ಶಿವಮೊಗ್ಗ: ಮಾಹಿತಿ ಹಕ್ಕು ಕಾಯ್ದೆ ಅಧಿಕಾರಿಗಳ ರಕ್ಷಣೆಗಿರುವುದೇ ಹೊರತು, ಕಿರುಕುಳ ನೀಡುವುದಕ್ಕಲ್ಲ ಎಂದು ರಾಜ್ಯ ಮಾಹಿತಿ ಆಯೋಗ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಮಾಹಿತಿ ಹಕ್ಕು ಕಾಯ್ದೆ ಕುರಿತು ನಡೆದ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಕಾಯ್ದೆ ಜಾರಿಯಿಂದಾಗಿ ಕಿರಿಕಿರಿ, ಬೇಸರ, ಜಿಗುಪ್ಸೆ ಅನುಭವಿಸಬೇಕಾಗುತ್ತದೆಂಬ ತಪ್ಪು ಕಲ್ಪನೆ ಅಧಿಕಾರಿಗಳಲ್ಲಿದೆ. ಆದರೆ, ಈ ಕಾಯ್ದೆ ನಮ್ಮ ರಕ್ಷಣೆಗಿದೆಂಬ ಭಾವನೆಯಲ್ಲಿ ಕೆಲಸ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಈ ಕಾಯ್ದೆ ಜಾರಿಯಿಂದಾಗಿ ಕಾನೂನು ಕಾಯ್ದೆಯನ್ನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮೇಲಧಿಕಾರಿಗಳಿಗೆ ಹಾಗೂ ಕಾನೂನಿನ ಚೌಕಟ್ಟನ್ನು ಬಿಟ್ಟು ಕೆಲಸ ಮಾಡಿಕೊಡುವಂತೆ ಒತ್ತಡ ಹೇರುವವರಿಗೆ ಈ ಕಾಯ್ದೆಯನ್ನು ನೆನಪು ಮಾಡಿಕೊಡಬಹುದು. ಇದರಿಂದ ನಾವು ಸುರಕ್ಷಿತವಾಗಿರಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

`ನಿರ್ಲಕ್ಷ್ಯ ಸಲ್ಲ~: ಎಚ್ಚರಿಕೆ: ಸಾರ್ವಜನಿಕ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಸುವ ಸಾರ್ವಜನಿಕ ಅರ್ಜಿಗಳಿಗೆ ಅಗತ್ಯ ಮಾಹಿತಿ ನೀಡದೆ ನಿರ್ಲಕ್ಷ ತೋರಿದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ಎಚ್ಚರಿಸಿದರು.

ಮಾಹಿತಿ ಹಕ್ಕು ಅಧಿನಿಯಮದಡಿ ಸರ್ಕಾರಿ ಅಧಿಕಾರಿಗಳು ಇನ್ನಷ್ಟು ಎಚ್ಚರಿಕೆ, ಮುಂಜಾಗ್ರತೆಯಿಂದ ಕೆಲಸ ಮಾಡಬೇಕು. ಈ ಅಧಿನಿಯಮದಡಿ ಬರುವ ಅರ್ಜಿಗಳನ್ನು ನಿರ್ಲಕ್ಷಿಸದೆ ಸಕಾಲದಲ್ಲಿ ಮಾಹಿತಿ ನೀಡುವತ್ತ ಗಮನ ಹರಿಸಿದರೆ ತಾವುಗಳು ತೊಂದರೆಗೆ ಸಿಗುವುದಿಲ್ಲ. ತಪ್ಪು ಮಾಹಿತಿ ನೀಡುವುದು, ನಿರ್ಲಕ್ಷಿಸುವುದು, ತಡವಾಗಿ ಮಾಹಿತಿ ನೀಡುವುದು, ಕೊಡಲಾಗುವುದಿಲ್ಲವೆಂಬ ಸಬೂಬು ಹೇಳಿದರೆ ಅಂತಹ ಅಧಿಕಾರಿಗಳು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರಿ ಅಧಿಕಾರಿಗಳು ಪ್ರಥಮವಾಗಿ ಮಾಹಿತಿ ಹಕ್ಕು ಅಧಿನಿಯಮದಡಿ ಬರುವ ಎಲ್ಲಾ ನಿಯಮಗಳನ್ನು ತಿಳಿದುಕೊಂಡು ಅದರಂತೆ ಕೆಲಸ ಮಾಡಬೇಕು. ಅರ್ಜಿ ಸ್ವೀಕರಿಸಿದ ಕೂಡಲೆ ಅದಕ್ಕೆ ಪೂರಕ ದಾಖಲೆ ಹಾಗೂ ಮಾಹಿತಿ ನೀಡಿ ವಿಲೇವಾರಿ ಮಾಡುವವರೆಗೂ ಕಚೇರಿಯ ಅಧಿಕಾರಿಗಳು ಎಚ್ಚರ ವಹಿಸಬೇಕು. ಮಾಹಿತಿ ನೀಡುವ ಅಧಿಕಾರಿ, ಸಹಾಯಕ ಅಧಿಕಾರಿ, ಕಚೇರಿಯ ಕೆಲಸ ಕಾರ್ಯ, ಕಡತ ಇತ್ಯಾದಿಗಳನ್ನು ಪ್ರಕಟಿಸಬೇಕು ಎಂದು ಹೇಳಿದರು.

ತಮ್ಮ ಕಚೇರಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿ ಸಂಬಂಧಿಸಿಲ್ಲದ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಬೇಕು. ಪುಟಕ್ಕ್ಙೆ 2 ಶುಲ್ಕ ವಸೂಲಿ ಮಾಡಬೇಕು. ಮಾಹಿತಿ ನೂರಾರು ಪುಟಗಳಿದ್ದರೆ ಅರ್ಜಿದಾರರಿಗೆ ಖುದ್ದು ವೀಕ್ಷಿಸಲು ಅನುವು ಮಾಡಿಕೊಡಬೇಕು. ಹೀಗೆ ಮಾಹಿತಿ ಹಕ್ಕು ಅಧಿನಿಯಮದಡಿ ಬರುವ ಅರ್ಜಿಗಳ ವಿಲೇವಾರಿ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್ಗುಪ್ತ, ಜಿ.ಪಂ. ಉಪ ಕಾರ್ಯದರ್ಶಿ ಹನುಮನರಸಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.