ಮಂಗಳವಾರ, ಮೇ 18, 2021
22 °C

ಮಹಮ್ಮೂದ್‌ಗೆ ಕೊನೆಗೂ ಲಭಿಸಿದ ವೀಸಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಹಾಲಿ (ಪಿಟಿಐ): ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಅಜರ್ ಮಹಮ್ಮೂದ್ ಅವರಿಗೆ ಐಪಿಎಲ್‌ನಲ್ಲಿ ಆಡಲು ಭಾರತಕ್ಕೆ ಆಗಮಿಸಲು ಕೊನೆಗೂ ವೀಸಾ ಲಭಿಸಿದೆ.

ಈ ವಿಷಯವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.ಮಹಮ್ಮೂದ್ ಕೂಡ ಇದೇ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ವೀಸಾ ಸಮಸ್ಯೆ ಕಾರಣ ಭಾರತಕ್ಕೆ ಆಗಮಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ವಿಶೇಷವೆಂದರೆ ಐಪಿಎಲ್‌ನಲ್ಲಿ ಆಡುತ್ತಿರುವ ಪಾಕಿಸ್ತಾನ ಮೂಲದ ಏಕೈಕ ಆಟಗಾರ ಅವರಾಗಿದ್ದಾರೆ.`ಮಹಮ್ಮೂದ್‌ಗೆ ವೀಸಾ ಲಭಿಸಿದೆ. ಅವರು ಶೀಘ್ರದಲ್ಲೇ ತಂಡ ಸೇರಲಿದ್ದಾರೆ~ ಎಂದು ಗಿಲ್‌ಕ್ರಿಸ್ಟ್ ಸ್ಪಷ್ಟಪಡಿಸಿದ್ದಾರೆ.ಮಹಮ್ಮೂದ್ 21 ಟೆಸ್ಟ್ ಹಾಗೂ 143 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಅವರು ಇಂಗ್ಲೆಂಡ್ ಪೌರತ್ವ ಪಡೆದು ಅಲ್ಲಿಯೇ ನೆಲೆಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಅವರು ಒಂದು ಕೋಟಿ ರೂಪಾಯಿಗೆ ಕಿಂಗ್ಸ್ ಇಲೆವೆನ್ ಪಾಲಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.