ಗಜೇಂದ್ರಗಡ: ಈ ಭಾಗದಲ್ಲಿನ ಮಾವು ಬೆಳೆಗೆ `ಕಾಂಡಕೊರಕ~ ಕೀಟಬಾಧೆ ಕಾಣಿಸಿಕೊಂಡಿದೆ. ಇದರಿಂದ ಕಟ್ಟಪಟ್ಟು ಬೆಳೆದ ಮರಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಹುಳುವಿನ ಬಾಧೆ ವ್ಯಾಪಕ ವಾಗಿರುವ ಕಡೆ ಮರಗಳು ಒಣಗಿ ಹೋಗುತ್ತಿವೆ.

ಮಾವಿಗೆ ಕೊಂಬೆಕೊರಕ ಹುಳುವಿನ ಬಾಧೆ ಸಾಮಾನ್ಯವಾಗಿತ್ತು. ಅದು ಈಗಲೂ ಮುಂದು ವರೆದಿದೆ. ಚಿಗುರೊಡೆದ ಭಾಗದಲ್ಲಿ ಕೊಂಬೆಯನ್ನು ಪ್ರವೇಶಿಸುವ ಹುಳುಗಳು ಕೊಂಬೆಗಳನ್ನು ಒಳಗಿ ನಿಂದಲ್ಲೇ ತಿಂದು ಒಣಗುವಂತೆ ಮಾಡುತ್ತವೆ. ಈಗ ಕಾಂಡ ಕೊರಕ ಹುಳುವಿನಿಂದಾಗಿ ಮರದ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ.

ಬಾದಾಮಿ ಜಾತಿಯ ಮರಗಳಲ್ಲಿ ಕಾಂಡಕೊರಕ ಹುಳುವಿನ ಬಾಧೆ ಹೆಚ್ಚಾಗಿ ಕಂಡು ಬಂದಿದೆ. ಇದ ರಿಂದ ಅಧಿಕ ಬೆಲೆಗೆ ಮಾರಾಟವಾಗುವ ಈ ಮಾವಿನ ತಳಿಯನ್ನು ಬೆಳೆದಿರುವ ರೈತರಿಗೆ ಹೆಚ್ಚು ನಷ್ಟ ವಾಗುತ್ತಿದೆ.

ಹುಳು ನಿಂಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯ ರೈತರು ಯಾವುದೇ ಕ್ರಮ ಕೈಗೊಳ್ಳದಿರುವುದು ಸಮಸ್ಯೆಯ ಅಳವನ್ನು ಹೆಚ್ಚಿಸಿದೆ.

`ಕಾಂಡಕೊರಕ~ ಬಾಧೆಗೆ ಕಾರಣ?: ಗಜೇಂದ್ರಗಡ, ಗೋಗೇರಿ, ಕಾಲಕಾಲೇಶ್ವರ, ಜಿಗೇರಿ, ಮ್ಯಾಕಲ್ಝರಿ, ಭೈರಾಪೂರ, ಬೆನಸಮಟ್ಟಿ, ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ನಾಗೇಂದ್ರಗಡ, ಲಕ್ಕಲಕಟ್ಟಿ ಮತ್ತಿತರ ಗ್ರಾಮಗಳಲ್ಲಿ ಹೆರಳವಾಗಿ ಬೆಳೆಯಲಾದ ಮಾವಿಗೆ ಕಂಡಕೊರಕ ಕೀಟಬಾಧೆ ಉಂಟಾಗಿದೆ.

ಒಂದು ಜಾತಿಯ ನೊಣ. ಮರದ ಬುಡದ ಮೇಲೆ ಏಳುವ ಚಿಕ್ಕೆಳ ಕೆಳಗೆ ಮೊಟ್ಟೆ ಇಡುತ್ತದೆ. ಮೊಟ್ಟೆಯೊಡೆದು ಹೊರಗೆ ಬರುವ ಹುಳುಗಳು ಕಾಂಡದ ಮೇಲ್ಭಾಗವನ್ನು ಸ್ಪಲ್ಪ ಸ್ವಲ್ಪವೇ ಕೊರೆ ಯುತ್ತಾ ಒಳಗೆ ಪ್ರವೇಶಿಸುತ್ತವೆ. ಪ್ರಾರಂಭದ ಹಂತ ದಲ್ಲಿ ಇದು ಗೊತ್ತಾಗುವುದಿಲ್ಲ. ಬುಡಕ್ಕೆ ಸಾಕಷ್ಟು ಹಾನಿ ಉಂಟಾದ ಮೇಲೆ ಒಂದು ವಿಧವಾದ ರಸ ರಂಧ್ರದಿಂದ ಸೋರಲು ಪ್ರಾರಂಭಿಸುತ್ತದೆ. ಆಗ ಹುಳು ಇರುವುದರ ಬಗ್ಗೆ ತಿಳಿಯುತ್ತದೆ ಎನ್ನುತ್ತಾರೆ ಮಾವು ಬೆಳೆಗಾರರು.

ನಿಯಂತ್ರಣ ವಿಧಾನಗಳು: ಈ ಹುಳುವಿನ ಬಾಧೆಯನ್ನು ನಿವಾರಿಸಲು ಮರದ ಬುಡಕ್ಕೆ ಕಾರ್ಬರಿಲ್ ಅಥವಾ ಬೈಟೆಕ್ಸ್ ಲೇಪಿಸಬೇಕು. ನೊಣಗಳು ಸಾಮಾನ್ಯವಾಗಿ ಬುಡದ ಚಕ್ಕೆಯ ಕೆಳಗೆ ಮೊಟ್ಟೆ ಇಡುವುದರಿಂದ ಬುಡಕ್ಕೆ ಪ್ಲಾಸ್ಟಿಕ್ ಹಾಳೆ ಸುತ್ತಬೇಕು. ಬುಡವನ್ನು ಪ್ರವೇಶಿಸಿರುವ ಹುಳು ಗಳನ್ನು ಚುಚ್ಚಿ ಕೊಲ್ಲಬೇಕು. ರಂಧ್ರಕ್ಕೆ ಸೀಲ್ ಮಾಡಬೇಕು. ಅಂದಾಗ ಕೀಟಬಾಧೆ ನಿಯಂತ್ರಣ ಸಾಧ್ಯ ಎಂಬುದು ತೋಟಗಾರಿಕೆ ಅಧಿಕಾರಿಗಳ ಸಲಹೆ.

ಈ ಭಾಗದಲ್ಲಿ 250 ಹೆಕ್ಟೇರ್ಗೂ ಅಧಿಕ ಪ್ರಮಾಣದಲ್ಲಿ ಬೆಳೆಯಲಾದ ಮಾವಿಗೆ ಕಾಂಡಕೊರಕ ರೋಗ ಮಾರಕವಾಗಿದೆ. ರೋಗ ನಿಯಂತ್ರಣ ಕಷ್ಟಸಾಧ್ಯ ಎಂದುಕೊಂಡ ಬೆಳೆಗಾರರು ಮಾತ್ರ ಮರ ಕತ್ತರಿಸಿ ಹಾಕಲು ನಿರ್ಧರಿಸಿರುವುದು ವಿಪರ್ಯಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.