ಹೊಳಲ್ಕೆರೆ ತಾಲ್ಲೂಕಿನ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ನಾನೇನೋ ವೇಳೆಗೆ ಸರಿಯಾಗಿ ಹಾಜರಿದ್ದೆ. ಕೆಲವರು ಧಾರ್ಮಿಕರು ತಡವಾಗಿ ಬರುತ್ತಿದ್ದರು. ಬಂದಾಗಲೆಲ್ಲ ಅವರನ್ನು ವಾದ್ಯಗಳೊಂದಿಗೆ ಬರಮಾಡಿ ಕೊಳ್ಳಲಾಗುತ್ತಿತ್ತು. ವೇದಿಕೆಯನ್ನು ಖಾಲಿ ಬಿಡುವಂತೆ ಇರಲಿಲ್ಲ.

ಸಮಾರಂಭವನ್ನು ಶುರು ಮಾಡಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಈ ಸನ್ನಿವೇಶದಲ್ಲಿ ಮೈಕ್ ತರಿಸಿಕೊಂಡು ನಾನೇ ಚಿಂತನೆ ನೀಡಲು ಮುಂದಾದೆ. ಬರಬೇಕಾಗಿದ್ದ ಎಲ್ಲ ಧಾರ್ಮಿಕರು ಬಂದರು. ನನ್ನ ನಂತರ ನನ್ನ ಅಕ್ಕಪಕ್ಕದ ಧಾರ್ಮಿಕರು ಹಿತವಚನ ನೀಡಿದರು. ಮಧ್ಯೆ ಮಧ್ಯೆ ಕೆಲ ಸ್ಥಳೀಯ ಮುಖಂಡರಿಗೂ ಅವಕಾಶ ನೀಡುತ್ತಿದ್ದರು. ಕೊನೆಯಲ್ಲಿ ಮೂರು ಜನ ಧಾರ್ಮಿಕರು ಉಳಿದರು. ಕಾರ್ಯಕರ್ತರು ಆ ಮೂವರಲ್ಲಿ ಒಬ್ಬ ಧಾರ್ಮಿಕರ ಹೆಸರನ್ನು ಪ್ರಕಟಿಸಿದರು. ಅವರು, ‘ನನ್ನ ಭಾಷಣದ ಕೊನೆಯಲ್ಲಿ ಬರುತ್ತದೆಂದು ಕಾರ್ಯಕರ್ತರು ಹೇಳಿದ್ದರು’ ಎಂದು ಅಸಮಾಧಾನಪಟ್ಟರು.

ಯಾವುದೇ ಧಾರ್ಮಿಕರ ಹಿಂದಿರುವ ಕಾರ್ಯಕರ್ತರು ತಮ್ಮ ಧಾರ್ಮಿಕ ನೇತಾರನ ಹಿತದ ಕಡೆಗೆ ಮಾತ್ರ ಗಮನವಿರುತ್ತದೆ. ಅವರನ್ನು ಬಿಟ್ಟು ಇನ್ನೊಬ್ಬರತ್ತ ಗಮನ ಹರಿಸುವುದಿಲ್ಲ. ಅವರ ಮುಖಂಡರ ಬಗೆಗೆ ಕಾಳಜಿ ಇರಬೇಕು ನಿಜ, ಆದರೆ ಇನ್ನೊಬ್ಬರ ಭಾವನೆಗಳನ್ನು ಗೌರವಿಸಬೇಕು ಮತ್ತು ಎಲ್ಲರಂತೆ ನಮ್ಮ ಮುಖಂಡರೆಂದು ಅವರು ತಿಳಿದುಕೊಳ್ಳಬೇಕಾಗುತ್ತದೆ. ಮುಖಂಡರು ಮೊದಲನೆಯದಾಗಿ ಇಂಥ ಅಸಮತೋಲನೆಗೆ ಒಳಗಾಗಬಾರದು; ಅಸಮತೋಲನದ ಸಂದರ್ಭವನ್ನು ಸಮತೋಲನಕ್ಕೆ ತರುವ ಜವಾಬ್ದಾರಿ ಅವರ ಮೇಲಿರುತ್ತದೆ. ಹೀಗೆ ಮುಖಂಡರೇ ಅಸಮತೋಲನಕ್ಕೆ ಒಳಗಾದರೆ, ಅವರ ಅಭಿಮಾನಿಗಳು ಅದನ್ನೇ ಸಮರ್ಥಿಸುತ್ತ ಹೋಗುತ್ತಾರೆ.

ಇದು ಸರಿಯಲ್ಲ; ಇಂಥ ತಪ್ಪುಗಳು ಆಗಬಾರದೆಂಬ ಕನಿಷ್ಠ ಜ್ಞಾನ ಇರಬೇಕಾಗುತ್ತದೆ. ‘ನಮ್ಮ ಮುಖಂಡರೇ ಸುಪ್ರೀಂ. ಅವರು ಎಲ್ಲರ ಮೇಲೆ; ಅವರ ನಂತರ ಎಲ್ಲರು’ ಈ ತೆರನಾದ ಧೋರಣೆ ಸೂಕ್ತವಲ್ಲ. ಅವರದೇ ಆದ ಕಾರ್ಯಕ್ರಮದಲ್ಲಿ ಅವರೇ ಸುಪ್ರೀಮ್. ಆದರೆ ಇನ್ನೊಂದು ಸಮಾರಂಭಕ್ಕೆ ಹೋದಾಗ ‘ಎಲ್ಲರಲ್ಲಿ ನಾನೊಬ್ಬ’ನೆಂಬ ಭಾವನೆ ಇರಬೇಕಲ್ಲವೆ? ನಾಲ್ಕೈದು ಜನ ಸಮಾನ ಮುಖಂಡರು ಸೇರಿದ್ದಾಗ ನಮ್ಮ ಮುಖಂಡರೇ ಅಂತಿಮ; ಅವರೇ ಹೆಚ್ಚು; ಇತರರು ಕಡಿಮೆಯೆಂಬ ಧೋರಣೆ ಸಮಂಜಸವಲ್ಲ.

ಕಾರ್ಯಕರ್ತರು ತಮ್ಮ ಮುಖಂಡರನ್ನು ಮೆಚ್ಚಿಸಲು ಒಮ್ಮೊಮ್ಮೆ ಇಂಥ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅಂಥ ಪ್ರಸಂಗಗಳಲ್ಲಿ ಅವರ ನೇತಾರರು, ‘ನೀನು ನನಗೆ ವಿಶೇಷ ಸ್ಥಾನಮಾನ ನೀಡಿ, ಬೇರೆಯವರನ್ನು ಅಲಕ್ಷಿಸುವುದು ಸರಿಯಲ್ಲ’ವೆಂದು ತಿಳಿಹೇಳಬೇಕಾಗುತ್ತದೆ. ಇಂಥ ತಪ್ಪುಗಳು ಮುಖಂಡರಲ್ಲಿ ವಿಶಾಲಭಾವನೆ ಇಲ್ಲದಿದ್ದಾಗ ಸಂಭವಿಸುತ್ತವೆ. ಪಕ್ವತೆಯ ಕೊರತೆ. ಪಕ್ವತೆ ಇಲ್ಲದಿರುವುದರಿಂದ ಅದು ಮತ್ತೆ ಮತ್ತೆ ತನ್ನನ್ನೇ ಕೇಂದ್ರೀಕರಿಸುತ್ತ ಹೋಗುತ್ತದೆ. ಅಪಕ್ವತೆಗೆ ಕಾರಣವೆಂದರೆ, ಅಜ್ಞಾನ. ಅಪಕ್ವತೆ ಮತ್ತು ಅಜ್ಞಾನ ಎರಡೂ ಸಮ್ಮಿಳಿತವಾದಾಗ ಅಪರಿಪೂರ್ಣತೆ.ಅಪರಿಪೂರ್ಣತೆಯಿಂದಾಗಿ ಬದುಕು ಪೂರ್ಣ ಆಗುವುದಿಲ್ಲ. ಪೂರ್ಣತ್ವವೇ ಬದುಕು. ಒಂದಿಲ್ಲೊಂದು ಅಭಾವವು ಬದುಕನ್ನು ಕಾಡುತ್ತಲೇ ಇರುತ್ತದೆ. ತುಂಬ ಅಗತ್ಯವಾದುದನ್ನು ನೀಗಿಸಿಕೊಳ್ಳಬಹುದು. ಆದರೆ ಪರಿಪೂರ್ಣತೆಯ ಅಭಾವವನ್ನು ನಿವಾರಿಸಿಕೊಳ್ಳುವುದು ಸುಲಭವಲ್ಲ.

ಅನುಭವದಿಂದ ಪರಿಪೂರ್ಣತೆಯು ಪ್ರಾಪ್ತವಾಗುತ್ತದೆ. ಜೀವನಾನುಭವವು ಅನನ್ಯವಾದದ್ದು. ಅನುಭವದ ಹರಹು ಅವಿವೇಕವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ‘ನಾನು ಕೊನೆಗೇ ಮಾತನಾಡಬೇಕು’ ಎಂಬುದು ಅನುಭವಜ್ಞಾನವಲ್ಲ; ಅನನುಭವ. ಅನನುಭವವು ಸಮಯ ಸಿಕ್ಕಾಗೆಲ್ಲ ಅಜ್ಞಾನವನ್ನು ಪ್ರಕಟ ಮಾಡುತ್ತಾ ಹೋಗುತ್ತದೆ. ಕೊನೆಯಲ್ಲಿ ಮಾತನಾಡುವವರೆಲ್ಲ ದಿವ್ಯ ಜ್ಞಾನಿಗಳಲ್ಲ; ಮೊದಲು ಮಾತನಾಡುವವರೆಲ್ಲ ಅಜ್ಞಾನಿಗಳಲ್ಲ.

ಇಲ್ಲಿ ಒಂದು ಅಂಶವನ್ನು ಗಮನಿಸಬಹುದು. ಮೆದುಳು, ಇಡೀ ಮಾನವ ಶರೀರದ ಮೇನ್ಚಿಪ್ (ಪ್ರಮುಖ ಭಾಗ). ಅದು ಒಂದು ಹಂತದಲ್ಲಿ ರಿಮೋಟ್ ಕಂಟ್ರೋಲರ್ನಂತೆ ಕಾರ್ಯ ನಿರ್ವಹಿಸಬಲ್ಲುದು. ರೋಬೋಟ್ನಂತೆ ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡಬಲ್ಲದು. ವಿಮಾನ ನಿಲ್ದಾಣದಲ್ಲಿ ಕಾಣಬರುವ ಕಂಟ್ರೋಲ್ ಪಾಯಿಂಟ್ನಂತೆ ನಾಲ್ಕು ದಿಕ್ಕಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿ, ಸಂಬಂಧಪಟ್ಟ ಇಂದ್ರಿಯಗಳಿಗೆ ನಿರ್ದೇಶಿಸಬಲ್ಲುದು. ಮೆದುಳು ಅಂಥ ಅಗಾಧವಾದ ಆಲೋಚನಾಶಕ್ತಿ, ಸ್ಮರಣಶಕ್ತಿ, ನಿಯಂತ್ರಣ ಮತ್ತು ಶಕ್ತಿಯ ಕೇಂದ್ರ, ಇಂಥ ಶಕ್ತಿಗಳು ತನ್ನಲ್ಲಿವೆ ಎಂದು ಸುಮ್ಮನೆ ಕುಳಿತರೆ ಆಗದು. ಅವುಗಳನ್ನು ಸಚೇತನಗೊಳಿಸಬೇಕಾಗುತ್ತದೆ; ಕಾರ್ಯೋನ್ಮುಖಗೊಳಿಸಬೇಕಾಗುತ್ತದೆ.

ಮುಖ್ಯವಾಗಿ ಈ ಬಗ್ಗೆ ಅರಿವು ಇರಬೇಕಾಗುತ್ತದೆ. ಇಂಥ ಅದ್ವಿತೀಯ ಮೇಧಾಶಕ್ತಿಯನ್ನು ತನ್ನ ಬಳಿ ಇಟ್ಟುಕೊಂಡಿರುವ ಮಾನವ ಕೆಲವೊಮ್ಮೆ ವಿಚಾರಗಳಿಗಾಗಿ ತಡಕಾಡುತ್ತಾನೆ. ವಿಚಾರಗಳನ್ನು ಚಿಮ್ಮುತ್ತಿರುವ ಮೆದುಳೆಂಬ ಚಿಲುಮೆಯು ತನ್ನ ಬಳಿ ಇರುವಾಗ ಅವನು ಚಡಪಡಿಸುತ್ತಾನೆ ಏಕೆ ಎಂಬ ಪ್ರಶ್ನೆ, ಅದಕ್ಕೆ ಸಾಧನೆ ಬೇಕಾಗುತ್ತದೆ. ಸತ್ಚಿಂತನೆಯ ಒಲವು ಇರಬೇಕಾಗುತ್ತದೆ. ಈತ ನಿರುಪದ್ರವಿ, ನಿಸ್ವಾರ್ಥಿಯೆಂಬ ಭಾವನೆ ಉದಯವಾದರೆ ಅದು ಸದಾ ಜಾಗೃತ. ಇಲ್ಲದಿದ್ದರೆ ತಟಸ್ಥ.

ಅಪ್ರತಿಮ ಮೆದುಳು ಮಾನವನದು. ಅದನ್ನು ವಿಘ್ನ ಸಂತೋಷಕ್ಕೆ ಬಳಸುತ್ತ ಹೋದರೆ, ಅದರ ಶಕ್ತಿ ಕುಂದುತ್ತದೆ. ಲೋಕೋಪಕಾರಕ್ಕೆ ಬಳಸಿದರೆ, ಅದೊಂದು ಅದ್ಭುತ ಶಕ್ತಿ. ಮೆದುಳಿನ ಮತ್ತೊಂದು ವೈಖರಿಯೆಂದರೆ, ತಾನಿರುವ ಸಮಯ ಮತ್ತು ಸಂದರ್ಭವನ್ನು ಅದು ಅಧ್ಯಯನ ನಡೆಸಿ, ಸೂಕ್ತವಾದ ವಿಚಾರ ವಾಹಿನಿಯನ್ನು ಆ ಸಂದರ್ಭದಲ್ಲಿ ನೀಡಿ, ಯಶಸ್ಸಿಗೆ ಕಾರಣವಾಗುತ್ತದೆ. ಒಬ್ಬಿಬ್ಬರು ಮಾತನಾಡಿದ ನಂತರದಲ್ಲಿ ಅಂದರೆ, ಅವರು ಮಾತನಾಡಿದ ವಿಚಾರಗಳನ್ನೇ ತೆಗೆದುಕೊಂಡು ಮಾತನಾಡಿದರಾಯಿತೆಂದು ಕೆಲವರು ಹಾಗೇ ಕುಳಿತಿರುತ್ತಾನೆ. ಅಂಥವರ ಮೆದುಳು ಇನ್ನೊಬ್ಬರ ವಿಚಾರಗಳಿಂದ ಸ್ಫೂರ್ತಿ ಪಡೆಯಬೇಕಾಗುತ್ತದೆ. ಇಲ್ಲದಿದ್ದರೆ ಹಳೆಯ ವಿಚಾರಗಳನ್ನೇ ಮತ್ತೆ ಮತ್ತೆ ಪ್ರಸ್ತಾಪಿಸುತ್ತ ಹೋಗಬೇಕಾಗುತ್ತದೆ. ಅವಕಾಶಕ್ಕಾಗಿ ಕಾಯುವುದು ಮುಖ್ಯವಲ್ಲ; ಸಿಕ್ಕ ಅವಕಾಶಗಳನ್ನು ತನ್ನ ಬಳಕೆ ಮಾಡಿಕೊಳ್ಳುವವರೇ ದೊಡ್ಡವರು. ವಿಳಂಬ ಮಾಡುವುದರಿಂದ ಸಮಯ ವ್ಯರ್ಥ.

‘ಯಾವಾಗ ಕೊಟ್ಟರೂ ನಾನು ಮಾತನಾಡಲು ಸಮರ್ಥನಿದ್ದೇನೆ’ ಎಂಬ ವಿಶ್ವಾಸ ನಮ್ಮಲ್ಲಿ ಬೆಳೆಯಬೇಕಾಗುತ್ತದೆ. ಯಾವಾಗ ಯಾವ ಜವಾಬ್ದಾರಿಯನ್ನು ಕೊಡಮಾಡಿದರೂ ನಿರ್ವಹಿಸಬಲ್ಲನೆಂಬ ಭರವಸೆ ಇರಬೇಕಾಗುತ್ತದೆ. ಬದುಕಿನಲ್ಲಿ ಬರುವ ಹಲವು ಸಂದರ್ಭಗಳನ್ನು ಎದುರಿಸಲು ನಾವು ಸದಾ ಸಿದ್ಧರಿರಬೇಕಾಗುತ್ತದೆ. ಅಂಥ ಸ್ಥಿತಿ ಪ್ರಾಪ್ತವಾದರೆ, ಹತ್ತು - ಹಲವು ಲೋಕೋತ್ತರ ಕಾರ್ಯಗಳನ್ನು ರುಜು ಮಾಡಿ ತೋರಿಸಬಹುದು. ಸಂಕಟದಲ್ಲಿಯೂ ಸಂತೋಷವಾಗಿರಲು ಯತ್ನಿಸಬೇಕು. ಅದುವೇ ದೊಡ್ಡ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.