ಶನಿವಾರ, ಜನವರಿ 18, 2020
20 °C

ಮನಸೂರೆಗೊಂಡ ಪ್ರತಿಭಾ ಕಾರಂಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಒಂದೆಡೆ ಬಲಿಚಕ್ರವರ್ತಿ ಇನ್ನೊಂದೆಡೆ ಕಲಾ ಸಂಪತ್ತೇ ಇರುವ ಜಾನಪದ ಕಲೆಗಾರರ ದಂಡು, ಮತ್ತೊಂದೆಡೆ ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳು. ಇದು ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ಈಚೆಗೆ ನಡೆದ ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಂಡುಬಂದ ದೃಶ್ಯಗಳು.ಕೊಡಗು ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕ್ಲಸ್ಟರ್‌ನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆಗಳನ್ನು ಅನಾವರಣಗೊಳಿಸಿದರು.ಈ ಸಂದರ್ಭ ಬಲಿಚಕ್ರವರ್ತಿ ವೇಷಧರಿಸಿ ಪ್ರದರ್ಶನ ನೀಡಿದ್ದು ಸಭಿಕರನ್ನು ಮನಸೂರೆಗೊಳಿಸಿತು. ಅಲ್ಲದೇ, ಕೋಲಾಟ ಸೇರಿದಂತೆ ವಿದ್ಯಾರ್ಥಿಗಳು ನೀಡಿದ ಜಾನಪದ ನೃತ್ಯಗಳು ನೋಡುಗರ ಮನಸೂರೆಗೊಳಿಸಿದವು.ರಾಜೇಶ್, ಜ್ಞಾನ ಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾರಾಯಣ, ನಿರ್ದೇಶಕರಾದ ಜಿ.ಎಲ್. ನಾಗರಾಜು, ನಾರಾಯಣ ಹಾಜರಿದ್ದರು.

ಪ್ರತಿಕ್ರಿಯಿಸಿ (+)