ಮೈಸೂರು: ಮಹಿಳೆ ಅಬಲೆಯಲ್ಲ; ಯಾವುದೂ ಆಕೆಗೆ ಅಸಾಧ್ಯವಲ್ಲ. ಸಮಾನತೆ, ಸ್ವಾತಂತ್ರ್ಯ, ಛಲ ಇದ್ದರೆ ಗುರಿ ಸಾಧನೆ ಸುಸೂತ್ರ. `ಶೌಟ್~ (ಧ್ವನಿ ಎತ್ತಿ) ಮಾರ್ಗ ಅನುಸರಿಸಿ ಸಾಧನೆ ಮೆರೆದು ಸಾಧಕಿಯರಾಗಿರಿ.

-ಇದು ಅಮೆರಿಕದ ವಿದ್ಯಾರ್ಥಿನಿ ಸಂಗೀತಾ ರಾಜನ್ ಅವರು ಮೈಸೂರಿನ ಸದ್ವಿದ್ಯಾ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ `ಮಹಿಳಾ ಸಬಲೀಕರಣ ಉಪನ್ಯಾಸ~ ದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿನಿಯರಿಗೆ ನೀಡಿದ ಸಲಹೆ.

16ರ ಹರೆಯದ ಈ ಯುವತಿಯ ಚೇತೋಹಾರಿ ನುಡಿಗಳು ಹಿರಿಯರನ್ನು ಬೆರಗುಗೊಳಿಸಿದವು. `ಶೌಟ್ (ಖಏಖಿ) ಪದಕ್ಕೆ ಈಕೆ ನೀಡಿದ ತಾತ್ಪರ್ಯ

ಖ(ಛಿ ್ಠ) ಮಾತನಾಡಿ: `ಶಕ್ತಿಶಾಲಿಗಳು ಹೂಂಕರಿಸಿದ್ದನ್ನು ಜಗತ್ತು ಆಲಿಸುತ್ತದೆ~ ಎಂಬುದನ್ನು ಮೊದಲು ಅರಿಯಿರಿ. ಹೆಣ್ಣುಮಕ್ಕಳು ಕೀಳರಿಮೆ ತೊರೆದು ಮಾತನಾಡುವ ಕಲೆ ರೂಢಿಸಿಕೊಂಡು ಸಾರ್ವಜನಿಕ ರಂಗದಲ್ಲಿ ತೊಡಗಿಸಿಕೊಳ್ಳ ಬೇಕು. ಸಂಸ್ಕೃತಿಗೆ ದಕ್ಕೆಯಾಗದಂತೆ ಗೊಡ್ಡು ಸಂಪ್ರದಾಯಗಳಿಗೆ ವಿದಾಯ ಹೇಳಿ. ಆಸಕ್ತ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮೆರೆಯಬೇಕು. ಅರ್ಹತೆ ಇದ್ದಾಗ ಅವಕಾಶಗಳು ಒದಗಿ ಬರುತ್ತವೆ. `ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ~ ನಾಣ್ಣುಡಿ ತಿಳಿದಿದ್ದರೆ ಜಗತ್ತಿನಲ್ಲಿ ಮಾತುಗಾರಿಕೆಯ ಮಹತ್ವ ಏನು ಎಂಬುದು ತಿಳಿಯುತ್ತದೆ.

ಏ(ಛ್ಝಿ ಟ್ಠಠಿ) ಸಹಾಯ ಮಾಡಿರಿ: ಪ್ರತಿ ಮಹಿಳೆಯಲ್ಲೂ ವಿಶೇಷ ಸಾಮಥ್ಯ, ಕೌಶಲ ಇದ್ದೇ ಇರುತ್ತದೆ. ಅವುಗಳ ಅನಾವರಣಕ್ಕೆ ವೇದಿಕೆ ದೊರಕಿಸಿಕೊಳ್ಳುವುದೇ ಜಾಣ್ಮೆ. ಹೆಣ್ಣಿಗೆ ಹೆಣ್ಣೇ ಶತ್ರುವಾಗದೆ ನಾರಿಯ ಅಭಿವೃದ್ಧಿಗೆ ನಾರಿಯೇ ಸಹಕಾರಿ ಆಗಬೇಕು. ಶಾಂತಿಗಾಗಿ ನೊಬೆಲ್ ಪುರಸ್ಕೃತ ಆಂಗ್ಸಾನ್ ಸೂಕಿ, ಮ್ಯಾಗ್ಸೆಸೆ ಪುರಸ್ಕೃತ ಕಿರಣ್ ಬೇಡಿ, ಉದ್ಯಮಿ ಕಿರಣ್ ಮಜುಂದಾರ್ ಷಾ ಮುಂತಾದ ಸಾಧಕಿಯರ ಯಶೋಗಾಥೆಗಳು ಯಶಸ್ಸಿಗೆ ಸ್ಫೂರ್ತಿಯಾಗಬೇಕು. ಸಹಕಾರ ತತ್ವ ಸಕಲ ಪ್ರಗತಿಯ ಸೂತ್ರ.

(ಟಛ್ಟ್ಚಿಟಞಛಿ) ಮೆಟ್ಟಿನಿಲ್ಲುವ ಗುಣ: ಪ್ರತಿಯೊಬ್ಬರಿಗೂ ಜೀವನದಲ್ಲಿ ಅಡೆತಡೆಗಳು ಇದ್ದೇ ಇರುತ್ತವೆ. ಕಷ್ಟಗಳನ್ನು ಮೆಟ್ಟಿನಿಲ್ಲುವ ಉಮೇದನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ತಿಳಿದಿರಬೇಕು. ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಕೊರತೆಯನ್ನು ದೌರ್ಬಲ್ಯ ಎಂದುಕೊಳ್ಳದೇ ಅದನ್ನೇ ಸಾಧನೆಯ ಅಸ್ತ್ರವಾಗಿ ಬಳಸಿಕೊಂಡು ಯಶಸ್ಸು ಗಳಿಸಬೇಕು.

ಖಿ(್ಠ್ಞಜ್ಛಿ)ಒಗ್ಗೂಡಿ: `ಒಗ್ಗಟ್ಟಿನಲ್ಲಿ ಬಲವಿದೆ~ ನಾಣ್ಣುಡಿ ಸಂಘಟನೆಯ ಮಹತ್ವ ತಿಳಿಸುತ್ತದೆ. ಯಾವುದೇ ಕೆಲಸವನ್ನು ಒಟ್ಟಾಗಿ ಮಾಡಿದಾಗ ಫಲಿತಾಂಶ ಹೆಚ್ಚು ಪರಿಣಾಮಕಾರಿ ಯಾಗಿರುತ್ತದೆ. ಹೋರಾಟಗಳು ಇದಕ್ಕೆ ಹೊರತಲ್ಲ. ಮಹಿಳೆ ಯರಿಗೆ ಸಕಲ ಕ್ಷೇತ್ರಗಳಲ್ಲೂ ಅವಕಾಶಗಳು ದೊರಕುತ್ತಿರುವುದು ಮಹಿಳಾಮಣಿಗಳ ಸಂಘಟಿತ ಹೋರಾಟದ ಫಲ.

(ಠಿಛಿ ಚ್ಚಠಿಜಿಟ್ಞ) ಕಾರ್ಯೋನ್ಮುಖರಾಗಿ: ಆಲೋಚನೆ ಗಳು, ಯೋಜನೆಗಳನ್ನು ಅನುಷ್ಠಾನಕ್ಕೆ ತನ್ನಿ, ಸಫಲರಾಗಿ. ಯೋಚನೆ-ಯೋಜನೆಗಳ ಕಾರ್ಯಗತಕ್ಕೆ ಅಗತ್ಯ ಇರುವ ಸೌಲಭ್ಯಗಳನ್ನು ಧೈರ್ಯದಿಂದ ಪಡೆದುಕೊಳ್ಳಿ. ಅರ್ಧದಲ್ಲೇ ಕೆಲಸವನ್ನು ನಿಲ್ಲಿಸದಿರಿ.

ಮಹಿಳೆಯರು ವಾಸಿಸಲು ಸುರಕ್ಷಿತವಲ್ಲದ ರಾಷ್ಟ್ರಗಳಲ್ಲಿ ಮೊದಲ ಸ್ಥಾನವನ್ನು ಆಫ್ಘಾನಿಸ್ತಾನ ಪಡೆದರೆ ಭಾರತಕ್ಕೆ ನಾಲ್ಕನೇ ಸ್ಥಾನ. ಜಗತ್ತಿಲ್ಲಿ ಇಂದಿಗೂ ಶೇ 70 ಮಹಿಳೆಯರು ಬಡತನದಲ್ಲೇ ಜೀವಿಸುತ್ತಿದ್ದಾರೆ. ಶೇ 67 ವನಿತೆಯರು ಅನಕ್ಷರಸ್ಥರಾಗಿದ್ದಾರೆ. ಮಹಿಳೆಯರಲ್ಲಿನ ಹಿಂಜರಿಕೆ, ದೌರ್ಬಲ್ಯ, ಸಂಘಟನೆಯ ಕೊರತೆಗಳೇ ಈ ಸಮಸ್ಯೆಗಳಿಗೆ ಕಾರಣ.

ಮಹಿಳೆಯರು ಶಿಕ್ಷಣ ಪಡೆದು, ಸ್ವಾವಲಂಬಿಗಳಾಗಿ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಗುಣ ಬೆಳೆಸಿಕೊಳ್ಳುವುದೇ ಸಬಲೀಕರಣದ ಹಾದಿ ಎಂದು `ಅಮೆರಿಕನ್ನಡತಿ~ ಸಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.