ಮರುಮೌಲ್ಯಮಾಪನ ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಸ್ಥಾನ

ಹುಬ್ಬಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಯ ಮರುಮೌಲ್ಯಮಾಪನದ ನಂತರ ಮೂರು ಅಂಕ ಹೆಚ್ಚು ಪಡೆದ ನಗರದ ಸಹನಾ ಹಿರೇಮನಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಶ್ರೇಯ ತನ್ನದಾಗಿಸಿಕೊಂಡಿದ್ದಾರೆ.
ಇಲ್ಲಿನ ಚೇತನಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾದ ಸಹನಾ ಮೊದಲು 625ಕ್ಕೆ 618 ಅಂಕ ಪಡೆದಿದ್ದಳು.
ಮರು ಮೌಲ್ಯಮಾಪನದ ನಂತರ ಗಣಿತ ವಿಷಯದಲ್ಲಿ 98 ಅಂಕಗಳ ಬದಲು 100 ಹಾಗೂ ಸಮಾಜ ವಿಜ್ಞಾನದಲ್ಲಿ 98ಕ್ಕೆ ಬದಲಾಗಿ 99 ಅಂಕ ಬಂದಿದೆ. ಇದರಿಂದ ಒಟ್ಟು ಅಂಕ 621ಕ್ಕೆ ಹೆಚ್ಚಳಗೊಂಡಿದ್ದು, ಧಾರವಾಡ ಜಿಲ್ಲೆಯಲ್ಲಿ ಎರಡನೇ ಸ್ಥಾನ ದೊರಕಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.