ಮಹಿಳಾ ಅಲ್ ಖೈದಾಗೆ ಶಿಕ್ಷೆ

7

ಮಹಿಳಾ ಅಲ್ ಖೈದಾಗೆ ಶಿಕ್ಷೆ

Published:
Updated:

ದುಬೈ, (ಪಿಟಿಐ): ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಸೌದಿ ಅರೇಬಿಯಾದ ಮಹಿಳೆಯೊಬ್ಬರಿಗೆ ಇದೇ ಮೊದಲ ಬಾರಿಗೆ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.`ಮಹಿಳಾ ಅಲ್ ಖೈದಾ~ ಎಂದೇ ಹೆಸರುವಾಸಿಯಾಗಿದ್ದ 37ರ ಹರೆಯದ ಹೈಲಾ ಅಲ್- ಖಸೀರ್‌ಗೆ ರಿಯಾದ್‌ನ ವಿಶೇಷ ಕ್ರಿಮಿನಲ್ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕವೂ ವಿದೇಶ ಯಾತ್ರೆ ಕೈಗೊಳ್ಳುವುದಕ್ಕೆ ಅವರಿಗೆ ನಿಷೇಧ ಹೇರಲಾಗಿದೆ. ಭಯೋತ್ಪಾದಕರಿಗೆ ಆಶ್ರಯ ನೀಡಿಕೆ, ಭಯೋತ್ಪಾದನಾ ದಾಳಿ ನಡೆಸುವಂತೆ ಉತ್ತೇಜನ ನೀಡುವುದು, ಪರವಾನಗಿ ಇಲ್ಲದೆ ಬಂದೂಕು ಹೊಂದಿರುವುದಲ್ಲದೆ ಭದ್ರತಾ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಅವುಗಳನ್ನು ನೀಡಿರುವುದು ಮುಂತಾದ ಆರೋಪಗಳು ವಿಚಾರಣೆಯ ವೇಳೆ ಸಾಬೀತಾದ ಹಿನ್ನೆಲೆಯಲ್ಲಿ ಹೈಲಾ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry