ಶನಿವಾರ, ಏಪ್ರಿಲ್ 10, 2021
33 °C

ಮಳೆ: ರೇಣುಕಾ ಸಾಗರಕ್ಕೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:ಜಲಾನಯನ ಪ್ರದೇಶಗಳಲ್ಲಿ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಅವಳಿ ನಗರದ ಜನರ `ಜೀವನಾಡಿ~ ರೇಣುಕಾ ಸಾಗರ ಜಲಾಶಯ ತುಂಬುವ ನಿರೀಕ್ಷೆ ಅಧಿಕಾರಿಗಲ್ಲಿ ಗರಿಗೆದರಿದೆ. ನೀರು ಹರಿದು ಬರುವ ಪ್ರಮಾಣದ ಮೇಲೆ ನಿಗಾ ಇಡುವಂತೆ ನೀರಾವರಿ ಇಲಾಖೆ ಸಿಬ್ಬಂದಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಮಲಪ್ರಭಾ ನದಿಯ ಜಲಾನಯನ ಪ್ರದೇಶವು ಬೆಳಗಾವಿ ಜಿಲ್ಲೆಯ ಖಾನಾಪುರ, ರಾಮದುರ್ಗದಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡದ ವರೆಗೂ ವ್ಯಾಪಿಸಿದೆ. ಇದರ ಒಟ್ಟು ವಿಸ್ತೀರ್ಣ 2,100 ಚದರ ಕಿ.ಮೀ.ಖಾನಾಪುರ ಹಾಗೂ ರಾಮದುರ್ಗದಲ್ಲಿ ಜೋರಾಗಿ ಮಳೆ ಸುರಿದರೆ ಮಲಪ್ರಭಾ ನದಿಯಲ್ಲಿ ನೀರು ಹೆಚ್ಚಾಗಿ ಜಲಾಶಯದ ಒಳಹರಿವು ಹೆಚ್ಚುತ್ತದೆ. ಖಾನಾಪುರದ ಕಣಕುಂಬಿ, ಗವ್ವಾಳಿ, ಜಾಂಬೋಟಿ, ಹೆಮ್ಮಡಗಾ ಹಾಗೂ ಭೀೀಮಗಡ ಪ್ರದೇಶಗಳಲ್ಲಿ ಸೋಮ ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಖಾನಾಪುರ, ಲೋಂಡಾ, ಗುಂಜಿ, ನಂದಗಡ, ಬೀಡಿ, ಕಕ್ಕೇರಿ, ಪಾರಿಶ್ವಾಡ ಮುಂತಾದ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಇದೆಲ್ಲದರ ಪರಿಣಾಮ 760 ಕ್ಯುಸೆಕ್ ನೀರು ಖಾನಾಪುರ ಮಾಪನ ಕೇಂದ್ರದಲ್ಲಿ ಸಂಗ್ರಹವಾಗಿದೆ ಎಂದು ನವಿಲುತೀರ್ಥ ಅನೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.`ಇನ್ನು ಎರಡು ದಿನಗಳಲ್ಲಿ ಜಲಾಶಯಕ್ಕೆ ನೀರು ಬಂದು ಸೇರುವ ಸಾಧ್ಯತೆ ಇದೆ. ಈಗ ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಕಳೆದ ಒಂದು ವಾರದಲ್ಲಿ ನೀರಿನ ಮಟ್ಟದಲ್ಲಿ ಕೇವಲ 0.4 ಅಡಿ ಇಳಿಮುಖವಾಗಿದೆ. ಈಗ ಸುರಿದಿರುವ ಮಳೆ ಭರವಸೆಯನ್ನು ತುಂಬಿದೆ. ಆದರೆ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ನೀರು ಬಿಡಬೇಕಾದರೆ ಇನ್ನಷ್ಟು ಮಳೆ ಬೀಳಬೇಕು~ ಎಂದು ಜಲ ಮಂಡಳಿಯ ಧಾರವಾಡ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದನಾಯಕ `ಪ್ರಜಾವಾಣಿ~ಗೆ ತಿಳಿಸಿದರು.    ರೇಣುಕಾ ಸಾಗರ ಜಲಾಶಯದ ಒಟ್ಟು ಸಾಮರ್ಥ್ಯ  38.7 ಟಿಎಂಸಿ. ಆದರೆ ಸಾಮಾನ್ಯವಾಗಿ 27 ಟಿಎಂಸಿ ನೀರು ಮಾತ್ರ ಇದರಲ್ಲಿ ತುಂಬುತ್ತದೆ. ಮುಂಗಾರು ಪೂರ್ವ ಮಳೆ ಕೈಕೊಟ್ಟ ಕಾರಣ ಕಳೆದ ವಾರ ಜಲಾಶಯದ ನೀರಿನ ಮಟ್ಟ 3 ಟಿಎಂಸಿಗೆ ಕುಸಿದಿತ್ತು.

 

ಈ ಕಾರಣದಿಂದ `ಕಂದಕ~ ತೋಡಿ ಜಾಕ್‌ವೆಲ್‌ಗೆ ನೀರನ್ನು ಎಳೆದುಕೊಂಡು ಹುಬ್ಬಳ್ಳಿ ನಗರಕ್ಕೆ ಪಂಪ್ ಮಾಡಲಾಗುತ್ತಿತ್ತು.ಇನ್ನಷ್ಟು ದಿನ ಮಳೆ ಮುನಿಸಿ ಕೊಂಡರೆ ಪರಿಸ್ಥಿತಿ ಇನ್ನೂ ಹದಗೆಡುವ ಆತಂಕದಲ್ಲಿದ್ದ ಅಧಿಕಾರಿ ಗಳು ಈಗ ನಿರಾಳವಾಗಿದ್ದಾರೆ..

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.