ಕೋಲಾರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ನಗರದಲ್ಲಿ ಬುಧವಾರ ಚುನಾವಣಾಧಿಕಾರಿ ಡಿ.ಕೆ.ರವಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ 11.30ರ ವೇಳೆಗೆ ಚುನಾವಣಾಧಿಕಾರಿ ಕಚೇರಿಗೆ ಬಂದ ಮುನಿಯಪ್ಪ ಎರಡು ನಾಮಪತ್ರಗಳನ್ನು ಸಲ್ಲಿಸಿದರು. ನಾಮಪತ್ರಕ್ಕೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ಸರಿಯಾಗಿ ಸಜ್ಜುಗೊಳಿಸಿಕೊಳ್ಳದ ಪರಿಣಾಮವಾಗಿ ಸುಮಾರು 10 ನಿಮಿಷ ಕಾಲ ತಡವಾಯಿತು. ಮಧ್ಯಾಹ್ನ 12 ಗಂಟೆಯಿಂದ ರಾಹುಕಾಲ ಆರಂಭವಾಗಲಿದ್ದ ಹಿನ್ನೆಲೆಯಲ್ಲಿ ಅವರು 11.50ರ ವೇಳೆಗೆ ಮೊದಲನೇ ನಾಮಪತ್ರವನ್ನು ಸಲ್ಲಿಸಿದರು. ಕೊಂಚ ಉದ್ವಿಗ್ನರಾದಂತೆ ಕಂಡು ಬಂದ ಅವರು, ಎರಡನೇ ನಾಮಪತ್ರವನ್ನು ಸಲ್ಲಿಸುವ ಹೊತ್ತಿಗೆ ಮಧ್ಯಾಹ್ನ 12.15 ಆಗಿತ್ತು.

ಮುನಿಯಪ್ಪ ಅವರೊಂದಿಗೆ ಇದ್ದ ವಕೀಲ ವಾಸುದೇವರಾವ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್ ಎರಡೂ ನಾಮಪತ್ರಗಳಿಗೆ ಅಗತ್ಯವಿರುವ ಪ್ರಮಾಣಪತ್ರಗಳ ಜೋಡಣೆಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಬಂದ ಎಚ್.ವಿ.ಕುಮಾರ್ ಮುನಿಯಪ್ಪ ಭಾವಚಿತ್ರಗಳನ್ನು ನೀಡಿದರು. ನಂತರ ಮುನಿಯಪ್ಪ ಅಗತ್ಯವಿರುವೆಡೆ ಸಹಿಗಳನ್ನು ಮಾಡಿದ ಬಳಿಕ ನಾಮಪತ್ರಗಳನ್ನು ಸಲ್ಲಿಸಿದರು. ಅವರೊಡನೆ ಪತ್ನಿ ನಾಗರತ್ನಮ್ಮ, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಇದ್ದರು.

ನೂಕುನುಗ್ಗಲು: ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯೊಡನೆ ಕೇವಲ ನಾಲ್ಕು ಮಂದಿ ಮಾತ್ರ ಹಾಜರಿರಬೇಕು ಎಂಬ ಸೂಚನೆ ಇದ್ದರೂ, ಮುನಿಯಪ್ಪ ಅವರೊಡನೆ ಬಂದ ಶಾಸಕ ಕೆ.ಎಂ.ನಾರಾಯಣಸ್ವಾಮಿ, ನಸೀರ್ ಅಹ್ಮದ್ ಅವರೊಡನೆ ಹಲವು ಮುಖಂಡರು ಕೂಡ ಜಿಲ್ಲಾಧಿಕಾರಿ ಕಚೇರಿಯೊಳಕ್ಕೆ ನುಗ್ಗಿದರು. ಕೊಂಚ ಕ್ಷಣ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಅನವಶ್ಯಕವಾದ ಎಲ್ಲರನ್ನೂ ಆಚೆ ಕಳಿಸಲು ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಂಟಾದ ಗಲಿಬಿಲಿ ಪರಿಣಾಮ ನಸೀರ್ ಅಹ್ಮದ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕೂಡ ಆಚೆಗೆ ತೆರಳಿದರು. ಕೂಡಲೇ ನಸೀರ್ ಅಹ್ಮದ್ ಅವರನ್ನು ಕರೆತರುವಂತೆ ಮುನಿಯಪ್ಪ ಕೆ.ಎಂ.ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು. ನಸೀರ್ ಅಹ್ಮದ್ ಅವರನ್ನು ಒಳಗೆ ಬರಮಾಡಿಕೊಂಡ ನಾರಾಯಣಸ್ವಾಮಿ ನಿರ್ಗಮಿಸಿದರು. ಕೆಲ ಹೊತ್ತಿನ ಬಳಿಕ ಬಂದ ಶಾಸಕರಾದ ಜಿ.ಮಂಜುನಾಥ್ ಮತ್ತು ಕೆ.ಆರ್.ರಮೇಶ್ಕುಮಾರ್ ಹೊರಗೆ ಇರುವುದಾಗಿ ತಿಳಿಸಿ ನಿರ್ಗಮಿಸಿದರು.

ನೂಕುನುಗ್ಗಲು: ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶವಿರುವ ದಾರಿಯಲ್ಲಿ ಕಾರ್ಯಕರ್ತರನ್ನು ತಡೆಗಟ್ಟಲು ನಿಲ್ಲಿಸಿದ್ದ ಬ್ಯಾರಿಕೇಡ್ ಅನ್ನು ನೂಕಿ ಕಾರ್ಯಕರ್ತರ ನುಗ್ಗಿದ ಘಟನೆಯೂ ನಡೆಯಿತು. ತಳ್ಳಾಟಕ್ಕೆ ಕಾರಣರಾದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಕೂಡ ಬಲಪ್ರಯೋಗ ಮಾಡಬೇಕಾಯಿತು. ಆದರೂ ಕಾರ್ಯಕರ್ತರು ಮುನಿಯಪ್ಪ ಅವರೊಡನೆ ಜಿಲ್ಲಾಧಿಕಾರಿ ಕಚೇರಿವರೆಗೂ ಬಂದರು.

ಮುನಿಯಪ್ಪ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಚೇರಿಯ ಹೊರಗೆ ನಿಂತಿದ್ದ ಹಲವು ಮುಖಂಡರು, ಕಾರ್ಯಕರ್ತರನ್ನು ಬ್ಯಾರಿಕೇಡ್ನಿಂದ ಹೊರಕ್ಕೆ ನಿಲ್ಲಿಸುವ ಪೊಲೀಸರ ಪ್ರಯತ್ನ ಸಫಲವಾಗಲಿಲ್ಲ. ಡಿಎಸ್ಪಿ ಕೆ.ಅಶೋಕ್ ಕುಮಾರ್ ಮಾಡಿದ ಮನವಿಗೂ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸದೇ ನಿಂತಲ್ಲೇ ನಿಂತಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಹೊರಬಂದ ಮುನಿಯಪ್ಪ ಅವರಿಂದ ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮದವರ ಪ್ರಯತ್ನವೂ ಸಫಲವಾಗಲಿಲ್ಲ. ಬ್ಯಾರಿಕೇಡ್ನಿಂದ ಆಚೆಗೆ ಎಲ್ಲರನ್ನೂ ಆಚೆ ಕಳಿಸಲಾಯಿತು. ನಂತರ ರಸ್ತೆ ಬದಿಯಲ್ಲೇ ವಾಹನದಲ್ಲಿ ನಿಂತ ಮುನಿಯಪ್ಪ ಕಾರ್ಯಕರ್ತರನ್ನು ಉದ್ದೇಶಿಸಿ ಕೆಲ ನಿಮಿಷ ಮಾತನಾಡಿದರು. ಈ ಸಂದರ್ಭದಲ್ಲಿ ವಾಹನ, ಜನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಭೇಟಿ: ನಾಮಪತ್ರ ಸಲ್ಲಿಸುವುದಕ್ಕೂ ಮುಂಚೆ ಮುನಿಯಪ್ಪ ಮುಳಬಾಗಲು ತಾಲ್ಲೂಕಿನ ಕುರುಡುಮಲೆ ವಿನಾಯಕ ದೇವಾಲಯ, ಮುಳಬಾಗಲಿನ ಆಂಜನೇಯ ದೇವಾಲಯ, ದರ್ಗಾ, ಕೋಲಾರ ತಾಲ್ಲೂಕಿನ ಕೊಂಡರಾಜನಹಳ್ಳಿಯ ಆಂಜನೇಯ ದೇವಾಲಯ, ನಗರದ ಸಾಯಿಮಂದಿರಕ್ಕೆ ಭೇಟಿ ನೀಡಿದ್ದರು. ನಂತರ, ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮತ್ತು ಗಾಂಧಿವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಾಮಪತ್ರ ಸಲ್ಲಿಸಿದ ಬಳಿಕ ಮೆಥೋಡಿಸ್ಟ್ ಚರ್ಚಿಗೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.