ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಸೋಮವಾರ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು ರೈತರೆಲ್ಲ ಗುಳೆ ಹೋಗುತ್ತಿರುವಾಗ ಸೋಮವಾರ ಮಳೆ ಸುರಿದು ಆಶಾಭಾವನೆಯನ್ನು ಮೂಡಿಸಿದೆ.

ತಾಲ್ಲೂಕಿನಲ್ಲಿ ಸೋಮವಾರ ಸುರಿದ ಮಳೆಯ ಪ್ರಮಾಣ, ಕೂಡ್ಲಿಗಿ-33.6 ಮಿ.ಮೀ, ಗುಡೇಕೋಟೆ-14.6 ಮಿ.ಮೀ, ಹೊಸಹಳ್ಳಿ-33.6 ಮಿ.ಮೀ, ಕೊಟ್ಟೂರು-12.4 ಮಿ.ಮೀ, ಬಣವಿಕಲ್ಲು-9.9 ಮಿ.ಮೀ, ಚಿಕ್ಕಜೋಗಿಹಳ್ಳಿ-23.4 ಮಿ.ಮೀ.ನಷ್ಟು ಮಳೆ ಸುರಿದಿದೆ.

ತಾಲ್ಲೂಕಿನಲ್ಲಿ ರೈತರು ಈಗಾಗಲೇ ಶೇ 50ರಷ್ಟು ಬಿತ್ತನೆ ಮಾಡ್ದ್ದಿದು, ಇದೇ ರೀತಿಯಲ್ಲಿ ಮಳೆ ಸುರಿದರೆ ಬಿತ್ತನೆಯು ಮತ್ತಷ್ಟು ಚುರುಕುಗೊಳ್ಳುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ.ಚನ್ನಬಸಯ್ಯ ತಿಳಿಸಿದ್ದಾರೆ.

ಪ್ರಸ್ತುತ ಮೆಕ್ಕೆಜೋಳ, ಜೋಳ, ಸಜ್ಜೆ, ನವಣೆ, ಶೇಂಗಾ ಬೀಜ ಬಿತ್ತನೆ ಆರಂಭಗೊಳ್ಳುವುದು ಎಂದು ಅವರು ತಿಳಿಸಿದ್ದಾರೆ. ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ತಮ್ಮ ಬವಣೆ ನೀಗಿಸಲು ಮತ್ತಷ್ಟು ಮಳೆ ಸುರಿಯಲೆಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.