ರಾಯಚೂರು: ನಸುಕಿನ ಜಾವದಿಂದಲೇ ಸೇರಿದ ಅಪಾರ ಜನಸಮೂಹ... ಸ್ಪರ್ಧಾ ಕಣದಲ್ಲಿ ಅಬ್ಬರಿಸುತ್ತಿದ್ದ ಗಜ ಗಾತ್ರದ ಎತ್ತುಗಳು... ಅವುಗಳನ್ನು ನೋಡಲು ಕಾತುರರಾದ ಜನ ನಿಯಂತ್ರಿಸಲು ಪೊಲೀಸ್ ಬಂದೋ ಬಸ್ತ್... ಅಕ್ಕಪಕ್ಕದ ಕಟ್ಟಡ ಮೇಲೆ ಎಲ್ಲೆಂದರಲ್ಲಿ ಜನರೇ ಜನರು...

ಸುಮಾರು ಎಂಟರಿಂದ ಹತ್ತು ತಾಸು ಒಂದೇ ಕಡೆ ನಿಂತ ಸಾವಿರಾರು ಎತ್ತುಗಳ ಆರ್ಭಟ, ಭಾರವಾದ ಕಲ್ಲು ಎಳೆಯುವ ಸಾಮರ್ಥ್ಯ ಕಂಡು ಬೆರಗಾದರು...

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮಾಜವು ಕಳೆದ 13 ವರ್ಷಗಳಿಂದ ಕಾರ ಹುಣ್ಣಿಮೆ ನಿಮಿತ್ತ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಚರಿಸುತ್ತಿದ್ದ, ಈ ವರ್ಷ ಶನಿವಾರ ಆರಂಭಗೊಂಡಿದೆ. ಹಬ್ಬದ ಪ್ರಮುಖ ಆಕರ್ಷಣೆ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ. ಕಲ್ಲು ಎಳೆಯುವ ಸ್ಪರ್ಧೆಯ ಮೊದಲ ದಿನ ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳ 25 ಜೋಡಿ ಎತ್ತುಗಳು ಪಾಲ್ಗೊಂಡಿದ್ದವು.

ಪ್ರತಿ ವರ್ಷ ಸ್ಪರ್ಧೆಯ ಮೊದಲ ದಿನ ಹೆಚ್ಚಿನ ಜನವೀಕ್ಷಣೆಗೆ ಇರುತ್ತಿರಲಿಲ್ಲ. ಆದರೆ, ಈ ವರ್ಷ ಮೊದಲ ದಿನವೇ ಹೆಚ್ಚಿನ ಈ ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಣೆಗೆ ಧಾವಿಸಿದ್ದು ಕಂಡು ಬಂದಿತು. ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಎ ಪಾಪಾರೆಡ್ಡಿ ಅವರು ಪ್ರಮುಖ ಸಂಘಟಕರಾಗಿದ್ದು, ಹಟ್ಟಿ ಚಿನ್ನದ ಗಣಿ, ನಗರಸಭೆ, ಎಪಿಎಂಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆಯುತ್ತಿದೆ.

ಉದ್ಘಾಟನೆ ಸಮಾರಂಭದ ಸಾನಿಧ್ಯವನ್ನು ಮುನ್ನೂರು ಕಾಪು ಸಮಾಜದ ಶೂನ್ಯ ಸಿಂಹಾಸನ ಪೀಠದ ಸದ್ಗುರು ಶರಣ ತಿಪ್ಪೇಶ್ವರಸ್ವಾಮಿ ವಹಿಸಿದ್ದರು. ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಪೂಜೆ ನೆರವೇರಿಸಿದರು.

ಕೆಲವೇ ವರ್ಷಗಳ ಹಿಂದೆ ಚಿಕ್ಕದಾಗಿ ಆರಂಭಗೊಂಡ ಹಬ್ಬ ಈಗ ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಜನತೆಯ ಪ್ರೋತ್ಸಾಹ, ಮುನ್ನೂರು ಕಾಪು ಸಮಾಜದ ಸಹಕಾರವೇ ಕಾರಣ. ಈಗ ಜಿಲ್ಲೆಯ ಎಲ್ಲ ಕಡೆ ಈ ರೀತಿ ಸ್ಪರ್ಧೆ ನಡೆಯುತ್ತಿದೆ. ಕಾರ ಹುಣ್ಣಿಮೆ ಹಬ್ಬದ ದಿನಗಳಂದು ನಮ್ಮ ರೈತಾಪಿ ಜನ, ಹಳ್ಳಿ ಜನ ಸಾಂಪ್ರದಾಯಿಕ ಹಬ್ಬವನ್ನು ಈ ರೀತಿ ವಿಶಿಷ್ಟವಾಗಿ ಆಚರಿಸುತ್ತಿರುವುದಕ್ಕೆ ಸಂತೋಷ ಆಗುತ್ತದೆ. ರಾಜ್ಯ ಸರ್ಕಾರ ವಿವಿಧ ಉತ್ಸವಗಳಿಗೆ ಹಣ ಕಲ್ಪಿಸುವಂತೆ ಈ ಮುಂಗಾರು ರಾಯಚೂರು ಹಬ್ಬಕ್ಕೂ 10 ಲಕ್ಷ ಕಲ್ಪಿಸಬೇಕು ಎಂದು ಮುಂಗಾರು ಸಾಂಸ್ಕೃತಿಕ ಹಬ್ಬದ ಅಧ್ಯಕ್ಷ ಎ ಪಾಪಾರೆಡ್ಡಿ ಹೇಳಿದರು.

ಈ ವರ್ಷ ಮುನ್ನೂರು ಕಾಪು ಸಮಾಜವೇ 40 ಲಕ್ಷ ಹಣವನ್ನು ಈ ಉತ್ಸವಕ್ಕೆ ದೊರಕಿಸುತ್ತಿರುವುದು ವಿಶೇಷವಾಗಿದೆ ಎಂದರು.

ಶಾಸಕರಾದ ಎ ವೆಂಕಟೇಶ ನಾಯಕ, ಡಾ.ಶಿವರಾಜ ಪಾಟೀಲ್, ತಿಪ್ಪರಾಜು ಹವಾಲ್ದಾರ, ಜಿ.ಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು, ಉಪಾಧ್ಯಕ್ಷ ಕೆ ಶರಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಶಾಂತಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುನ್ನೂರು ಕಾಪು ಸಮಾಜದ ಪ್ರಧಾನ ಕಾರ್ಯದರ್ಶಿ ಜಿ ಬಸವರಾಜರೆಡ್ಡಿ, ಎಂ ನಾಗರೆಡ್ಡಿ, ಲಿಂಬೆಕಾಯಿ ಶೇಖರರೆಡ್ಡಿ ಹಾಗೂ ಸಮಾಜದ ಇತರ ಮುಖಂಡರಿದ್ದರು.

ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯ ನಿರ್ವಹಣೆಯನ್ನು ತಿಮ್ಮಾರೆಡ್ಡಿ, ಎನ್ ಶ್ರೀನಿವಾರಸರೆಡ್ಡಿ, ಜಿ ಶೇಖರರೆಡ್ಡಿ, ಬಂಗಿ ನರಸರೆಡ್ಡಿ, ಪುಂಡ್ಲ ನರಸರೆಡ್ಡಿ, ಗುಡಿಸಿ ನರಸರೆಡ್ಡಿ ಹಾಗೂ ಇತರರು ನಡೆಸಿಕೊಟ್ಟರು.

ಭಾನುವಾರ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನ. ಎರಡು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಅಖಿಲ ಭಾರತ ಮಟ್ಟದ ಮುಕ್ತ ಸ್ಪರ್ಧೆಯಾಗಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಇತರ ಭಾಗಗಳ ಎತ್ತುಗಳು ಪಾಲ್ಗೊಳ್ಳಲಿವೆ ಎಂದು ಸಂಘಟಕರು ಹೇಳಿದ್ದಾರೆ.

ಬೆಳಿಗ್ಗೆ 8ರಿಂದ ನಡೆಯಲಿದೆ. ಮುನ್ನೂರು ಕಾಪು ಸಮಾಜದ ಕುಲದೇವತೆ ಲಕ್ಷ್ಮಮ್ಮದೇವಿ ಹಾಗೂ ಎತ್ತುಗಳ ಮೆರವಣಿಗೆ ಸಂಜೆ 5 ಗಂಟೆಗೆ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾ ತಂಡಗಳು ಪಾಲ್ಗೊಳ್ಳಲಿವೆ.

ಇಂದು ಆಗಮಿಸುವ ಅತಿಥಿಗಳು: ಕೃಷಿ ಸಚಿವ ಕೃಷ್ಣ ಭೈರೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಆಗಮಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.