ಕೆರೆಯ ನಡುವಿನ ಆ ಪುಟ್ಟ ಪುಟ್ಟ ನಡುಗಡ್ಡೆಗಳಲ್ಲಿ ಪರಮ ಧ್ಯಾನಿಗಳೆಲ್ಲ ಒಟ್ಟು ಸೇರಿ ಸೂರ್ಯನನ್ನು ತದೇಕ ಚಿತ್ತದಿಂದ ನೆನೆಯುತ್ತ ತಲ್ಲೆನರಾದಂತೆ ಕಂಡಿತು ಆ ನೋಟ.
ಅಲ್ಲವೇ ಮತ್ತೆ? ಬಕಪಕ್ಷಿಗಳಿಗೆ `ಧ್ಯಾನಿ~ಗಳೆಂಬ ಹೆಸರೂ ಇದೆಯಲ್ಲ. ಅವುಗಳಿವೆ ಸಾಥ್ ನೀಡುವಂತೆ ದೇಶ, ವಿದೇಶದ ಚಳಿಗಾಲದ ವಲಸೆ ಬಾತುಗಳು, ಜೊತೆಗೆ ಸ್ಥಳೀಯ ಬೆಳ್ಳಕ್ಕಿಗಳು, ಬಿಳಿ ಬೂಶಾಗಳು (ವೈಟ್ ಐಬಿಸ್), ಸ್ಪೂನ್ ಬಿಲ್ಗಳು ಸೇರಿದಂತೆ ಹಲವು ಜಾತಿಯ ನೀರ ಹಕ್ಕಿಗಳು ಮೌನವ್ರತಧಾರಿಗಳಾಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಚಳಿ ಕಾಯಿಸುತ್ತಿದ್ದವು!

ದೇಶಿ, ವಿದೇಶಿ ಸೇರಿದಂತೆ ಅಳಿವಿನಂಚಿನ ಸುಮಾರು 35 ಜಾತಿಯ ಜಲ ಪಕ್ಷಿಗಳು ಕೆರೆಯಲ್ಲಿ ಕಂಡರೆ, ಗಿಡ ಹಾಗೂ ನೆಲದ ಮೇಲೆ ವಾಸಿಸುವ 15 ಜಾತಿಯ ಹಕ್ಕಿಗಳು ಕೆರೆ ಸುತ್ತ ಇದ್ದವು. ಒಟ್ಟಾರೆ ಅಲ್ಲಿ ಸುಮಾರು 900 ರಿಂದ 1000 ದಷ್ಟು ಹಕ್ಕಿಗಳ ಜಮಾವಣೆ ಇತ್ತು.

ವೈವಿಧ್ಯಮಯ ಬಾನಾಡಿಗಳಿಂದ ತುಂಬಿದ್ದ ಆ ಕೆರೆಯ ನಡುಗಡ್ಡೆಗಳನ್ನು ನೋಡುವುದೇ ಚಂದ. ಅದೇ ಹಿರೇಕೆರೆಯ ಹಿರಿತನ. ಮಲೆನಾಡಿನ ಸೆರಗಿನ ಕೆರೆಗಳಲ್ಲೊ ಅಥವಾ ಇತರ ವಿಸ್ತಾರವಾದ ಸಮೃದ್ಧ ಕೆರೆಗಳಲ್ಲೊ ಈ ದೃಶ್ಯ ಕಂಡು ಬಂದರೆ ಅಚ್ಚರಿ ಇರಲಿಲ್ಲ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮುಕ್ಕಲ್ ಗ್ರಾಮದ ಹಿರೇಕೆರೆಯಲ್ಲಿ ಇದು ಕಣ್ಮನ ಸೆಳೆಯುವ ವಿದ್ಯಮಾನ. ಸುಮಾರು ಐದಾರು ಎಕರೆ ವಿಸ್ತಾರದ ಆ ಸಣ್ಣ ಕೆರೆಯಲ್ಲಿ ಅಷ್ಟೊಂದು ಜಾತಿಯ ಬಾನಾಡಿಗಳ ಮೇಳ ಹೇಗೆ ಸಾಧ್ಯವಾಯಿತು? ಅಂಥ ಆಕರ್ಷಣೆ ಕೆರೆಯಲ್ಲೇನಿದೆ? ಎಂಬುದೇ ಅಚ್ಚರಿ. ಅಂದ ಹಾಗೆ ಕಲಘಟಗಿಯಿಂದ ತಡಸ ರಸ್ತೆಯಲ್ಲಿ 12 ಕಿ.ಮೀ. ದೂರದಲ್ಲಿದೆ ಈ ಹಿರೇಕೆರೆ.

ಕೆರೆಗಳ ಪುನಶ್ಚೇತನಕ್ಕಾಗಿ ದುಡಿಯುವ ಧಾರವಾಡದ ಜಿಲ್ಲಾ ಜಲ ಸಂಪನ್ಮೂಲ ಇಲಾಖೆಯ (ಸಣ್ಣ ನೀರಾವರಿ) ಜಲ ಸಂವರ್ಧನೆ ಯೋಜನಾ ಸಂಘದ (ಜೆಎಸ್ವೈಎಸ್) ಅಡಿಯಲ್ಲಿ ಕೆರೆ ಸಮೀಕ್ಷೆಗೆ ಹೊರಟ ಪಕ್ಷಿ ವೀಕ್ಷಕ ಅತ್ತಿವೇರಿ ಮಹೇಶ್ಗೆ ಇದೇ ಮೊದಲ ಬಾರಿಗೆ ಆ ಕೆರೆಯಲ್ಲಿ ಅಷ್ಟೊಂದು ಬಗೆಯ ಹಕ್ಕಿಗಳ ಜಾತ್ರೆ ಕಂಡು ವಿಸ್ಮಯ. ಸುತ್ತ ಹಲವು ಕೆರೆಗಳಿದ್ದರೂ ಹಿರೇಕೆರೆಗೆ ಮಾತ್ರ ಏಕೆ ಅಷ್ಟೊಂದು ಹಕ್ಕಿಗಳು ಬಂದಿವೆ ಎಂಬ ಕುತೂಹಲ.

ಜೆಎಸ್ವೈಎಸ್ ಧಾರವಾಡ ಜಿಲ್ಲೆಯಲ್ಲಿ ಆಯ್ದ ಕೆರೆಗಳ ಹೂಳು ತೆಗೆದು ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಕೆರೆಯ ಅಂತರ್ಜಲ ಹೆಚ್ಚಿಸುವುದರ ಮೂಲಕ ಕೃಷಿಗೆ ನೀರು ಒದಗಿಸುವುದು ಇದರ ಮುಖ್ಯ ಉದ್ದೇಶ. ಈ ಕಾರ್ಯವನ್ನು ವಹಿಸಿಕೊಂಡು ಸಮೀಕ್ಷೆ ನಡೆಸಿದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ.ಎ.ರಾಜು ಅವರಿಗೆ ಕೆರೆಗಳಲ್ಲಿ ಕಾಣಲು ಸಿಗುತ್ತಿದ್ದ ನೀರು ಹಕ್ಕಿಗಳಿಗೂ ಏನಾದರೂ ಅನುಕೂಲ ಮಾಡಬೇಕು ಎಂಬ ಆಸೆ. ಹಾಗಾಗಿ ಹಿರೇಕೆರೆಯ ಹೂಳು ತೆಗೆದಾಗ ದೊರೆತ ಮಣ್ಣಿನಿಂದ ಮೂರ್ನಾಲ್ಕು ನಡುಗಡ್ಡೆಗಳನ್ನು ಸೃಷ್ಟಿಸಿದರು.

ದ್ವೀಪಗಳಂತಿರುವ ಆ ನಡುಗಡ್ಡೆಗಳು ಈಗ ಹಕ್ಕಿಗಳನ್ನು ಆಕರ್ಷಿಸುತ್ತಿವೆ. ಕೆರೆಗೆ ಬಂದ ಚಳಿಗಾಲದ ವಿದೇಶಿ ವಲಸೆ ಹಕ್ಕಿಗಳು ಹಾಗೂ ಸ್ಥಳೀಯ ಹಕ್ಕಿಗಳು ನೀರಲ್ಲಿ ಈಜಾಡಿ, ಮುಳುಗು ಹಾಕಿ, ಆಹಾರ ಹೆಕ್ಕಿ ಸುಸ್ತಾದಾಗ ಆ ನಡುಗಡ್ಡೆಗಳಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಮುಂದಾಲೋಚನೆ ಫಲ ಕೊಟ್ಟಿದೆ ಎಂಬ ಖುಷಿ ರಾಜು ಅವರಿಗೆ. ಆ ನಡುಗಡ್ಡೆಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಇನ್ನಷ್ಟು ಹಕ್ಕಿಗಳನ್ನು ಆಕರ್ಷಿಸಬೇಕು ಎನ್ನುತ್ತಾರೆ ಅವರು. `ಕಳೆದ ವರ್ಷ ಸರ್ಕಾರದವರು ಕೆರೆಯ ಹೂಳು ತೆಗೆದಿದ್ದಾರೆ.

ಆದರೆ ಆಗ ಇಷ್ಟೊಂದು ಹಕ್ಕಿಗಳು ಇರಲಿಲ್ಲ. ಆದರೆ ಈ ಬಾರಿ ತುಂಬಾ ಹಕ್ಕಿಗಳು ಬಂದಿವೆ. ಕೆರೆಯ ಹಕ್ಕಿಗಳನ್ನು ಬೆಟೆಯಾಡಲು ಹೊರಗಿನಿಂದ ಜನ ಬರುತ್ತಿದ್ದರು. ಅವರನ್ನೆಲ್ಲ ತಡೆದು ಹಕ್ಕಿಗಳನ್ನು ಸಾಯಿಸದಂತೆ ಬುದ್ಧಿ ಹೇಳಿ ವಾಪಸ್ ಕಳ್ಸಿದ್ದೀವಿ.

ಕೆರೆಗೆ ಹಾಗೂ ಹಕ್ಕಿಗಳಿಗೆ ರಕ್ಷಣೆ ನೀಡಲು ಸ್ಥಳೀಯ ರೈತರೆಲ್ಲರೂ ಬದ್ಧ. ಪ್ರಾಣಿ , ಪಕ್ಷಿಗಳನ್ನು ಉಳಿಸಬೇಕಲ್ಲ. ಅವು ಉಳಿದರೆ ನಾವೂ ಉಳೀತೇವೆ~ ಎನ್ನುತ್ತಾರೆ ಸ್ಥಳೀಯ ಗ್ರಾಮದೇವತೆ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಲಿಂಗನಗೌಡ ರಾ. ಪಾಟೀಲ.

ಹಿರೇಕೆರೆಯಲ್ಲಿ `ನೀರು ಹಕ್ಕಿಗಳ~ ಸಂಖ್ಯೆಯೇ ಹೆಚ್ಚು. ಆದರೆ ಅಷ್ಟೇ ಪ್ರಮಾಣದಲ್ಲಿ `ನೀರು ನಡಿಗೆ ಹಕ್ಕಿಗಳು~ (ವೇಡರ್ಸ್) ಕಾಣಲು ಸಿಕ್ಕಿಲ್ಲ. ಬಹುಶಃ ಜಲ ಸಸ್ಯಗಳಿಂದ ಕೂಡಿದ ಇಳಿಜಾರಾದ ಕೆರೆ ಅಂಚು ಇಲ್ಲದ್ದು ಇದಕ್ಕೆ ಕಾರಣ. ಸಮೃದ್ಧ ಆಹಾರ, ಭದ್ರತೆ ಹಾಗೂ ಸೂಕ್ತ ಹವಾಮಾನ ಹಕ್ಕಿಗಳ ಆಕರ್ಷಣೆಗೆ ಕಾರಣ ಇರಬಹುದು. ಇಷ್ಟೊಂದು ಜಾತಿಯ ಹಕ್ಕಿಗಳು ಸೇರುವ ಇನ್ನೊಂದು ಕೆರೆ ಧಾರವಾಡ ಜಿಲ್ಲೆಯಲ್ಲಿಯೇ ಇಲ್ಲ ಎನ್ನುತ್ತಾರೆ ನಾರ್ಥ್ ಕರ್ನಾಟಕ ಬರ್ಡರ್ಸ್ ನೆಟ್ವರ್ಕ್ (ಎನ್ಕೆಬಿಎನ್) ಕಾರ್ಯದರ್ಶಿ ಗುರುನಾಥ ದೇಸಾಯಿ.

`ಹಿರೇಕೆರೆ ಫಲವತ್ತಾದ ಎರೆ ಮಣ್ಣಿನಿಂದ ಕೂಡಿದೆ. ಅದರಲ್ಲಿ ಸಮೃದ್ಧವಾಗಿ ಜಲಜೀವಿಗಳು ಬೆಳೆಯಲು ಸಾಧ್ಯ. ಇವೇ ಹಕ್ಕಿಗಳ ಆಹಾರವೂ ಹೌದು, ಆಕರ್ಷಣೆಯೂ ಹೌದು. ಕೆರೆ ದಂಡೆಯಲ್ಲೇ ನಿಂತು ಹತ್ತಿರದಿಂದ ಹಕ್ಕಿಗಳನ್ನು ವೀಕ್ಷಿಸಬಹುದು. ಇದೇ ಹಿರೇಕೆರೆಯ ಸೊಗಸು. ಇಂಥ ಸಣ್ಣ ಕೆರೆ ಅಷ್ಟೊಂದು ವೈವಿಧ್ಯಮಯ ಜಾತಿಯ ಹಕ್ಕಿಗಳನ್ನು ಆಕರ್ಷಿಸುತ್ತಿರುವುದು ನಿಜಕ್ಕೂ ಅಚ್ಚರಿ. ಹಕ್ಕಿಗಳ ರಕ್ಷಣೆ ಮಾಡುತ್ತಿರುವ ಸ್ಥಳೀಯ ರೈತರು ಅಭಿನಂದನೆಗೆ ಅರ್ಹರು~ ಎನ್ನುತ್ತಾರೆ ಖ್ಯಾತ ಛಾಯಾಗ್ರಾಹಕ ಅಶೋಕ ಮನಸೂರ.

ಕೆರೆಗಳ ಹೂಳು ತೆಗೆಯುವಾಗ ಅಲ್ಲಿನ ಪರಿಸರ ವ್ಯವಸ್ಥೆ, ಜಲ ಜೀವಿಗಳ ಸಂರಕ್ಷಣೆಯ ಕಡೆಗೂ ಗಮನ ಹರಿಸುವುದು ಬಹಳ ಅಗತ್ಯ. ಯಾರದೊ ಕಾಳಜಿಯಿಂದ ಇನ್ಯಾರಿಗೊ ಅನುಕೂಲ. ಸರ್ಕಾರಿ ಅಧಿಕಾರಿಗಳು ಪರಿಸರ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದರೆ ಅದರ ಪರಿಣಾಮ ಎಷ್ಟೊಂದು ಸೊಗಸು ಎಂಬುದಕ್ಕೆ ಸಾಕ್ಷಿ ಈ ಹಿರೇಕೆರೆ.

ಅಪರೂಪದ ಹಕ್ಕಿಗಳು
ಹಿರೇಕೆರೆಯಲ್ಲಿ ಕಾಣಲು ಸಿಕ್ಕಿದ ಅಪರೂಪದ (ಸ್ಥಳೀಯ ಹಕ್ಕಿಗಳನ್ನು ಹೊರತುಪಡಿಸಿ) ವಿದೇಶಿ ವಲಸೆಗಾರ ಹಾಗೂ ಅಳಿವಿನಂಚಿನ ಹಕ್ಕಿಗಳೆಂದರೆ ಪೇಂಟೆಡ್ ಸ್ಟಾರ್ಕ್, ಲೆಸ್ಸರ್ ಅಜುಟೆಂಟ್ ಸ್ಟಾರ್ಕ್, ಕೊಂಬ್ ಡಕ್ , ಬ್ರಾಹ್ಮಿನಿ ಡಕ್, ಸ್ನೈಪ್, ಮಾರ್ಷ್ ಸ್ಯಾಂಡ್ ಪೈಪರ್, ಕಾಮನ್ ಸ್ಯಾಂಡ್ ಪೈಪರ್, ವುಡ್ ಸ್ಯಾಂಡ್ ಪೈಪರ್, ಕೆಂಟಿಷ್ ಪ್ಲೊವರ್, ಗ್ರೇ ವ್ಯಾಗ್ಟೈಲ್, ವೈಟ್ ವ್ಯಾಗ್ಟೈಲ್, ಯಲ್ಲೊ ವ್ಯಾಗ್ಟೈಲ್, ಗಾರ್ಗನಿ, ನಾರ್ದನ್ ಶಾವೆಲರ್, ನಾರ್ದನ್ ಪಿನ್ಟೈಲ್, ಮಾರ್ಷ್ ಹ್ಯಾರಿಯರ್, ಕಾಮನ್ ಸ್ವಾಲೊ, ಆ್ಯಷಿ ಡ್ರಾಂಗೊ, ಗೀನ್ ಶ್ಯಾಂಕ್, ರೆಡ್ ಶ್ಯಾಂಕ್ ಮೊದಲಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.