ಸೋಮವಾರ, ಮೇ 17, 2021
22 °C

ಮಾಜಿ ಸಚಿವೆಗೆ ಜೈಲಿನಲ್ಲಿ ಗಣ್ಯರ ಆತಿಥ್ಯ: ವಿಚಾರಣೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಐಎಎನ್‌ಎಸ್): ಪಂಜಾಬ್‌ನ ಮಾಜಿ ಸಚಿವೆ ಜಾಗಿರ್ ಕೌರ್ ಅವರಿಗೆ ಜೈಲಿನಲ್ಲಿ ಗಣ್ಯರ ಆತಿಥ್ಯ ನೀಡಿರುವ ಬಗ್ಗೆ ವಿಚಾರಣೆ ನಡೆಸುವಂತೆ ಕಾರಾಗೃಹ ವಿಭಾಗದ ಡಿಜಿಪಿ ಮಂಗಳವಾರ ಆದೇಶಿಸಿದ್ದಾರೆ.

`ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವರಿಗೆ ವಿಶೇಷ ಆತಿಥ್ಯ ನೀಡಿರುವ ಬಗ್ಗೆ ವಿವರಣೆ ನೀಡುವಂತೆ  ಕಪುರ್ತಲಾ ಜೈಲು ಅಧಿಕಾರಿಗೆ ಸೂಚನೆ ನೀಡಲಾಗಿದೆ ಮತ್ತು ಈ ಪ್ರಕರಣ ಕುರಿತು ವಿಚಾರಣೆ ನಡೆಸಲು ಹಿರಿಯ ಅಧಿಕಾರಿಯೊಬ್ಬರನ್ನು ಅಲ್ಲಿಗೆ ಕಳುಹಿಸಲಾಗಿದೆ~ ಎಂದು ಡಿಜಿಪಿ ಶಶಿಕಾಂತ್ ತಿಳಿಸಿದ್ದಾರೆ.

ಜಾಗಿರ್ ಕೌರ್ ಅವರ ಮಗಳು ಹರ್‌ಪ್ರೀತ್ ಕೌರ್ (19) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲಾದ ಸಿಬಿಐ ವಿಶೇಷ ನ್ಯಾಯಾಲಯವು ಜಾಗಿರ್ ಕೌರ್ ಅವರಿಗೆ  ಶುಕ್ರವಾರ ಐದು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. ಜಾಗಿರ್ ಕೌರ್ ಅವರ ವಿರುದ್ಧ ಕೊಲೆ ಸೇರಿದಂತೆ ಮಗಳಿಗೆ ಬಲವಂತದ ಗರ್ಭಪಾತ, ಕಾನೂನು ಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದು, ಅಪಹರಣದಂತಹ ಗಂಭೀರ ಆಪಾದನೆಗಳು ಇದ್ದವು.  ನ್ಯಾಯಾಲಯವು ಅವರನ್ನು ಕೊಲೆ ಆರೋಪದಿಂದ ಮುಕ್ತ ಮಾಡಿದೆ.

ಶಿಕ್ಷೆಗೆ ಗುರಿಯಾದ ಜಾಗಿರ್ ಕೌರ್, ಗ್ರಾಮೀಣ ನೀರು ಪೂರೈಕೆ ಮತ್ತು ಒಳಚರಂಡಿ, ರಕ್ಷಣಾ ಸಿಬ್ಬಂದಿ ಕಲ್ಯಾಣ ಇಲಾಖೆಯ ಸಂಪುಟ ದರ್ಜೆ  ಸಚಿವ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದರು. ಇವರು ಬದಾಲ್ ಅವರ ಸಂಪುಟದಲ್ಲಿದ್ದ ಏಕೈಕ ಮಹಿಳೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.