ಶುಕ್ರವಾರ, ಮೇ 7, 2021
19 °C

ಮಧುಮೇಹ ನಿಯಂತ್ರಣಕ್ಕೆ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತವನ್ನು ಮಧುಮೇಹದ ದೇಶ ಎಂದು ವಿಶ್ವದಲ್ಲಿ ಗುರುತಿಸಲಾಗುತ್ತಿದೆ. ನಮ್ಮ ದೇಶದಲ್ಲಿ 7-9 ಕೋಟಿ ಮತ್ತು ನಮ್ಮ ರಾಜ್ಯದಲ್ಲಿ 30-40 ಲಕ್ಷ ಮಧುಮೇಹಿಗಳು ಇರಬಹುದು ಎಂದು ಅಂದಾಜು. ಬೆಂಗಳೂರಿನಲ್ಲಿ ಇವರ ಪ್ರಮಾಣ ಶೇ 13-16. ಇದು ಒಂದು ರೀತಿಯಲ್ಲಿ ಮೌನ ಹಂತಕ. ಇದನ್ನು ನಿಯಂತ್ರಿಸಲು ಸಾಧ್ಯವೇ? ಇದು ಯಕ್ಷ ಪ್ರಶ್ನೆ.

 
ಕಾರ್ಯಕ್ರಮ ವಿವರ

ಭಾನುವಾರ ಬೆಳಿಗ್ಗೆ 10 ರಿಂದ 6ರ ವರೆಗೆ ಸಕ್ಕರೆ ಕಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ಶಿಬಿರ, ಸಂವಾದ. ಭಾಗವಹಿಸುವ ವೈದ್ಯರು: ಡಾ. ಕೆ. ರಾಮಚಂದ್ರ (ವಿಷಯ: ಮಧುಮೇಹಿಗಳು ಮಾಡುವ ತಪ್ಪುಗಳು), ಸೋಮಶೇಖರ ರೆಡ್ಡಿ (ಕಾಯಿಲೆ ವ್ಯಾಪ್ತಿ), ಸುಹಾಸ್ ಹೊಸೂರು (ಪಾದಗಳ ಸಮಸ್ಯೆ), ಸಿ.ಆರ್. ಚಂದ್ರಶೇಖರ್ (ಮನೋಲೈಂಗಿಕ ಸಮಸ್ಯೆ), ಕೇಶವ್ (ಹೃದಯದ ಸಮಸ್ಯೆ), ಎಚ್.ವಿ. ಚಂದ್ರಕುಮಾರ್ (ಚರ್ಮದ ಸಮಸ್ಯೆ), ಶಿವಕುಮಾರ ಸ್ವಾಮಿ (ಹಲ್ಲಿನ ಸಮಸ್ಯೆ).

ಮಧ್ಯಾಹ್ನ 12.30ಕ್ಕೆ ಡಿಸಿಪಿ ರಮೇಶ್ ಅವರಿಂದ ಡಾ. ರಾಮಚಂದ್ರ ಅವರ `ಮಧುಮೇಹ ತಡೆಯಿರಿ~ ಎಂಬ ಕನ್ನಡ ಮತ್ತು ಇಂಗ್ಲಿಷ್ ಕಿರು ಹೊತ್ತಗೆ ಲೋಕಾರ್ಪಣೆ. ಸಾನ್ನಿಧ್ಯ: ಮುಮ್ಮಡಿ ಶಿವರುದ್ರ ಸ್ವಾಮೀಜಿ. ಅತಿಥಿ: ಐಜಿಪಿ ಕೆ.ವಿ. ಶರತ್‌ಚಂದ್ರ ಮತ್ತು ಡಾ. ಬಿ.ವಿ. ದೇವರ್.

ಸ್ಥಳ: ಕೇಶವ ಶಿಲ್ಪ ಸಭಾಂಗಣ, ಉಮಾ ಥಿಯೇಟರ್ ಹಿಂಭಾಗ, ಚಾಮರಾಜಪೇಟೆ. ಮಾಹಿತಿಗೆ: ಡಾ. ಕೆ. ರಾಮಚಂದ್ರ (94486 42360, 94807 20223).ಮಧುಮೇಹ ನಿಯಂತ್ರಣಕ್ಕೆ ಸರಿಯಾದ ತಿಳಿವಳಿಕೆ ಹಾಗೂ ವೈಜ್ಞಾನಿಕ ಆಧಾರಿತ ಆರೋಗ್ಯ ಶಿಕ್ಷಣ ಅಗತ್ಯ. ಕ್ರಮಬದ್ಧವಾಗಿ ಆರೋಗ್ಯ ಶಿಕ್ಷಣವನ್ನು ಎಲ್ಲಾ ಹಂತದಲ್ಲೂ ರೋಗಿಗಳಿಗೆ ನೀಡಿದಾಗ ಮಧುಮೇಹ ಹತೋಟಿಗೆ ತರಬಹುದು ಹಾಗೂ ದುಷ್ಪರಿಣಾಮಗಳನ್ನು ಯಶಸ್ವಿಯಾಗಿ ಮುಂದೂಡಬಹುದು ಎಂದು ಪ್ರಪಂಚದ ಎಲ್ಲಾ ತಜ್ಞರುಗಳು ಪ್ರತಿಪಾದಿಸಿದ್ದಾರೆ. ಆದರೆ ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಆರೋಗ್ಯ ಶಿಕ್ಷಣದ ಕಾರ್ಯಕ್ರಮ ಶೂನ್ಯ ಎಂದರೂ ತಪ್ಪಾಗಲಾರದು. ಕಾಯಿಲೆ ಬಗ್ಗೆ ಸರಿಯಾದ ಜಾಗೃತಿ ಇರುವವರು ನಗರದಲ್ಲಿ ಸರಾಸರಿ ಶೇ 10 ಮತ್ತು ಹಳ್ಳಿಗಳಲ್ಲಿ ಶೇ 5.ಈ ನಿಟ್ಟಿನಲ್ಲಿ ಕಾವೇರಿ ಡಯಾಬಿಟಿಕ್ ಫೌಂಡೇಶನ್ ಹಾಗೂ ಮಂಡ್ಯದ ಕಾವೇರಿ ಚಾರಿಟೆಬಲ್ ಟ್ರಸ್ಟ್ ರಾಜ್ಯದ ವಿವಿಧೆಡೆ 75 ಆರೋಗ್ಯ ಶಿಕ್ಷಣ ಶಿಬಿರಗಳನ್ನು ಕನ್ನಡದಲ್ಲಿ ಯಶಸ್ವಿಯಾಗಿ ನಡೆಸಿವೆ. 104 ಸಕ್ಕರೆ ಕಾಯಿಲೆ ಶಿಬಿರಗಳು ಹಾಗೂ ಹೃದಯ, ಕಣ್ಣು, ನರ, ಚರ್ಮ, ಮಾನಸಿಕ, ಕೀಲು- ಮೂಳೆ ಹಾಗೂ ದಂತ ಶಿಬಿರಗಳನ್ನು ಉಚಿತವಾಗಿ ನಡೆಸಿವೆ.  7 ಕಿರು ಹೊತ್ತಿಗೆಗಳ 20 ಸಾವಿರ ಪ್ರತಿಗಳನ್ನು ರೋಗಿಗಳಿಗೆ ಉಚಿತವಾಗಿ ನೀಡಿವೆ. 10 ಪುಸ್ತಕಗಳನ್ನು ಪ್ರಕಟಿಸಿವೆ.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.