ಯಲಬುರ್ಗಾ: ನಗರ ಆಶ್ರಯ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ಮಂಜೂರಾಗಿರುವ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ನಗರ ಆಶ್ರಯ ಫಲಾನುಭವಿಗಳ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಮಂಗಳವಾರ ಸ್ಥಳೀಯ ಮೊಗ್ಗಿಬಸವೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಪಟ್ಟಣ ಪಂಚಾಯಿತಿ ಎದುರು ಧರಣಿ ನಡೆಸಲಾಯಿತು.ನೇತೃತ್ವ ವಹಿಸಿದ್ದ ಮೌಲಾಹುಸೇನ ಬುಲ್ಡಿಯಾರ, ಪಪಂ ಸದಸ್ಯ ಪ್ರಕಾಶ ಬೇಲೇರಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಳಕಪ್ಪ ಹೂಗಾರ, ಮಾಜಿ ಪಪಂ ಉಪಾಧ್ಯಕ್ಷ ಯಮನೂರಪ್ಪ ನಡೂಲಮನಿ, ಡಿ.ಕೆ. ಪರುಶುರಾಮ ಸೇರಿದಂತೆ ಅನೇಕರು ಮಾತನಾಡಿ, ಪಪಂ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಮೇಲಧಿಕಾರಿಗಳಿಗೆ ನೀಡಿರುವ ತಪ್ಪು ಮಾಹಿತಿಯಿಂದ ಅಮಾಯಕರು ಮನೆಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಏಳೆಂಟು ವರ್ಷಗಳ ಕಾಲ ವಾಸವಾಗಿದ್ದ ಮನೆಗಳನ್ನು ರದ್ದುಪಡಿಸಲು ಯತ್ನಿಸುತ್ತಿರುವ ಸ್ಥಳೀಯ ಪಂಚಾಯಿತಿ ಮುಖ್ಯಸ್ಥರು ವಿವಿಧ ರೀತಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ರದ್ದತಿಗೆ ಪ್ರಚೋದನೆ ನೀಡಿದ್ದಾರೆ. ಅಲ್ಲದೇ ಮನೆಗಳ ರದ್ದತಿಗೆ ಯಾವುದೇ ಸಂಬಂಧವಿಲ್ಲ ಎಂದು ಪತ್ರಿಕೆಗಳಲ್ಲಿ ಹೇಳಿಕೆ ಕೊಡುತ್ತಿರುವ ಪಪಂ ಅಧ್ಯಕ್ಷರು ಮಂಗಳವಾರ ನಡೆಯಬೇಕಾಗಿದ್ದ ಸಾಮಾನ್ಯ ಸಭೆಯನ್ನು ದೀಡನಮಸ್ಕಾರ ಕಾರ್ಯಕ್ರಮವಿದೆ ಎಂಬ ನೆಪವೊಡ್ಡಿ ಉದ್ದೇಶಪೂರ್ವಕವಾಗಿ ಮುಂದೂಡಿದ್ದಾರೆ.

ಮನೆಗಳನ್ನು ಕಳೆದುಕೊಳ್ಳವ ಭೀತಿಯಲ್ಲಿರುವ ನೊಂದ ಫಲಾನುಭವಿಗಳು ಮಂಗಳವಾರ ಪಂಚಾಯಿತಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಇರುವುದನ್ನು ಗಮನಿಸಿ ಸಭೆ ರದ್ದು ಮಾಡಿ ಪಲಾಯನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಪಟ್ಟಣದ ಬೇವೂರು ರಸ್ತೆ, ಕುದ್ರಿಕೊಟಗಿ ರಸ್ತೆ ಹಾಗೂ ಮೀನಾಕ್ಷಿ ನಗರ ಪ್ರದೇಶ ಆಶ್ರಯ ಕಾಲೋನಿಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಇಂತಹ ಸೌಲಭ್ಯ ಒದಗಿಸುವಲ್ಲಿ ಯಾವುದೇ ಆಸಕ್ತಿ ತೋರದ ಪದಾಧಿಕಾರಿಗಳು ಮನೆಗಳ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ.

ಸಮರ್ಪಕ ವಿದ್ಯುತ್, ನೀರು ರಸ್ತೆ ಹಾಗೂ ಇತರೆ ಸೌಲಭ್ಯಗಳಿಲ್ಲದೆ ಇದ್ದು ಇಲ್ಲದಂತಿರುವ ಈ ಕಾಲೋಜಿಗಳ ಸಮಗ್ರ ಅಭಿವೃದ್ದಿಗೆ ವಿಶೇಷ ಕಾಳಜಿ ವಹಿಸಿ ವಿವಿಧ ಆಶ್ರಯ ನಿವಾಸಿಗರನ್ನು ನೆಮ್ಮದಿಯಿಂದ ಜೀವಿಸಲು ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶಂಕರ ಉಳ್ಳಾಗಡ್ಡಿ, ಡಿ.ಎಚ್. ಶಶಿಧರ. ಆಶ್ರಫಲಿ ಗಡಾದ, ವಿರೂಪಾಕ್ಷಯ್ಯ ಗಂಧದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.