ಮುಂಬೈ (ಐಎಎನ್ಎಸ್): ಮಹಾರಾಷ್ಟ್ರದ ಕೆಲವೆಡೆ ಈಶಾನ್ಯ ರಾಜ್ಯಗಳ ಜನರ ಮೇಲೆ ನಡೆದ ಹಲ್ಲೆಯ ಘಟನೆಗಳಿಂದಾಗಿ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳ ಜನ 1 ವಾರದಿಂದ ತವರು ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ, ಪುಣೆ ಹಾಗೂ ನಾಸಿಕ್ಗಳಿಂದ 1,500ಕ್ಕೂ ಹೆಚ್ಚು ಜನ ತವರು ರಾಜ್ಯಗಳಿಗೆ ಮರಳಿದ್ದಾರೆ ಎನ್ನಲಾಗಿದೆ. ಮೊಬೈಲ್ ಸಂದೇಶಗಳಿಂದ ಈ ಜನ ಭಯಭೀತಿಗೆ ಒಳಗಾಗಿದ್ದಾರೆ ಎಂದು ಪುಣೆ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಹೈದರಾಬಾದ್ವರದಿ: ಆಂಧ್ರಪ್ರದೇಶದ ವಿವಿಧೆಡೆಯಿಂದ ಕೋಲ್ಕತ್ತ ಹಾಗೂ ಈಶಾನ್ಯ ರಾಜ್ಯಗಳತ್ತ ಹೊರಡುವ ರೈಲುಗಳು ಕಳೆದ ಮೂರು ದಿನಗಳಿಂದ ತುಂಬಿ ತುಳುಕುತ್ತಿದ್ದು, ಸಾಮೂಹಿಕ ವಲಸೆ ನಿರಂತರವಾಗಿ ಮುಂದುವರೆದಿದೆ.

ಶನಿವಾರದ ಮುಂಬೈ ಹಿಂಸಾಚಾರದಿಂದಾಗಿ ಹೈದರಾಬಾದ್, ವಿಶಾಖಪಟ್ಟಣ ಹಾಗೂ ಇತರ ಕರಾವಳಿ ಪ್ರದೇಶದಲ್ಲಿ ನೆಲೆಸಿರುವ ಅಸ್ಸಾಂನ ಕೂಲಿ ಕಾರ್ಮಿಕರಲ್ಲಿ ಭಯ ಆವರಿಸಿದ್ದು ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.