ಹಸಿರು ಪ್ರೀತಿಯ ಸೆಳೆತ ಎಂಥದ್ದು ಎಂದು ಮನಗಾಣಲು ಹುಬ್ಬಳ್ಳಿಯ ಗುಡಿಯಾಳ ರಸ್ತೆಯ ಯುಕೆಟಿ ಹಿಲ್ಸ್ಗೆ ಬರಬೇಕು. ಹಸಿರನ್ನೇ ಉಸಿರಾಗಿಸಿಕೊಂಡ ಮುಸ್ಲಿಂ ಕುಟುಂಬವೊಂದ ಈ ಸೂರು ಹಸಿರ ವನವಾಗಿದೆ. ಮನೆ ಮುಂದೆ, ಕಾಂಪೌಂಡ್ ಒಳಗೆ, ಕಟ್ಟೆ, ಟೆರೇಸ್ ಎಲ್ಲೆಲ್ಲೂ ಹಸಿರೇ ಮನೆ ಮಾಡಿದೆ. ಮನೆಯೇ ಕಾಣದಷ್ಟು ಹಸಿರು ಮುತ್ತಿದೆ!

ಷಾ ಟ್ರಾನ್ಸ್ಪೋರ್ಟ್ ಕಂಪೆನಿಯ ಮಾಲೀಕ ಮೆಹಬೂಬ್ ಖಾನ್ ಜಹಗೀರ್ದಾರ್ ಅವರಿಗಿದ್ದ ಹಸಿರ ಪ್ರೀತಿ ಅವರ ಮನೆಯನ್ನು ಹಸಿರಾಗಿಸಿದೆ. 100ಕ್ಕೂ ಅಧಿಕ ವೈವಿಧ್ಯಮಯ ಸಸ್ಯಸಂಕುಲ ಅವರ ಮನೆಯನ್ನು ವನವನ್ನಾಗಿಸಿದೆ. ಹೂವಿನ ಗಿಡ, ತರಕಾರಿ, ಹಣ್ಣಿನ ಗಿಡ ಒಂದೇ ಎರಡು ಕಣ್ಣುಗಳೇ ಸಾಲದು.

ಮನೆ ಟೆರೇಸ್ಗೆ ಹಬ್ಬಿಸಿದ ಗಾರ್ಲಿಕ್ ಕ್ರೀಪರ್ (ಹೂವಿನ ಬಳ್ಳಿ) ಮೈತುಂಬಾ ಹೂ ಬಿಟ್ಟು 10 ದಿನಗಳಷ್ಟು ಕಣ್ತುಂಬಿದ ಸೌಂದರ್ಯ ಹಂಚಿಕೊಳ್ಳಲು ಮೆಹಬೂಬ್ ಖಾನರಿಗೆ ಮಾತೇ ಸಾಲಲಿಲ್ಲ.

‘ವರ್ಷಕ್ಕೆ ಎರಡು ಬಾರಿ ಆ ಸೌಂದರ್ಯ ನೋಡಲು ಸಿಗೋದು. ಇನ್ನು ನವೆಂಬರ್ನಲ್ಲಿ ಮತ್ತೆ ಹೀಗೆ ಹೂ ಬಿಡೋದು. ಹೂ ಬಿಟ್ಟಾಗ ಜೇನು ದುಂಬಿಗಳು ಮುತ್ತಿಕೊಂಡು ಗುಯ್ಗುಡುವಾಗ ಆಹ್; ಅದೆಷ್ಟು ಖುಷಿ. ಅವೆಲ್ಲ ನಮ್ಮ ಸ್ನೇಹಿತರಾಗಿಬಿಟ್ಟಿವೆ ಈಗ.

ಪಕ್ಷಿಗಳು ಸಹ ಇಲ್ಲಿನ ಹೂ ಗಿಡಗಳ ನಡುವೆ ಗೂಡು ಕಟ್ಟಿ ಮರಿ ಮಾಡಿಕೊಂಡು ಹೋಗುತ್ತಿವೆ. ಒಂದು ಕೆಂಪು ಬಣ್ಣದ ಹಕ್ಕಿಯಂತೂ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿಕೊಂಡು ಹೋಯಿತು. ಮೂರು ತಿಂಗಳು ಇದ್ದ ಆ ಹಕ್ಕಿ ಹೋಗುವಾಗ ನನ್ನನ್ನು ಒಂದು ಸುತ್ತು ಹಾಕಿ ಹೋಗಿದ್ದು ಇನ್ನೂ ಕಣ್ಣ ಮುಂದೆ ಬರ್ತದೆ. ಬಹುಷಃ ಅದು ನಮಗೆ ಥ್ಯಾಂಕ್ ಹೇಳಿದ್ದು ಕಾಣ್ತದೆ....’ ಮೆಹಬೂಬ್ ಖಾನರ ಹಸಿರು ಮಾತಿನ ನಡುವೆ ಪಕ್ಷಿ, ದುಂಬಿಗಳ ನಡುವೆ ಅವರಿಗೆ ಬೆಸೆದ ಬಾಂಧವ್ಯ ಅವರ ಮಾತಿನಲ್ಲಿ ಬಿಚ್ಚಿಕೊಂಡಿತ್ತು.

ಹೂವಿನ ಬಳ್ಳಿ, ಗಿಡಗಳ ಸಂದಿಗಳನ್ನು ಬಗೆದು ನಡುವಿರುವ ಹಕ್ಕಿ ಗೂಡುಗಳನ್ನು ತೋರಿಸುತ್ತ, ‘ಮತ್ತೆ ಬಂದೇ ಬರ್ತವೆ ನೋಡಿ. ಮೊಟ್ಟೆ ಇಟ್ಟು, ಮರಿ ಮಾಡಿಕೊಂಡು ಹೋಗಲು. ನಾನೂ ಅವುಗಳ ನಿರೀಕ್ಷೆಯಲ್ಲಿದ್ದೇನೆ’ ಎನ್ನುವ ಅವರು, ಪಕ್ಷಿಗಳ ಮೇಲಿನ ಮಮತೆಗೆ ಪ್ರತಿದಿನ ಕಾಳು–ಕಡಿಗಳನ್ನು ಟೆರೇಸ್ ಮೇಲೆ ಬೀರುವ ಪರಿಪಾಠವಿಟ್ಟುಕೊಂಡಿದ್ದಾರೆ.

ಐದು ವರ್ಷಗಳ ಹಿಂದೆ ಮನೆ ಕಟ್ಟಿಸಿದ ಮೆಹಬೂಬರು, ಮನೆಗಿಂತ ಟೆರೇಸ್ ಗಾರ್ಡನ್ ನಿರ್ಮಾಣಕ್ಕಾಗಿಯೇ ಹೆಚ್ಚು ಮುತುವರ್ಜಿ ವಹಿಸಿದ್ದರು ಎಂಬುದು ಅವರ ಟೆರೇಸ್ ನೋಡಿದಾಗ ಸ್ಪಷ್ಟವಾಗುತ್ತದೆ. ಆರಂಭದಲ್ಲಿ ತರಕಾರಿ ಗಿಡಗಳನ್ನು ಬೆಳೆಯಲು ಮಣ್ಣಿನ ಹಾಗೂ ಸಿಮೆಂಟ್ ಕುಂಡಗಳನ್ನು ಬಳಸುತ್ತಿದ್ದ ಅವರು ಈಗ ಪೇಂಟ್ ಬಕೆಟ್ಗಳನ್ನು ಬಳಸುತ್ತಿದ್ದಾರೆ. ಕಾರಣ ಇಷ್ಟೆ. ಮಣ್ಣಿನ ಹಾಗೂ ಸಿಮೆಂಟ್ ಕುಂಡಗಳು ಬೇಗ ಹಾಳಾಗುವುದರೊಂದಿಗೆ ಅವುಗಳನ್ನು ಎತ್ತಿಡುವಾಗ ಒಡೆಯುವ ಸಂದರ್ಭಗಳು ಹೆಚ್ಚು. ಪೇಂಟ್ ಬಕೆಟ್ಗಳಾದರೆ ನಿರ್ವಹಣೆ ಸುಲಭ ಹಾಗೂ ಬಾಳಿಕೆಯೂ ಹೆಚ್ಚು. ಅವರ ಟೆರೇಸ್ ಮೇಲೆ ಇಂಥ ಬಕೆಟ್ಗಳಲ್ಲಿ ಸಾಕಷ್ಟು ತರಕಾರಿ ಗಿಡಗಳನ್ನು ಬೆಳೆಯಲಾಗಿದೆ.

ಬೆಂಡೆ, ಬದನೆ, ಮೆಣಸು, ಚವಳಿಕಾಯಿ, ಕರಿಬೇವು, ಅಲಸಂದೆ, ಮೂಲಂಗಿ, ಮೆಂತೆ, ಕೊತ್ತಂಬರಿ, ಈರುಳ್ಳಿ, ಟೊಮೆಟೊ, ಹಾಗಲ ಕಾಯಿ, ಹೀರೆಕಾಯಿ, ಲಿಂಬು, ಪೇರಲ, ಪಪ್ಪಾಯಿ, ಮಜ್ಜಿಗೆ ಹುಲ್ಲು ಒಂದೇ ಎರಡೇ... ಮನೆಗೆ ಅಗತ್ಯ ತರಕಾರಿಗಳೆಲ್ಲ ಅವರ ಟೆರೇಸ್ನಲ್ಲೇ ಲಭ್ಯ. ಬ್ಲ್ಯೂಬೆಲ್ಸ್ ಹೂವಿನ ಬಳ್ಳಿಗಳಿಂದಲೇ ಚಪ್ಪರ ನಿರ್ಮಿಸಿ ಅದರೊಳಗೆ ಕುಳಿತು ಸಮಯ ಕಳೆಯಲು ಕುರ್ಚಿ ಇಟ್ಟಿದ್ದಾರೆ.

ಅದರ ಪಕ್ಕದಲ್ಲಿ ಇಳಿಬಿದ್ದ ಡಾಲರ್ಸ್ ಬಳ್ಳಿಗಳು ಕಾಯಿ ಕಚ್ಚಿಕೊಂಡು ವಿಶೇಷವಾಗಿ ಸಳೆಯುತ್ತಿದೆ. ಹಳೆಯ ಹೆಂಚುಗಳನ್ನು ತಂದು ಅವುಗಳಲ್ಲೂ ಹೂವಿನ ಗಿಡ ಬೆಳೆಸಿದ್ದಾರೆ. ಬಿದಿರ ಮೆಳೆ ಕೊರೆದು, ಅದರೊಳಗೆ ಮಣ್ಣು ತುಂಬಿ ಬಗೆಬಗೆಯ ಗಿಡಗಳನ್ನು ಬೆಳೆಸಿದ್ದಾರೆ. ಕಲ್ಕತ್ತಾ ಪಾನ್ (ವಿಳ್ಯದೆಲೆ)ಬಳ್ಳಿ ಕೂಡ ಟೆರೇಸ್ನ ಮೂಲೆಯೊಂದರಲ್ಲಿ ಜಾಗಗಿಟ್ಟಿಸಿಕೊಂಡಿದೆ. ಮನೆಯ ಹಿಂಬದಿಯಿಂದ ಹಾಗಲ, ಹೀರೆ ಕಾಯಿ ಬಳ್ಳಿಗಳು ಟೆರೇಸ್ ಏರಿವೆ. ಮನೆ ಮುಂದೆ ಹೂವಿನ ಕುಂಡಗಳನ್ನು ಜೋತು ಬಿಡಲಾಗಿದೆ. ಮನೆ ಮುಂದೆಲ್ಲ ಬಗೆಬಗೆ ಗಿಡ ಮರಗಳೇ ತುಂಬಿವೆ.

ಇಷ್ಟೆಲ್ಲ ತರಕಾರಿ, ಹೂ ಗಿಡ ಬೆಳೆಯಲು ತರಬೇತಿ ಪಡೆದುಕೊಂಡಿದ್ದಿರಾ ಎಂಬ ಪ್ರಶ್ನೆಗೆ ಮೆಹಬೂಬರು ಕೊಟ್ಟ ಉತ್ತರ ‘ಇಲ್ಲಾ’.

‘ನನ್ನ ಅಮ್ಮನಿಗೆ ಹೂಗಿಡ, ತರಕಾರಿ ಬೆಳೆಯೋದು ಅಂದ್ರೆ ತುಂಬಾ ಆಸಕ್ತಿ. ನಮ್ಮದು ಧಾರವಾಡದ ಹತ್ತಿರ (10ಕಿ.ಮೀ.) ಬಾಡ್ ಎಂಬಲ್ಲಿ ಸ್ವಲ್ಪ ಜಮೀನಿದೆ. ಅದರಿಂದ ಕೃಷಿ ಬಗ್ಗೆ ಮೊದಲೇ ಅನುಭವವಿದೆ.

ಅದರಿಂದ ಇಷ್ಟೆಲ್ಲ ಮಾಡಿದೆ. ಈಗ ಮಳೆಗಾಲ. ಮಳೆ ಬರುವಾಗ ನೀರು ಹಾಕುವ ಪ್ರಮೇಯ ಇಲ್ಲ. ಆದರೆ ಉಳಿದ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 6.30 ಎದ್ದು ಗಿಡಗಳಿಗೆ ನೀರು ಹಾಕಿ, ಕಳೆ ಕಿತ್ತು, ಟ್ರಿಮ್ಮಿಂಗ್ ಮಾಡಿದ ಮೇಲೆಯೇ ನನಗೆ ಸಮಾಧಾನ’ ಎನ್ನುವಾಗ ಅವರ ನೆನಪಿನಾಳದ ಒಂದು ಘಟನೆಯನ್ನು ನೆನಪಿಸಿಕೊಂಡರು.

ಒಮ್ಮೆ ಅವರು ನಾಲ್ಕೈದು ದಿನ ಮನೆ ಬಿಟ್ಟು ಉಳಿಯುವ ಸಂದರ್ಭ ಬಂದಿತು. ಮನೆಗೆ ಬಂದು ನೋಡಿದಾಗ ಗಿಡಗಳೆಲ್ಲ ಬಾಡಿ ಬಾಗಿ ಹೋಗಿದ್ದವು. ಅದನ್ನು ನೋಡಿದ ಮೆಹಬೂಬರಿಗೆ ಒಂದು ಕ್ಷಣ ಏನು ಮಾಡಬೇಕೆಂಬುದೇ ತೋಚಲಿಲ್ಲ. ಯಾವ ಗಿಡಕ್ಕೆ ಮೊದಲು ನೀರು ಹಾಕಲಿ ಎಂಬ ಸಂದಿಗ್ಧತೆಯಲ್ಲಿ ಸಿಕ್ಕಿಕೊಂಡರು. ನೀರುಂಡು ತಲೆ ಎತ್ತಿದ ಮೇಲೆಯೇ ಅವರಿಗೆ ಉಸಿರು ಬಂದಂತಾಗಿದ್ದು.

ಹೂ ಗಿಡಗಳ ನಿರ್ವಹಣೆಯೇ ದೊಡ್ಡ ಸವಾಲು ಎನ್ನುವ ಮೆಹಬೂಬರು ಪ್ರತಿ ವರ್ಷವೂ ಗಿಡಗಳಿಗೆ ಹೊಸ ಮಣ್ಣು ಹಾಕುತ್ತಾರೆ. ಜಮೀನಿನಿಂದ ಗುಂಡಿ (ಸೆಗಣಿ) ಗೊಬ್ಬರ ತಂದು ಬುಡಕ್ಕೆ ನೀಡುತ್ತಾರೆ. ಒಟ್ಟಿನಲ್ಲಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವಲ್ಲಿ ನಿಗಾ ಇಡುತ್ತಾರೆ.

ಮೆಹಬೂಬರೊಂದಿಗೆ ಅವರ ಪತ್ನಿ ಹಾಗೂ ಮಕ್ಕಳೂ ಅಷ್ಟೇ ಆಸಕ್ತಿಯಿಂದ ಗಿಡಗಳ ಆರೈಕೆಗೆ ಕೈ ಜೋಡಿಸುತ್ತಾರೆ. ಇಡೀ ಕುಟುಂಬದ ಹಸಿರು ಪ್ರೀತಿ ಅವರ ಮನೆಯಲ್ಲಿ ಪ್ರತಿಫಲಿಸುತ್ತಿದೆ. ಪ್ರೋತ್ಸಾಹ ಸಿಕ್ಕರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಪ್ರೇಮ ಬಿತ್ತುವ ಯೋಚನೆ ಮೆಹಬೂಬ್ ಖಾನ್ ಅವರಿಗಿದೆ. ಸಂಪರ್ಕಕ್ಕೆ: 9886637252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.