ಮುಂಬೈ (ಪಿಟಿಐ): ಇನ್ಫೊಸಿಸ್ ಮುಂದಿನ ವರ್ಷ 16 ಸಾವಿರ ಎಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಕಂಪೆನಿ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಬುಧವಾರ ಇಲ್ಲಿ ಹೇಳಿದರು.

‘ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಂದ ಹೊರಗುತ್ತಿಗೆ ಸೇವೆಗಳಿಗೆ (ಬಿಪಿಒ) ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ನೇಮಕಾತಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

‘ಭಾರತ ಜೊಳ್ಳು ಮಾತಿನ ದೇಶ. ಇಲ್ಲಿ ಮಾತನಾಡುವವರೇ ಹೆಚ್ಚು. ಆಡಿದ ಮಾತನ್ನು ಕಾರ್ಯಗತಗೊಳಿಸುವವರ ಸಂಖ್ಯೆ ಕಡಿಮೆ. ಕೇವಲ ‘ಮೇರಾ ಭಾರತ್ ಮಹಾನ್‘ ಮಂತ್ರ ಜಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೊಸ, ಹೊಸ ಕನಸುಗಳನ್ನು ಕಂಡು, ಗುರಿ ಮುಟ್ಟಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಕೇವಲ ಸಿನಿಕರಾಗಿ ಉಳಿಯಬಾರದು’ ಎಂದು ಅವರು ಇಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.