ಕೊಲಾಕಾರ, ಬಿ.ಜೆ.ಪಿ. ಅಧ್ಯಕ್ಷ ಸುನೀಲ ಸುಳ್ಳದ, ಪುರಸಭೆ ಅಧ್ಯಕ್ಷ ಶಿವಾನಂದ ಹೂಗಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT