ಗರ್ಭಾವಸ್ಥೆಯಲ್ಲಿ ಮಧುಮೇಹ ಎಂದೊಡನೆಯೇ ಹಲವರ ಹುಬ್ಬೇರುತ್ತದೆ. ಸಂಶಯ, ಅನುಮಾನ, ಚಿಂತೆ, ಕಳವಳದ ಹೆಬ್ಬಾಗಿಲು ತೆರೆದಂತೆಯೇ. ಸುತ್ತಲಿನವರು ನೀಡುವ ಸಲಹೆ–ಸೂಚನೆಗಳು ಗರ್ಭಿಣಿಯರನ್ನು ಅನವಶ್ಯಕ ಚಿಂತೆಗೆ ದೂಡುವುದು ಸತ್ಯ. ಆದರೆ ಸೂಕ್ತ ಮುನ್ನೆಚ್ಚರಿಕೆ ಮತ್ತು ಅಗತ್ಯ ಕ್ರಮಗಳನ್ನು ಅನುಸರಿಸಿದರೆ ತಾಯಿ ಹಾಗೂ ಮಗು ಇಬ್ಬರ ಮೇಲೂ ಯಾವುದೇ ಅಡ್ಡ ಪರಿಣಾಮ ಉಂಟಾಗದಂತೆ ಮಧುಮೇಹವನ್ನು ನಿರ್ವಹಿಸಬಹುದು ಎನ್ನುತ್ತದೆ ವೈದ್ಯಲೋಕ.

ಗರ್ಭಧಾರಣೆಯ ಮಧುಮೇಹ
ಗರ್ಭಾವಸ್ಥೆಯಲ್ಲಿ ಎರಡು ರೀತಿಯ ಮಧುಮೇಹವನ್ನು ಗುರುತಿಸಬಹುದು ಮೊದಲೇ ಮಧುಮೇಹಿಯಾಗಿರುವ ಮಹಿಳೆ ಗರ್ಭಧರಿಸುವುದು ಒಂದು ವಿಧವಾದರೆ, ಗರ್ಭಧರಿಸಿದ ನಂತರ ಮಧುಮೇಹ ಬರುವುದು ಎರಡನೇ ವಿಧ. ಎರಡನೇ ಪ್ರಕಾರದ ಮಧುಮೇಹವನ್ನು (gestational pregnancy) ನಿರ್ವಹಿಸುವುದು ಸುಲಭ. ಆದರೆ ಮೊದಲೇ ಮಧುಮೇಹವಿರುವ ಮಹಿಳೆಯರು ಗರ್ಭಧರಿಸುವ ಮುನ್ನವೇ ತಜ್ಞರನ್ನು ಭೇಟಿ ಮಾಡುವುದು ಬಹಳ ಮುಖ್ಯ.
ಗರ್ಭಾವಸ್ಥೆಯಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ಇನ್ಸುಲಿನ್ ಪ್ರಮಾಣ ಸಿಗದೇ ಹೋದಾಗ ಅಥವಾ ಸಿಗುವ ಇನ್ಸುಲಿನ್ ಪ್ರಮಾಣವನ್ನು ದೇಹ ಬಳಸಿಕೊಳ್ಳದೇ ಹೋದಾಗ ಮಧುಮೇಹ ಸಮಸ್ಯೆ ಉಂಟಾಗುತ್ತದೆ. ಸಕ್ಕರೆ ಪ್ರಮಾಣ ಜೀವಕೋಶಗಳಿಗೆ ಹೋಗಿ ಶಕ್ತಿಯಾಗಿ ಪರಿವರ್ತನೆಗೊಳ್ಳಲು ಇನ್ಸುಲಿನ್ ಸಹಕರಿಸುತ್ತದೆ. ಜೀವಕೋಶಗಳಲ್ಲಿ ಈ ಸಕ್ಕರೆ ಪ್ರಮಾಣ ಸರಿಯಾಗಿ ಕಾರ್ಯನಿರ್ವಹಿಸದೇ ಹೋದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕಗೊಂಡು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

‘ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೇ ಹೋದಾಗ ಮಾತ್ರ ಅದು ಸಮಸ್ಯೆಯಾಗಿ ಬೆಳೆದು ನಿಲ್ಲುತ್ತದೆ. ಇದು ತಾಯಿ ಹಾಗೂ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತದೆ. ಗರ್ಭಪಾತಕ್ಕೂ ಇದು ಕಾರಣವಾಗಬಹುದು. ಅಲ್ಲದೇ, ಅವಧಿಪೂರ್ವ ಪ್ರಸವ, ಹುಟ್ಟು (ಜನನ)ನ್ಯೂನತೆಗಳು, ಭ್ರೂಣದ ಹೆಚ್ಚುವರಿ ಬೆಳವಣಿಗೆ (ಮ್ಯಾಕ್ರೋಸೋಮಿಯಾ), ಮಕ್ಕಳ ರಕ್ತದಲ್ಲಿ ಕಡಿಮೆ ಗ್ಲುಕೋಸ್ ಮಟ್ಟ (ಹೈಪೊಗ್ಲಿಸಿಮಿಯಾ) ಇತ್ಯಾದಿ ತೊಡಕುಗಳೂ ಉಂಟಾಗಬಹುದು’ ಎನ್ನುತ್ತಾರೆ ಎಪಿಐ ಅಧ್ಯಕ್ಷ ಡಾ. ಮರುಘನಾಥನ್.

ಮ್ಯಾಕ್ರೋಸೋಮಿಯಾ: ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿರುವ ಮಧುಮೇಹಿಗಳು ಎದುರಿಸುವ ಒಂದು ಸ್ಥಿತಿ ಎಂದರೆ ‘ಮ್ಯಾಕ್ರೋಸೋಮಿಯಾ’ ಇಲ್ಲಿ ಮಗು ಸಾಮಾನ್ಯ ತೂಕಕ್ಕಿಂತಲೂ ಮೂರು ಪಟ್ಟು ದೊಡ್ಡದಿರುತ್ತದೆ. ಏಕೆಂದರೆ ತಾಯಿ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವನ್ನು ಹೊಂದಿರುವುದರಿಂದ ಈ ಮಕ್ಕಳು ಹೊಕ್ಕುಳಬಳ್ಳಿಯ ಮೂಲಕ ಹೆಚ್ಚು ಸಕ್ಕರೆ ಅಂಶವನ್ನು ಪಡೆಯುತ್ತವೆ ಮತ್ತು ಮಗುವಿನ ಮೇದೋಜೀರಕ ಗ್ರಂಥಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಗ್ರಹಿಸುತ್ತದೆ. ಈ ಎಲ್ಲಾ ಹೆಚ್ಚುವರಿ ಸಕ್ಕರೆಯನ್ನು ಬಳಸುವ ಪ್ರಯತ್ನದಲ್ಲಿ ಅದು ಹೆಚ್ಚು ಇನ್ಸುಲಿನ್ ಉತ್ಪತ್ತಿ ಮಾಡುತ್ತದೆ. ಆ ಹೆಚ್ಚುವರಿ ಸಕ್ಕರೆ ಕೊಬ್ಬಾಗಿ ಪರಿವರ್ತನೆಗೊಂಡು ಮಗುವಿನ ತೂಕ ಹೆಚ್ಚುತ್ತದೆ.

ಹೈಪೊಗ್ಲಿಸಿಮಿಯಾ: ಪ್ರಸವದ ತಕ್ಷಣ ಮಗುವಿನ ರಕ್ತದಲ್ಲಿ ಗ್ಲುಕೋಸ್ ಮಟ್ಟ ಕಡಿಮೆಯಾಗುವ ಸ್ಥಿತಿಯನ್ನು ‘ಹೈಪೊಗ್ಲಿಸಿಮಿಯಾ’ ಎಂದು ಕರೆಯಲಾಗುತ್ತದೆ. ಗರ್ಭಿಣಿಯಾಗಿರುವಾಗ ತಾಯಿಯ ರಕ್ತದಲ್ಲಿ ನಿರಂತರವಾಗಿ ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಮಟ್ಟ ಕಂಡುಬಂದಾಗ ಅಂತಹ ಮಗುವಿಗೆ ಈ ಸಮಸ್ಯೆ ಉಂಟಾಗುತ್ತದೆ. ಮಗುವಿನ ರಕ್ತದಲ್ಲಿ ಗ್ಲುಕೋಸ್ ಮಟ್ಟ ಕಡಿಮೆ ಇದ್ದಾಗ, ಅದಕ್ಕೆ ಅಗತ್ಯವಿರುವಷ್ಟು ಶಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಕಾರ್ಬೋಹೈಡ್ರೇಟ್ ಅಂಶ ಅಧಿಕವಿರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಈ ಸ್ಥಿತಿಯನ್ನು ಸುಲಭವಾಗಿ ನಿರ್ವಹಿಸಬಹುದು. ಆದರೆ ಕಡೆಗಣಿಸುವುದರಿಂದ ಹೆಚ್ಚಿನ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ.

ಹೈಪೊಗ್ಲಿಸಿಮಿಯಾ ಸಮಸ್ಯೆಯಿಂದ ಚಿಕ್ಕ ಆಕಾರ, ಹೃದಯ ವೈಪರಿತ್ಯಗಳು, ಕಣ್ಣಿಗೆ ಸಂಬಂಧಿಸಿದ ನರಗಳ ವಿರೂಪಗಳು ಮತ್ತು ರೆಟಿನಾದ ಅಭಿವೃದ್ಧಿ ವೈಪರೀತ್ಯ ಸೇರಿದಂತೆ ಹಲವು ರೀತಿಯಲ್ಲಿ ಮಗುವಿನ ಬೆಳವಣಿಗೆಯ ವೈಪರೀತ್ಯಗಳು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನವೊಂದು ವರದಿ ಮಾಡಿದೆ (Journal of the Anatomical Society of India). ಗರ್ಭಿಣಿಯರ ರಕ್ತದದಲ್ಲಿ ಕಡಿಮೆ ಸಕ್ಕರೆ ಮಟ್ಟ ಕಡಿಮೆ ತೂಕದ ಮಗುವಿನ ಜನನಕ್ಕೂ ಕಾರಣವಾಗುತ್ತದೆ.

ಪರಿಹಾರ ಮಾರ್ಗ...
ಗರ್ಭಧಾರಣೆಯ ಮಧುಮೇಹಕ್ಕೆ ಯಾವ ಚಿಕಿತ್ಸೆ ನೀಡಬೇಕು ಎಂಬ ಸಂಗತಿ ಅವರ ವಯಸ್ಸು, ಒಟ್ಟಾರೆ ಆರೋಗ್ಯ, ವೈದ್ಯಕೀಯ ಇತಿಹಾಸ, ಕುಟುಂಬ ಇತಿಹಾಸ, ರೋಗದ ವ್ಯಾಪ್ತಿ, ರೋಗಿಯ ಸ್ಥಿತಿ ಹಾಗೂ ಚಿಕಿತ್ಸಾ ವಿಧಾನಗಳಿಗೆ ರೋಗಿಯ ಸಹಿಷ್ಣುತೆ ಮುಂತಾದ ಅಂಶಗಳನ್ನು ಅವಲಂಭಿಸಿರುತ್ತದೆ.
ಮಧುಮೇಹ ಚಿಕಿತ್ಸೆಯು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟದ ಸಾಮಾನ್ಯ ಶ್ರೇಣಿಯನ್ನು ಆಧರಿಸಿ ಕೇಂದ್ರೀಕರಿಸಲಾಗುತ್ತದೆ. ಅಂತಹ ಚಿಕಿತ್ಸೆಗಳೆಂದರೆ– ಕಾರ್ಬೋಹೈಡ್ರೇಟ್ ನಿಯಂತ್ರಿತ ಪ್ರಮಾಣದಲ್ಲಿ ವಿಶೇಷ ಆಹಾರ (ರಕ್ತದಲ್ಲಿ ಸರಿಯಾದ ಸಕ್ಕರೆ ಪ್ರಮಾಣವನ್ನು ಕಾಯ್ದುಕೊಳ್ಳಲು ನೆರವಾಗಬಲ್ಲ ಆಹಾರ–ಪಥ್ಯದ ಯೋಜನೆಯನ್ನು ರೂಪಿಸಿಕೊಳ್ಳುವುದು)ನೀಡುವುದು, ಕೆಲವು ಸರಳ ವ್ಯಾಯಾಮಗಳನ್ನು (ತಜ್ಞರ ಸೂಚನೆಯಂತೆ) ಮಾಡುವುದು, ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಮೇಲ್ವಿಚಾರಣೆ ಮಾಡಿಸಿಕೊಳ್ಳುವುದು, ತಪ್ಪದೇ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದು.

ಆಹಾರ ಪಥ್ಯ: ಮಧುಮೇಹ ಹೊಂದಿರುವ ಗರ್ಭಿಣಿಯರು ಎರಡೂ ಸ್ಥಿತಿಗಳಿಗೆ ಹೊಂದುವ ರೀತಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಆಹಾರ–ಪಥ್ಯವನ್ನು ಮಾಡಬೇಕಾಗುತ್ತದೆ. ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಯಾವುದೇ ರೀತಿಯ ಗಂಭೀರ ಸಮಸ್ಯೆ ಉಂಟಾಗಲಾರದು. ಕಿತ್ತಲೆ ಹಣ್ಣು, ಮೋಸಂಬಿಯಂತಹ ಯಾವುದೇ ಸಿಟ್ರೆಸ್ ಹಣ್ಣುಗಳನ್ನು ಸೇವಿಸಬಹುದು. ಆದರೆ ಏಲಕ್ಕಿ ಬಾಳೆಹಣ್ಣು, ಸೇಬು, ಚಿಕ್ಕು ಹಣ್ಣುಗಳನ್ನು ತೀರಾ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ನೆನಪಿಡಿ: ಗರ್ಭಾವಸ್ಥೆಯಲ್ಲಿ ಮಧುಮೇಹವನ್ನು ನಿರ್ವಹಿಸುವುದು ಮೇಲ್ನೋಟಕ್ಕೆ ದೊಡ್ಡ ಸವಾಲಾಗಿ ಕಾಣಬಹುದು. ನಿಮ್ಮ ಹಾಗೂ ನಿಮ್ಮ ಕಂದನ ಆರೋಗ್ಯದ ಬಗ್ಗೆ ಕಳವಳ ಮೂಡಬಹುದು. ಆದರೆ ಒಂದು ಬಾರಿ ನಿಮಗೆ ಮಧುಮೇಹದ ಗುಣ–ಸ್ವಭಾವ ಅರ್ಥವಾದರೆ, ಅದನ್ನು ಹೇಗೆ ನಿಭಾಯಿಸಬೇಕೆನ್ನುವುದು ನಿಮಗೆ ತಿಳಿದರೆ ನೀವದನ್ನು ಸುಲಭವಾಗಿ ಗೆಲ್ಲಬಹುದು. ಮಧುಮೇಹದ ಭಯವನ್ನು ಮೆಟ್ಟಿ ನಿಂತು ಜಾಗೃತಿಯಿಂದ ನಡೆಯುವ ಮೂಲಕ ಆರೋಗ್ಯವಂತ ಮಗು ಪಡೆಯಬಹುದು. ವೈದ್ಯರ ಸಲಹೆಯಂತೆ ತಪ್ಪದೇ ಇನ್ಸುಲಿನ್ ತೆಗೆದುಕೊಳ್ಳುವ ಮೂಲಕ ಸಂಭಾವ್ಯ ಅಪಾಯಗಳನ್ನು ತಪ್ಪಿಸಬಹುದು.

ಮಧುಮೇಹಿಗಳಿಗೆ ಮಾಹಿತಿ ಆಂದೋಲನ
ಪ್ರಸ್ತುತ ಸ್ಥಿತಿಯಲ್ಲಿ ಮಧುಮೇಹವನ್ನು ಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ; ಆದರೆ, ಉತ್ತಮವಾಗಿ ನಿರ್ವಹಿಸಬಹುದು. ಆರಂಭಿಕ ಹಂತದಲ್ಲಿಯೇ ಇದನ್ನು ಗುರುತಿಸುವ ಮತ್ತು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯಕರ ಬದುಕು ಸಾಗಿಸಬಹುದು. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು, ಮಧುಮೇಹದಿಂದ ಬಳಲುತ್ತಿರುವ ಜನರಿಗೆ ನೆರವಾಗಲು ಅಸೋಸಿಯೇಷನ್ ಆಫ್ ಫಿಜಿಷಿಸಿಯನ್ಸ್, ಇಂಡಿಯಾ (ಎಪಿಐ) ಮತ್ತು ನೊವೊ ನಾರ್ಡಿಸ್ಕ್ ಸಂಸ್ಥೆಗಳು ಜಂಟಿಯಾಗಿ ಜಾಗೃತಿ ಆಂದೋಲನ ರೂಪಿಸುತ್ತಿವೆ.

ಮಧುಮೇಹಿಗಳು ತಮ್ಮ ದೇಹಸ್ಥಿತಿ ಹಾಗೂ ಔಷಧೋಪಚಾರದ ಬಗ್ಗೆ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿ ಆಗವಂತೆ ರೋಗಿಗಳ ಮನೆ–ಮನೆಗೆ ಮುದ್ರಣ ರೂಪದಲ್ಲಿ ಮಾಹಿತಿ ರವಾನಿಸುವುದು ಈ ಆಂದೋಲನದ ಉದ್ದೇಶ. ಶೈಕ್ಷಣಿಕ ಪರಿಕರಗಳನ್ನು ಹೆಚ್ಚು ಸಂವಹನಶೀಲವಾಗಿ ರೂಪಿಸಲಾಗಿದ್ದು, ಒಟ್ಟು 10 ಭಾರತೀಯ ಭಾಷೆಗಳಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಇದಕ್ಕೆ ರೋಗಿಗಳು ತಮ್ಮ ನೋಂದಾಯಿತ ವೈದ್ಯರ ಮೂಲಕ ಒಂದು ಸಂದೇಶ ರವಾನಿಸಿದರೆ ಸಾಕು, ಅವರ ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ಅವರಿಗೆ ಅಗತ್ಯ ಮಾಹಿತಿಯನ್ನು ರವಾನಿಸುವ ಯೋಜನೆಯನ್ನು ರೂಪಿಸಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಆಂದೋಲನ ಆರಂಭಿಸಲಾಗುವುದು.
–ಮೆಲ್ವಿನ್ ಡಿಸೋಜಾ, ನೊವೊ ನಾರ್ ಡಿಸ್ಕ್ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.