ಮಾನ್ವಿ: ಪ್ರಸ್ತುತ ಮುಂಗಾರು ಹಂಗಾಮಿಗೆ ತಡವಾಗಿಯಾದರೂ ಮಳೆ ಬಿದ್ದ ಕಾರಣ ತಾಲ್ಲೂಕಿನ ರೈತ ಸಮುದಾಯದಲ್ಲಿ ಉತ್ಸಾಹ ಮೂಡಿಸಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವಂತೆ ಮಾಡಿದೆ. ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿನ ಉತ್ತಮ ಪ್ರಮಾಣದ ಮಳೆ ಬಿದ್ದಿದೆ. ವರುಣನ ಕೃಪೆಗಾಗಿ ಸಪ್ತ ಭಜನೆ, ದೇವರಿಗೆ ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದ ಜನತೆಯಲ್ಲಿ ನಿಟ್ಟುಸಿರು ಮೂಡಿಸಿದೆ.

ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೆ ಧಾರಾಕಾರ ಮಳೆ ಸುರಿದಿದ್ದು ಮಾನ್ವಿ ಪಟ್ಟಣದ ಹಲವು ಪ್ರದೇಶಗಳು, ರಸ್ತೆಗಳು ಜಲಾವೃತಗೊಳ್ಳುವಂತೆ ಮಾಡಿದೆ. ಮಾನ್ವಿ ಪಟ್ಟಣದಲ್ಲಿ ರಸ್ತೆ ವಿಸ್ತರಣೆಗಾಗಿ ಅತಿಕ್ರಮಿತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದ್ದು ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಿರುವ ಚರಂಡಿಗಳು, ರಸ್ತೆಗಳ ಮೇಲಿರುವ ತಗ್ಗು ಗುಂಡಿಗಳು ನೀರಿನಿಂದ ತುಂಬಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ತಾಲ್ಲೂಕಿನ ಸಿರವಾರ ಹೋಬಳಿಯಲ್ಲಿ ಶುಕ್ರವಾರ ಅತೀ ಹೆಚ್ಚಿನ ಪ್ರಮಾಣದ ಮಳೆ ಬಿದ್ದಿದೆ.

ಸಿರವಾರ-42ಮಿಮೀ, ಮಾನ್ವಿ-33ಮಿಮೀ, ಪಾಮನಕಲ್ಲೂರು-25ಮಿಮೀ, ಮಲ್ಲಟ-24 ಮಿಮೀ, ಕವಿತಾಳ-15ಮಿಮೀ, ಕುರ್ಡಿ-11.3ಮಿಮೀ ಹಾಗೂ ಕಲ್ಲೂರು ಹೋಬಳಿಯಲ್ಲಿ 8ಮಿಮೀ ಮಳೆಯಾಗಿದೆ. ಶನಿವಾರ ಬೆಳಿಗ್ಗೆ ಕೂಡ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು ವರಣನ ಆರ್ಭಟ ಮುಂದುವರೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.