ಹುಣಸೂರು: ಇದು ನಂಬಲಸಾಧ್ಯವಾದರೂ ಸತ್ಯ. ಗ್ರಾಮದ ಸುತ್ತ ಮೂರು ಕೆರೆಗಳಿದ್ದರೂ ಬೀಜಗನಹಳ್ಳಿ ಗ್ರಾಮಸ್ಥರಿಗೆ ವಾರಕ್ಕೆ ಒಂದೇ ಬಾರಿ ನೀರು ಸಿಗುತ್ತದೆ!

ತಾಲ್ಲೂಕಿನ ಬಿಳಿಕೆರೆ ಹೋಬಳಿಯಲ್ಲಿ ಬರುವ ಈ ಗ್ರಾಮದಲ್ಲಿ ಕುಡಿಯುವ ನೀರಿಗೆ ಪರದಾಟ ತಪ್ಪಿಲ್ಲ. ಗ್ರಾಮದ ಸುತ್ತ ಮೂರು ಕೆರೆಗಳಿದ್ದು, ಅದರಲ್ಲಿ ಒಂದು `ದೊಡ್ಡಕೆರೆ~ ಇದೆ. ಮೈಸೂರು ನಗರಕ್ಕೆ ಹತ್ತಿರದಲ್ಲಿರುವ ಈ ಗ್ರಾಮ ಮೂಲ ಸವಲತ್ತುಗಳಿಂದ ವಂಚಿತವಾಗಿದೆ. `ಸುವರ್ಣ ಗ್ರಾಮ ಯೋಜನೆ~ಗೂ ಈ ಗ್ರಾಮವನ್ನು ಸೇರಿಸಲಾಗಿತ್ತು. ಆದರೆ, ಕೊನೆ ಹಂತದಲ್ಲಿ ಕೈಬಿಡಲಾಗಿದೆ.

ಬಹುತೇಕ ಕುರುಬ ಸಮಾಜದವರೇ ವಾಸಿಸುತ್ತಿರುವ ಬೀಜಗನಹಳ್ಳಿ ಗ್ರಾಮದಲ್ಲಿ 2500 ಜನಸಂಖ್ಯೆ ಇದೆ. ವಾರಕ್ಕೊಂದೇ ಬಾರಿ ಕುಡಿಯುವ ನೀರು ನೀಡಲಾಗುತ್ತಿದೆ. ಹೀಗಾಗಿ ಪ್ರತಿ ಮನೆ ಎದುರಿನಲ್ಲಿ ದೊಡ್ಡ ಗುಂಡಿಗಳನ್ನು ತೋಡಿಕೊಂಡು ಜನ ನೀರು ಸಂಗ್ರಹಿಸಲು ಮುಂದಾಗಿದ್ದಾರೆ.

`ಕೆಆರ್ಎಸ್ನಿಂದ ದೊಡ್ಡಬೀಚನಹಳ್ಳಿ ಗ್ರಾಮದವರಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ದೊಡ್ಡಬೀಚನಹಳ್ಳಿ ಗ್ರಾಮಕ್ಕೂ ನಮ್ಮ ಗ್ರಾಮಕ್ಕೂ ಕೇವಲ 1 ಕಿ.ಮೀ. ದೂರವಿದೆ. ಹಾಗಾಗಿ ಬೀಚನಹಳ್ಳಿ ಗ್ರಾಮಕ್ಕೂ ಇದೇ ನೀರು ನೀಡುವಂತೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಜನಪ್ರತಿನಿಧಿಗಳಿಗೆ ಈ ಬಗ್ಗೆ ಆಸಕ್ತಿ ಇಲ್ಲ. ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲ~ ಎನ್ನುತ್ತಾರೆ ಇಲ್ಲಿನ ನಿವಾಸಿ ಬಸವರಾಜ್.

ಶಾಶ್ವತ ಪರಿಹಾರ ನೀಡಿ:
ದೊಡ್ಡಬೀಚನಹಳ್ಳಿ ವರೆಗೆ ಹರಿಸಲಾಗುವ ಕಾವೇರಿ ನೀರನ್ನು ಮತ್ತೆ ಒಂದು ಕಿ.ಮೀ. ದೂರದ ಬೀಚನಹಳ್ಳಿ ಗ್ರಾಮಕ್ಕೂ ನೀಡಬಹುದು. ಇದರೊಂದಿಗೆ ಈ ಗ್ರಾಮದ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಮಾತ್ರವಲ್ಲ; ಈ ಭಾಗದ ಕೃಷಿಕರು ಬಹುತೇಕ ಜೋಳ, ರಾಗಿ, ಎಳ್ಳು ಬೆಳೆಯುತ್ತಿದ್ದು, ಕೃಷಿ ಕಾರ್ಯಕ್ಕೂ ನೀರು ಬಳಕೆಯಾಗುತ್ತದೆ. ಸಕಾಲಕ್ಕೆ ಮಳೆ ಬಾರದಿರುವ ಕಾರಣ ಇಲ್ಲಿನ ಜನ ದಿನಸಿ ಪದಾರ್ಥಗಳಿಗೂ ಗೋಳಾಡಬೇಕಿದೆ.

ಬಸ್ ಕೂಡ ಇಲ್ಲ:
ಈ ಹಿಂದೆ ಬೀಚನಹಳ್ಳಿ ದಿನಕ್ಕೆ ಒಂದು ಬಸ್ ಬರುತ್ತಿತ್ತು. ಸಾರಿಗೆ ಇಲಾಖೆಯವರು ಈಗ ಅದನ್ನೂ ನಿಲ್ಲಿಸಿದ್ದಾರೆ. ಇದರಿಂದಾಗಿ ಗ್ರಾಮದ ವಿದ್ಯಾರ್ಥಿಗಳು, ನೌಕರರು, ಹೊರಗಿನ ಪ್ರಯಾಣಿಕರು ಸಹ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ. ಈ ಗ್ರಾಮದ ಸಮಸ್ಯೆಗಳು ಜನಪ್ರತಿನಿಧಿಗಳ ಗಮನಕ್ಕೆ ಬರುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.