ಮುಂಬೈ: `ಭಾರತ ತಂಡದವರು ಶಾಲಾ ಬಾಲಕರಂತೆ ಆಡುತ್ತಿದ್ದಾರೆ~ ಎಂದಿದ್ದ ಇಂಗ್ಲೆಂಡ್ನ ಮಾಜಿ ಆಟಗಾರ ಜೆಫ್ರಿ ಬಾಯ್ಕಾಟ್ ಈಗ ಏನು ಹೇಳುತ್ತಾರೊ ಗೊತ್ತಿಲ್ಲ? ಆದರೆ ಸೇಡಿನ ಸರಣಿಯಲ್ಲಿ ದೋನಿ ಬಳಗದ ಭರ್ಜರಿ ಬೇಟೆ ಮುಂದುವರಿದಿದೆ.

ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕರು ಎನಿಸಿರುವ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ಅವರ ರೋಷದ ಆಟಕ್ಕೆ ಇಂಗ್ಲೆಂಡ್ ನಡುಗಿ ಹೋಯಿತು. ಹಾಗಾಗಿ ಆತಿಥೇಯ ತಂಡ ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಮತ್ತೆ ಗೆಲುವಿನ ಬೆಳಕು ಚ್ಲ್ಲೆಲಲು ಕಾರಣವಾಯಿತು. ಅದರಲ್ಲೂ ಏಪ್ರಿಲ್ ಎರಡರಂದು ಇಲ್ಲಿಯೇ ನಡೆದ ವಿಶ್ವಕಪ್ ಫೈನಲ್ ತಪ್ಪಿಸಿಕೊಂಡಿದ್ದ ರೈನಾ ಆ ನಿರಾಸೆಯನ್ನು ಕೊಂಚ ಕಡಿಮೆ ಮಾಡಿಕೊಳ್ಳುವಲ್ಲಿ ಸಫಲರಾದರು.

ಪರಿಣಾಮ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಾಲ್ಕನೇ ಪಂದ್ಯದ್ಲ್ಲಲಿ ಭಾರತ ಆರು ವಿಕೆಟ್ಗಳ ಜಯಭೇರಿ ಮೊಳಗಿಸಿತು. ಜೊತೆಗೆ 4-0 ಮುನ್ನಡೆ. ಇದು ಪ್ರವಾಸಿ ತಂಡದ ಆಟಗಾರರ ಮನಸ್ಸನ್ನು ಮತ್ತಷ್ಟು ಗಾಸಿಗೊಳಿಸಿತು.

ರೈನಾ ಹಾಗೂ ಕೊಹ್ಲಿ ಒತ್ತಡವನ್ನು ಮೆಟ್ಟಿ ನಿಂತು ಆಡಿದ ಪರಿ ಅಮೋಘ. ಏಕೆಂದರೆ ಇವರಿಬ್ಬರು ಜೊತೆಗೂಡಿದಾಗ ಭಾರತದ ಪರಿಸ್ಥಿತಿ ಚಿಂತಾಜನಕ. 13.5 ಓವರ್ಗಳಲ್ಲಿ 46 ರನ್ಗಳಿಗೆ 3 ವಿಕೆಟ್ ಪತನಗೊಂಡಿದ್ದವು. ವೇಗಿ ಸ್ಟೀವನ್ ಫಿನ್ ತಮ್ಮ ಮೊದಲ ಸ್ಪೆಲ್ನಲ್ಲಿ (5-0-10-2) ಅಷ್ಟೊಂದು ಪ್ರಭಾವಿಯಾಗಿದ್ದರು.

ಆದರೆ ಈ ಹಂತದಲ್ಲಿ ಜೊತೆಗೂಡಿದ ರೈನಾ (80; 62 ಎಸೆತ, 12 ಬೌ.) ಹಾಗೂ ಕೊಹ್ಲಿ (ಔಟಾಗದೆ 86; 99 ಎಸೆತ, 11 ಬೌ.) ಪೈಪೋಟಿಯಲ್ಲಿ ರನ್ ಪೋಣಿಸುತ್ತಾ ಆ ಒತ್ತಡವನ್ನು ಹೊಡೆದೋಡಿಸಿದರು. ನಾಲ್ಕನೇ ವಿಕೆಟ್ಗೆ 131 ರನ್ (113 ಎಸೆತ) ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.

ಕೊಹ್ಲಿ ಚೆಂಡನ್ನು ಡ್ರೈವ್ ಮಾಡುತ್ತಾರೆ ಎಂಬ ಕಾರಣ ನಾಯಕ ಕುಕ್ ಆರು ಮಂದಿಯನ್ನು ಕ್ಯಾಚಿಂಗ್ ಪೊಜಿಷನ್ನಲ್ಲಿ ನಿಲ್ಲಿಸಿದ್ದರು. ಆದರೆ ವಿರಾಟ್ ಅವರನ್ನು ತಪ್ಪಿಸಿ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಿದ್ದರು. ರೈನಾ ಆಕ್ರಮಣಕಾರಿಯಾಗಿದ್ದ ಕಾರಣ ಎದುರಾಳಿಯ ಫೀಲ್ಡಿಂಗ್ ಯೋಜನೆಗಳೆಲ್ಲಾ ತಲೆಕೆಳಗಾದವು.

ವಾಂಖೇಡೆ ಕ್ರೀಡಾಂಗಣದಲ್ಲಿ ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. 1987ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತವನ್ನು ಮಣಿಸಿದ್ದ ಈ ತಂಡ 2002ರಲ್ಲಿ ಮತ್ತೊಮ್ಮೆ ಗ್ದ್ದೆದಿತ್ತು. ಆಗ ಆ್ಯಂಡ್ರ್ಯೂ ಫ್ಲಿಂಟಾಫ್ ಶರ್ಟ್ ಬಿಚ್ಚಿ ತಮ್ಮ ಖುಷಿ ವ್ಯಕ್ತಪಡಿಸಿದ್ದರು. ಆದರೆ ಈ ಅಂಗಳದಲ್ಲಿ ಗೆಲುವಿನ ಹ್ಯಾಟ್ರಿಕ್ ಸಂಭ್ರಮಕ್ಕೆ ದೋನಿ ಬಳಗ ಅವಕಾಶ ನೀಡಲಿಲ್ಲ.

ಬೌಲಿಂಗ್ ವೇಳೆ ಆರ್. ವಿನಯ್ ಕುಮಾರ್ ಅತ್ಯುತ್ತಮ ಫಾರ್ಮ್ನಲ್ಲಿರುವ ಟ್ರಾಟ್ ವಿಕೆಟ್ ಪಡೆದಿದ್ದು, ಸ್ಪಿನ್ನರ್ಗಳಾದ ಅಶ್ವಿನ್, ಜಡೇಜಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಕಡಿವಾಣ ಹೇರಿದ್ದು ಹಾಗೂ ಕೊನೆಯಲ್ಲಿ ವರುಣ್ ಆ್ಯರನ್ (24ಕ್ಕೆ3) ಮಿಂಚು ಹರಿಸಿದ್ದು ವಿಶೇಷ. ಪದಾರ್ಪಣೆ ಪಂದ್ಯದಲ್ಲಿ ವರುಣ್ ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು.

ಮೊದಲು ಬ್ಯಾಟ್ ಮಾಡಿದ್ದ ಈ ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿದ್ದು ಗೊತ್ತಿದ್ದರೂ ಕುಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಮುಂದಾದರು. ಎದುರಾಳಿ ಗುರಿಯನ್ನು ಬೆನ್ನಟ್ಟಿ ಭಾರತ ಕಳೆದ 10 ಪಂದ್ಯಗಳಲ್ಲಿ 9ರಲ್ಲಿ ಗ್ದ್ದೆದಿದೆ ಎಂಬುದೂ ಅವರಿಗೆ ನೆನಪಾಗಲಿಲ್ಲ!

ಅದೇ ರಾಗ ಅದೇ ಹಾಡು...
ಇಂಗ್ಲೆಂಡ್ ಪಾಡು ಅದೇ ರಾಗ ಅದೇ ಹಾಡು. ಆರಂಭಿಕ ಬ್ಯಾಟ್ಸ್ಮನ್ಗಳ ವೈಫಲ್ಯ, ಮಧ್ಯಮ ಕ್ರಮಾಂಕದ ಕುಸಿತ, ಕೊನೆಯ್ಲ್ಲಲಿ ಒಂದಿಷ್ಟು ಹೊತ್ತು ಆರ್ಭಟ. ಮೊಹಾಲಿ ಪಂದ್ಯದ ರೀತಿ ಇಲ್ಲೂ ಟ್ರಾಟ್ ಹಾಗೂ ಪೀಟರ್ಸನ್ ಜೊತೆಗೂಡಿ ಕೊಂಚ ಹೊತ್ತು ಬೆದರಿಕೆ ಹುಟ್ಟಿಸಿದ್ದರು. ಆದರೆ ಕರ್ನಾಟಕದ ವೇಗಿ ವಿನಯ್ ಈ ಸಂದರ್ಭದಲ್ಲಿ ಪಂದ್ಯಕ್ಕೊಂದು ಮಹತ್ವದ ತಿರುವು ನೀಡಿದರು.

ವಿನಯ್ ಅವರ ಎರಡನೇ ಸ್ಪೆಲ್ನ ಎರಡನೇ ಎಸೆತದಲ್ಲಿ ಟ್ರಾಟ್ಗೆ ಶಾಕ್ ನೀಡಿದರು. ಬ್ಯಾಟ್ ಹಾಗೂ ಪ್ಯಾಡ್ ನಡುವೆ ನುಸುಳಿದ ಚೆಂಡು ಆಫ್ ಸಂಪ್ಟ್ ಚದುರಿಸಿತು. ಅಷ್ಟರಲ್ಲಿ ಪೀಟರ್ಸನ್ ಹಾಗೂ ಟ್ರಾಟ್ ಮೂರನೇ ವಿಕೆಟ್ಗೆ 92 ಎಸೆತಗಳಲ್ಲಿ 73 ರನ್ ಸೇರಿಸಿ ಭರವಸೆ ಮೂಡಿಸಿದ್ದರು. ಆದರೆ ಇವರಿಬ್ಬರ ಜೊತೆಯಾಟ ಮುರಿದು ಬಿದ್ದ ನಂತರ ಕುಕ್ ಪಡೆಯ ಯೋಜನೆ ಹಳಿ ತಪ್ಪಿತು.

ಅಮೋಘ ಕ್ಯಾಚ್: ಬದಲಿ ಫೀಲ್ಡರ್ ಆಗಿ ಬಂದಿದ್ದ ಮನೋಜ್ ತಿವಾರಿ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ಅದರಲ್ಲೂ ಪೀಟರ್ಸನ್ ಔಟ್ ಆಗಲು ಕಾರಣವಾದ ಕ್ಯಾಚ್ ಪಡೆದ ರೀತಿ ಅದ್ಭುತ. ಕೆವಿನ್ ಸ್ವೀಪ್ ಮಾಡಿದ ಚೆಂಡನ್ನು ತಿವಾರಿ ಡೀಪ್ ಮಿಡ್ ವಿಕೆಟ್ ಬೌಂಡರಿ ಬಳಿ ಗಾಳಿಯಲ್ಲಿ ತೇಲಿ ಹಿಡಿತಕ್ಕೆ ಪಡೆದ ರೀತಿ ಅಮೋಘ.

ಸ್ಕೋರ್ ವಿವರ
ಇಂಗ್ಲೆಂಡ್ 46.1 ಓವರ್ಗಳಲ್ಲಿ 220
ಅಲಸ್ಟರ್ ಕುಕ್ ಎಲ್ಬಿಡಬ್ಲ್ಯು ಬಿ ಆರ್.ಅಶ್ವಿನ್ 10
ಕ್ರೇಗ್ ಕೀಸ್ವೆಟರ್ ಎಲ್ಬಿಡಬ್ಲ್ಯು ಬಿ ಪ್ರವೀಣ್ ಕುಮಾರ್ 29
ಜೊನಾಥನ್ ಟ್ರಾಟ್ ಬಿ ಆರ್.ವಿನಯ್ ಕುಮಾರ್ 39
ಕೆವಿನ್ ಪೀಟರ್ಸನ್ ಸಿ ಸಬ್ಸ್ಟಿಟ್ಯೂಟ್ (ಮನೋಜ್ ತಿವಾರಿ) ಬಿ ಆರ್.ಅಶ್ವಿನ್ 41
ರವಿ ಬೋಪಾರಾ ಎಲ್ಬಿಡಬ್ಲ್ಯು ಬಿ ರವೀಂದ್ರ ಜಡೇಜಾ 08
ಜೊನಾಥನ್ ಬೈಸ್ಟೋ ಬಿ ರವೀಂದ್ರ ಜಡೇಜಾ 09
ಸಮಿತ್ ಪಟೇಲ್ ಸಿ ವಿರಾಟ್ ಕೊಹ್ಲಿ ಬಿ ಆರ್.ಅಶ್ವಿನ್ 14
ಟಿಮ್ ಬ್ರೆಸ್ನನ್ ಬಿ ವರುಣ್ ಆ್ಯರನ್ 45
ಸ್ಕಾಟ್ ಬಾರ್ಥ್ವಿಕ್ ಬಿ ವರುಣ್ ಆ್ಯರನ್ 03
ಸ್ಟುವರ್ಟ್ ಮೀಕರ್ ಬಿ ವರುಣ್ ಆ್ಯರನ್ 01
ಸ್ಟೀವನ್ ಫಿನ್ ಔಟಾಗದೆ 01
ಇತರೆ (ಬೈ-4, ಲೆಗ್ಬೈ-2, ವೈಡ್-14) 20
ವಿಕೆಟ್ ಪತನ: 1-39 (ಕುಕ್; 5.6); 2-39 (ಕೀಸ್ವೆಟರ್; 6.1); 3-112 (ಟ್ರಾಟ್; 21.3); 4-128 (ಪೀಟರ್ಸನ್; 26.4); 5-140 (ಬೋಪಾರಾ; 29.4); 6-145 (ಬೈಸ್ಟೋ; 31.5); 7-192 (ಸಮಿತ್; 39.3); 8-205 (ಬಾರ್ಥ್ವಿಕ್; 42.1); 9-215 (ಮೀಕರ್; 44.5); 10-220 (ಬ್ರೆಸ್ನನ್; 46.1).
ಬೌಲಿಂಗ್: ಪ್ರವೀಣ್ ಕುಮಾರ್ 7-1-41-1 ( ವೈಡ್ಸ್-3), ಆರ್.ವಿನಯ್ ಕುಮಾರ್ 7-1-41-1, ಆರ್.ಅಶ್ವಿನ್ 10-0-38-3, ರವೀಂದ್ರ ಜಡೇಜಾ 10-0-41-2, ವರುಣ್ ಆ್ಯರನ್ 6.1-1-24-3 (ವೈಡ್ಸ್-2), ವಿರಾಟ್ ಕೊಹ್ಲಿ 4-0-14-0, ಸುರೇಶ್ ರೈನಾ 2-0-15-0.

ಭಾರತ 40.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 223
ಪಾರ್ಥಿವ್ ಪಟೇಲ್ ಬಿ ಸ್ಟೀವನ್ ಫಿನ್ 08
ಅಜಿಂಕ್ಯ ರಹಾನೆ ಸಿ ಕೀಸ್ವೆಟರ್ ಬಿ ಸ್ಟುವರ್ಟ್ ಮೀಕರ್ 20
ಗೌತಮ್ ಗಂಭೀರ್ ಬಿ ಸ್ಟೀವನ್ ಫಿನ್ 01
ವಿರಾಟ್ ಕೊಹ್ಲಿ ಔಟಾಗದೆ 86
ಸುರೇಶ್ ರೈನಾ ಬಿ ಸ್ಟೀವನ್ ಫಿನ್ 80
ಎಂ.ಎಸ್.ದೋನಿ ಔಟಾಗದೆ 15
ಇತರೆ (ಬೈ-1, ಲೆಗ್ಬೈ-6, ವೈಡ್-5, ನೋಬಾಲ್-1) 13
ವಿಕೆಟ್ ಪತನ: 1-18 (ಪಾರ್ಥಿವ್; 5.3); 2-21 (ಗಂಭೀರ್; 7.4); 3-46 (ರಹಾನೆ; 13.5); 4-177 (ರೈನಾ; 32.4).
ಬೌಲಿಂಗ್: ಟಿಮ್ ಬ್ರೆಸ್ನನ್ 10-0-40-2 (ನೋಬಾಲ್-1, ವೈಡ್-3), ಸ್ಟೀವನ್ ಫಿನ್ 10-0-45-3, ಸ್ಕಾಟ್ ಬಾರ್ಥ್ವಿಕ್ 8-0-59-0, ಸ್ಟುವರ್ಟ್ ಮೀಕರ್ 9-1-45-1, ಸಮಿತ್ ಪಟೇಲ್ 1.1-0-9-0, ರವಿ ಬೋಪಾರಾ 2-0-18-0 (ವೈಡ್-1)
ಫಲಿತಾಂಶ: ಭಾರತಕ್ಕೆ 6 ವಿಕೆಟ್ ಗೆಲುವು ಹಾಗೂ ಸರಣಿಯಲ್ಲಿ 4-0 ಮುನ್ನಡೆ.
ಪಂದ್ಯ ಶ್ರೇಷ್ಠ: ಸುರೇಶ್ ರೈನಾ. ಐದನೇ ಪಂದ್ಯ: ಅಕ್ಟೋಬರ್ 25 (ಕೋಲ್ಕತ್ತ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.