ಮಂಗಳವಾರ, ಜೂನ್ 15, 2021
22 °C

ಮನೆಯಂಗಳದಲ್ಲಿ ಪದ್ಮನಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಶನಿವಾರ `ಮನೆಯಂಗಳದಲ್ಲಿ ಮಾತುಕತೆ~, ತಿಂಗಳ ಅತಿಥಿ ಸಂಗೀತಗಾರ ವಿದ್ವಾನ್ ಆರ್.ಕೆ. ಪದ್ಮನಾಭ, ಸಂಜೆ 4.ಸಂಗೀತ ಕಾಶಿಯೆಂದೇ ಹೆಸರಾಗಿರುವ ಹಾಸನ ಜಿಲ್ಲೆಯ ರುದ್ರಪಟ್ಟಣದವರು ಆರ್.ಕೆ.ಪದ್ಮನಾಭ. ತಂದೆ ಕೃಷ್ಣ ದೀಕ್ಷಿತ್, ತಾಯಿ ಶಾರದಮ್ಮ. ಭೌತಶಾಸ್ತ್ರದಲ್ಲಿ ಬಿ.ಎಸ್ಸಿ. ಪದವಿ ಪಡೆದ ಇವರು ಸಂಗೀತ ಶಿಕ್ಷಣವನ್ನು ಮೈಸೂರಿನ ಎನ್. ನಂಜುಡಸ್ವಾಮಿ, ಎಚ್.ಆರ್. ಸೀತಾರಾಮಶಾಸ್ತ್ರಿ ಮತ್ತು ಪ್ರೊ.ಎಚ್.ವಿ. ಕೃಷ್ಣಮೂರ್ತಿ ಅವರಲ್ಲಿ ಪಡೆದರು.ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ಶುದ್ಧ ಶಾರೀರ ಮತ್ತು ಸಂಗೀತ ಜ್ಞಾನದಿಂದ ಕರ್ನಾಟಕ ಶೈಲಿ ಹಾಗೂ ಹಿಂದೂಸ್ತಾನಿ ಶೈಲಿ ಎರಡರಲ್ಲೂ ಪ್ರಾವೀಣ್ಯ ಪಡೆದರು. ಕರ್ನಾಟಕ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಂಗೀತ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಪ್ರದಾನ ಮಾಡಿವೆ. ಹಾಗೂ 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.