ಶನಿವಾರ, ಫೆಬ್ರವರಿ 27, 2021
28 °C
ಸೈಕಲ್‌ನಲ್ಲಿ ಶಾಲೆಗೆ ಹೋಗಲು ಪರಡಾಡುವ ಸ್ಥಿತಿ ವಿದ್ಯಾರ್ಥಿನಿಯರುದು

ಮಳೆಗೆ ಕೆಸರುಗದ್ದೆಯಾಗುವ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗೆ ಕೆಸರುಗದ್ದೆಯಾಗುವ ರಸ್ತೆ

ಶಿರಾ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆ ಹದಗೆಟ್ಟಿದೆ. ಮಳೆ ಬಂದರೆ ಸಂತೋಷ ಪಡಬೇಕು. ಆದರೆ ಇಲ್ಲಿ ಮಳೆ ಯಾಕಾದರೂ ಬರುತ್ತದೆ ಎಂದು ನಾಗರಿಕರು ಆಲಾಪಿಸುವಂತಾಗಿದೆ. ಕೆಸರು ಗದ್ದೆಯಾಗುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ.ತಾಲ್ಲೂಕಿನ ನೇಜಯಂತಿ ಗ್ರಾಮದಿಂದ ದ್ವಾರನಕುಂಟೆಗೆ ಹೋಗುವ ರಸ್ತೆಯ ಸ್ಥಿತಿಯಂತೂ ಕೇಳುವರಿಲ್ಲದಂತಾಗಿದೆ. ಹುಲಿಕುಂಟೆ ಹೋಬಳಿ ಗಡಿ ಗ್ರಾಮವಾದ ನೇಜಯಂತಿ ಗ್ರಾಮದಲ್ಲಿ ಹಿಂದುಳಿದ ವರ್ಗದವರು, ದಲಿತರು ಸೇರಿದಂತೆ ರೈತ ಕುಟುಂಬಗಳು ಹೆಚ್ಚಾಗಿ ವಾಸವಾಗಿವೆ.ಸುಮಾರು 800 ಜನಸಂಖ್ಯೆಯಿರುವ ಗ್ರಾಮದಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹಾಗೂ ಬಡ ರೋಗಿಗಳು ಚಿಕಿತ್ಸೆಗಾಗಿ ಈ ರಸ್ತೆಯ ಮೂಲಕವೇ ಸುಮಾರು 3 ಕಿ.ಮೀ ದೂರದಲ್ಲಿರುವ ದ್ವಾರನಕುಂಟೆ ಗ್ರಾಮಕ್ಕೆ ಹೋಗಬೇಕಿದ್ದು, ರಸ್ತೆ ಗುಂಡಿ ಬಿದ್ದಿರುವ ಕಾರಣ ದ್ವಿಚಕ್ರ ವಾಹನ, ಸೈಕಲ್‌ಗಳಲ್ಲಿ ಸಂಚರಿಸಲು ಪರದಾಡಬೇಕಿದೆ.ಆಸ್ಪತ್ರೆಗೆ ಹೋಗುವ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ತೀವ್ರ ತೊಂದರೆಯಾಗಿದ್ದು ತಕ್ಷಣ ಈ ರಸ್ತೆಯನ್ನು ಅಭಿವೃದ್ದಿಪಡಿಸಿ ಡಾಂಬರು ಹಾಕುವಂತೆ ಗ್ರಾಮಸ್ಥರು ಮತ್ತು ವಿಧ್ಯಾರ್ಥಿಗಳು ಒತ್ತಾಯಿಸಿದ್ದಾರೆ.ನೇಜಯಂತಿ– ದ್ವಾರನಕುಂಟೆ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದ್ದು ರಸ್ತೆಯ ಅವ್ಯವಸ್ಥೆಯ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ದೂರನ್ನು ಯಾರೂ ಕೇಳುವರಿಲ್ಲ ಎನ್ನುವುದು ಗ್ರಾಮಸ್ಥರ ದೂರಾಗಿದೆ.­

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.