ಭಾನುವಾರ, ಮೇ 22, 2022
22 °C

ಮುಂದಿನ ಸಾಧನೆಗೆ ಇಂದಿನ ಹೆಜ್ಜೆಗಳು...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಕೈಫ್... ಇವರ್ಲ್ಲೆಲರ ಸಾಧನೆಗೆ ಸಾಮ್ಯತೆ ಇದೆ. ಏಕೆಂದರೆ ಈ ಆಟಗಾರರು ರಾಷ್ಟ್ರೀಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯಲು ವೇದಿಕೆಯಾಗಿದ್ದು ಜೂನಿಯರ್ ಕ್ರಿಕೆಟ್ ಟೂರ್ನಿಗಳು.ರಣಜಿಯಲ್ಲಿ ಸುದೀರ್ಘ ಅವಧಿ ಆಡಿ ಸ್ಥಾನ ಪಡೆದವರಿಗಿಂತ 19 ವರ್ಷದೊಳಗಿನವರ ತಂಡದಲ್ಲಿ ಮಿಂಚಿ ಕೆಲವೇ ದಿನಗಳಲ್ಲಿ ಸೀನಿಯರ್ ಬಳಗಕ್ಕೆ ಸೇರಿಕೊಂಡ ಆಟಗಾರರು ಇವರು. ಭಾರತ ತಂಡ 2000ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದಾಗ ಕೈಫ್ ನಾಯಕರಾಗಿದ್ದರು. 2008ರಲ್ಲಿ ಜೂನಿಯರ್ ವಿಶ್ವಕಪ್ ಗೆದ್ದಾಗ ಕೊಹ್ಲಿ ನಾಯಕ. 2012ರಲ್ಲಿ ಉನ್ಮುಕ್ತ್ ಚಾಂದ್ ಸಾರಥ್ಯದ 19 ವರ್ಷದೊಳಗಿನವರ ತಂಡ ಚಾಂಪಿಯನ್ ಆಗಿತ್ತು.ವಿಶೇಷವೆಂದರೆ ಜೂನಿಯರ್ ವಿಶ್ವಕಪ್ ಗೆದ್ದ ವರ್ಷವೇ ಕೊಹ್ಲಿ ಸೀನಿಯರ್ ಏಕದಿನ ತಂಡದಲ್ಲಿ ಸ್ಥಾನ ಪಡೆದರು. ಅವರೀಗ ಭಾರತ ಕ್ರಿಕೆಟ್‌ನ ಭವಿಷ್ಯದ ನಾಯಕ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ವಿಶ್ವ ಕ್ರಿಕೆಟ್‌ನ ಸದ್ಯದ ಅತ್ಯುತ್ತಮ ಬ್ಯಾಟ್ಸ್‌ಮನ್ ವಿರಾಟ್. ದೆಹಲಿಯ ಮತ್ತೊಬ್ಬ ಬ್ಯಾಟ್ಸ್‌ಮನ್ ಚಾಂದ್ ಕೂಡ ಅದೇ ಹಾದಿಯಲ್ಲಿದ್ದಾರೆ.ಕರ್ನಾಟಕದ ಮನೀಷ್ ಪಾಂಡೆ, ಮಯಂಕ್ ಅಗರವಾಲ್, ಕೆ.ಎಲ್.ರಾಹುಲ್, ಡಿ.ನಿಶ್ಚಲ್, ಶ್ರೇಯಸ್ ಗೋಪಾಲ್ ಕೂಡ 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಮಿಂಚಿದವರು. ಇವರಲ್ಲಿ ಕೆಲವರು ಈಗ ರಣಜಿ ತಂಡದಲ್ಲಿದ್ದಾರೆ. ಪಾಂಡೆ ಭಾರತ `ಎ' ತಂಡ ಕೂಡದಲ್ಲಿ ಆಡಿದ್ದಾರೆ. 14 ವರ್ಷದೊಳಗಿನವರ ತಂಡದಲ್ಲಿ ಮಿಂಚಿದ್ದ ವಾಸೀಮ್ ಜಾಫರ್ ಅಣ್ಣನ ಮಗ ಅರ್ಮಾನ್ ಜಾಫರ್ ಈಗ ಮುಂಬೈ ರಣಜಿ ತಂಡದಲ್ಲೂ ಸ್ಥಾನ ಗಿಟ್ಟಿಸಿದ್ದಾರೆ.ಈ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಜೂನಿಯರ್ ತಂಡದ ಪ್ರದರ್ಶನವನ್ನೇ ಗಮನಿಸಿ. ಆತಿಥೇಯ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಎದುರು ಪಾರಮ್ಯ ಸಾಧಿಸಿದ ವಿಜಯ್ ಜೋಲ್ ಸಾರಥ್ಯದ ತಂಡ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆಗಿದೆ. ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದಿದೆ. ಕರ್ನಾಟಕದ ಯಾವುದೇ ಆಟಗಾರ ಈ ತಂಡದಲ್ಲಿರಲಿಲ್ಲ. ಆದರೆ ಮಹಾರಾಷ್ಟ್ರದ ಜೋಲ್ ಅವರಂಥ ಪ್ರತಿಭಾವಂತರು ಇದ್ದರು. ಇವರು ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾವನ್ನೇ ಬೇಟೆಯಾಡಿ ವಿಜಯಿಯಾಗಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಂಥ ವಾತಾವರಣದಲ್ಲಿ ಆಡಲು ಇವರಿಗೆ ಸಿಕ್ಕಿದ ಅವಕಾಶ ನಿಜಕ್ಕೂ ಅತ್ಯುತ್ತಮವಾದುದು. ಯಾವುದೇ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ತೋರಬಹುದು ಎಂಬ ವಿಶ್ವಾಸ ಈ ಆಟಗಾರರಲ್ಲಿ ಮೂಡುತ್ತದೆ. ಗಮನಾರ್ಹ ಪ್ರದರ್ಶನ ತೋರಿದ ವಿಜಯ್ ಜೋಲ್ `ಸರಣಿ ಶ್ರೇಷ್ಠ' ಗೌರವಕ್ಕೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದಿಂದ ಬಂದ ಕೆಲವೇ ದಿನಗಳಲ್ಲಿ ಭಾರತ ಜೂನಿಯರ್ ತಂಡದವರು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.ಜೋಲ್ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಎನ್‌ಸಿಎನಲ್ಲಿ ನಡೆದ 16 ವರ್ಷದೊಳಗಿನವರ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆಗ ಸೆಹ್ವಾಗ್ ಅವರನ್ನು ಭೇಟಿ ಮಾಡಲು ಅವಕಾಶ ಲಭಿಸಿತ್ತು. ಆ ಸಂದರ್ಭದಲ್ಲಿ ವೀರೂ ಈ ಹುಡುಗನಿಗೆ ಮಹತ್ವದ ಸಲಹೆ ನೀಡಿದ್ದರು. ಅಷ್ಟು ಮಾತ್ರವಲ್ಲದೇ, ಒಂದು ಬ್ಯಾಟ್ ಕೂಡ ಉಡುಗೊರೆಯಾಗಿ ನೀಡಿದ್ದರು.ಅದಾಗಿ ಕೆಲವೇ ದಿನಗಳಲ್ಲಿ ಎಡಗೈ ಬ್ಯಾಟ್ಸ್‌ಮನ್ ಜೋಲ್ ಕೂಚ್ ಬಿಹಾರ್ ಟ್ರೋಫಿ ಟೂರ್ನಿಯಲ್ಲಿ ಅಸ್ಸಾಂ ಎದುರು ಔಟಾಗದೆ 451 ರನ್ ಗಳಿಸಿ ರಾಷ್ಟ್ರದ ಗಮನ ಸೆಳೆದಿದ್ದರು. ಇದು ಭಾರತದ ಆಟಗಾರನೊಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ. ಅವರು ಬಿಸಿಸಿಐ ನೀಡುವ ಅತ್ಯುತ್ತಮ ಜೂನಿಯರ್ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾಗ್ದ್ದಿದಾರೆ. ಶಿವಮೊಗ್ಗದಲ್ಲಿ ನಡೆದ 19 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಪಶ್ಚಿಮ ವಲಯ ಚಾಂಪಿಯನ್ ಆಗಲು ಕಾರಣವಾಗಿದ್ದು ಜೋಲ್.2012ರ ಜೂನಿಯರ್ ವಿಶ್ವಕಪ್ ಗೆದ್ದ ತಂಡದಲ್ಲಿ ಜೋಲ್ ಕೂಡ ಇದ್ದರು. ಕೇರಳದ ಸಂಜು ಸ್ಯಾಮ್ಸನ್, ಮಹಾರಾಷ್ಟ್ರದ ಮತ್ತೊಬ್ಬ ಆಟಗಾರ ಅಖಿಲ್ ಹೆರ್ವಾಡ್ಕರ್ ಕೂಡ ಪ್ರತಿಭಾವಂತರು. ಸಂಜು ಅವರು ವಿಜಯ ಮರ್ಚೆಂಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಲಭಿಸಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡ್ದ್ದಿದಾರೆ.ಭಾರತದ ಮಟ್ಟಿಗೆ ಹೇಳಬೇಕೆಂದರೆ ವಿವಿಧ ವಯೋಮಾನ ವಿಭಾಗದ ಟೂರ್ನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಕೂಚ್ ಬಿಹಾರ್ ಟ್ರೋಫಿ, ವಿಜಯ ಮರ್ಚೆಂಟ್ ಟ್ರೋಫಿ ಹಾಗೂ ಇನ್ನಿತರ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷ ಉದಯೋನ್ಮುಖ ಆಟಗಾರರ ಟೂರ್ನಿಗಾಗಿ ವಿದೇಶಕ್ಕೆ ತಂಡ ಕಳುಹಿಸಲಾಗುತ್ತದೆ. ನಾಲ್ಕು ವಲಯಗಳ ಸದಸ್ಯರನ್ನು ಒಳಗೊಂಡ ಜೂನಿಯರ್ ಆಯ್ಕೆ ಸಮಿತಿಯೇ ಇದೆ. ಅಷ್ಟು ಮಾತ್ರವಲ್ಲದೇ, ರಾಜ್ಯ ಮಟ್ಟದಲ್ಲೂ ಹಲವು ಟೂರ್ನಿ ನಡೆಯುತ್ತವೆ. 14, 16 ಹಾಗೂ 19 ವರ್ಷದೊಳಗಿವರ ಕ್ರಿಕೆಟ್ ಟೂರ್ನಿಗಳು ಸತತವಾಗಿ ನಡೆಯುತ್ತಲೇ ಇರುತ್ತವೆ. ಕ್ಲಬ್‌ಗಳು ಕೂಡ ವಿವಿಧ ಟೂರ್ನಿ ಆಯೋಜಿಸುತ್ತವೆ. `ಯುವಕರ ಕ್ರಿಕೆಟ್‌ನಲ್ಲಿ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತ ಒಂದು ವರ್ಷ ಮುಂದೆ ಇದೆ' ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೇಗ್ ಚಾಪೆಲ್ ಕೂಡ ಒಪ್ಪಿಕೊಂಡಿದ್ದಾರೆ.ಬಿಸಿಸಿಐ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇಡುತ್ತಿದೆ. ಈ ಟೂರ್ನಿಗಳಿಗಾಗಿ ಮಂಡಳಿ ಪ್ರತ್ಯೇಕವಾಗಿ ಹಣ ಮೀಸಲಿಡುತ್ತಿದೆ. ಇದರಿಂದ ಯುವ ಆಟಗಾರರಿಗೆ ಉತ್ತಮ ಸೌಲಭ್ಯ ಸಿಗುತ್ತಿದೆ. ಮುಖ್ಯವಾಗಿ ಟರ್ಫ್ ಪಿಚ್‌ಗಳಲ್ಲಿ ಆಡಲು ಅವಕಾಶ ಸಿಗುತ್ತಿದೆ. ಉತ್ತಮ ಕೋಚ್‌ಗಳು, ಸಹಾಯಕ ಸಿಬ್ಬಂದಿ ಇದ್ದಾರೆ. ಜೊತೆಗೆ ಯುವ ಆಟಗಾರರಿಗೂ ಉತ್ತಮ ಸಂಭಾವನೆ  ಲಭಿಸುತ್ತಿದೆ. 16 ವರ್ಷದೊಳಗಿನ ಅತ್ಯುತ್ತಮ ಕ್ರಿಕೆಟಿಗನಿಗೆ ಹಾಗೂ 19 ವರ್ಷದೊಳಗಿನವರ ಅತ್ಯುತ್ತಮ ಕ್ರಿಕೆಟಿಗನಿಗೆ ಪ್ರತಿ ವರ್ಷ `ಎಂ.ಎ.ಚಿದಂಬರಂ ಟ್ರೋಫಿ `ನೀಡಿ ಗೌರವಿಸಲಾಗುತ್ತದೆ. ಹಾಗಾಗಿ ಇದು ಆಟಗಾರರಿಗೂ ಸ್ಫೂರ್ತಿ ಉಂಟು ಮಾಡುತ್ತಿದೆ. ಬಿಸಿಸಿಐ ಆಯೋಜಿಸುವ ಜೂನಿಯರ್ ಟೂರ್ನಿಗಳು

 ವಿಜಯ ಮರ್ಚೆಂಟ್-16 ವರ್ಷ

 ವಿನೂ ಮಂಕಡ್ ಟ್ರೋಫಿ-19 ವರ್ಷ

 ಕೂಚ್ ಬಿಹಾರ್ ಟ್ರೋಫಿ-19 ವರ್ಷ

 ಸಿ.ಕೆ.ನಾಯ್ಡು ಟ್ರೋಫಿ-25 ವರ್ಷಕೆಎಸ್‌ಸಿಎ ಆಯೋಜಿಸುವ ಜೂನಿಯರ್ ಟೂರ್ನಿಗಳು

ಬಿ.ಟಿ.ರಾಮಯ್ಯ ಶೀಲ್ಡ್ ಅಂತರ ಶಾಲಾ ಟೂರ್ನಿ-14 ವರ್ಷ

ಕೆಎಸ್‌ಸಿಎ ಕಪ್ ಅಂತರ ಶಾಲಾ ಟೂರ್ನಿ-16 ವರ್ಷ

ಅಂತರ ವಲಯ ಟೂರ್ನಿ-16 ವರ್ಷ

ಅಂತರ ವಲಯ ಟೂರ್ನಿ-19 ವರ್ಷ

ಕ್ಲಬ್ ಮಟ್ಟದ ಡಿವಿಷನ್ ಟೂರ್ನಿ-16 ವರ್ಷರಾಷ್ಟ್ರೀಯ ಸೀನಿಯರ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಜೂನಿಯರ್ ಟೂರ್ನಿಗಳು ಕೂಡ ಪ್ರಮುಖ ವೇದಿಕೆ. ಇಂಥ ಟೂರ್ನಿಗಳಲ್ಲಿ ತೋರಿದ ಗಮನಾರ್ಹ ಪ್ರದರ್ಶನದ ಮೂಲಕವೇ ಕೊಹ್ಲಿ, ಯುವಿ, ರೈನಾ ಅವರಂಥ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದ ದೇಶಗಳಿಗೆ ಹೋಲಿಸಿದರೆ ಜೂನಿಯರ್ ಮಟ್ಟದಲ್ಲಿ ಭಾರತದಲ್ಲಿ ಅನೇಕ ಟೂರ್ನಿಗಳು ನಡೆಯುತ್ತಿವೆ. ಈ ಬಗ್ಗೆ ಬಿಸಿಸಿಐ ಹೆಚ್ಚಿನ ಗಮನ ಹರಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.