ಬುಧವಾರ, ಫೆಬ್ರವರಿ 24, 2021
23 °C
ಎಣಿಕೆ ಗಳಿಕೆ

ಮೆಂತ್ಯ ಕೃಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಂತ್ಯ ಕೃಷಿ

* ಮೆಂತ್ಯವನ್ನು ಎಲ್ಲಾ ತೆರನಾದ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ನೀರು ಬಸಿದು ಹೋಗಲು ಜಾಗ ಮುಖ್ಯ. ಜೌಗಿಲ್ಲದ ಹಾಗೂ ಸಾರವತ್ತಾದ ಮೆಕ್ಕಲು ಅಥವಾ ಜೇಡಿ ಮಣ್ಣಿನಲ್ಲಿ ಅಧಿಕ ಇಳುವರಿ ಸಾಧ್ಯ.* ಹೆಕ್ಟೇರ್‌ಗೆ 12.5 ಟನ್‌ ತಿಪ್ಪೆ ಗೊಬ್ಬರ ಹಾಗೂ ಅಗತ್ಯ ಗೊಬ್ಬರಗಳು  ಬೇಕಾಗುತ್ತವೆ. 3 ಮೀಟರ್ ಉದ್ದ ಮತ್ತು 2 ಮೀಟರ್ ಅಗಲ ಇರುವಂತೆ ಮಡಿಗಳನ್ನು ತಯಾರಿಸಿ ಬೀಜವನ್ನು ಸಮನಾಗಿ ಚೆಲ್ಲಿ ಬಿತ್ತಬೇಕು. ಬೀಜ ಮೊಳೆಯಲು 5–6 ದಿನ ಬೇಕು. ಹೆಕ್ಟೇರಿಗೆ 40 ಕಿ.ಗ್ರಾಂ ಬಿತ್ತನೆ ಕಾಳು ಬೇಕಾಗುತ್ತವೆ

* ಹವಾ ಮತ್ತು ಭೂ ಗುಣಗಳನ್ನು ಅನುಸರಿಸಿ 4–5 ದಿನಗಳಿಗೊಮ್ಮೆ ನೀರು ಹಾಯಿಸಬೇಕು

* ಬಿತ್ತನೆಯಾದ 15–20 ದಿನಗಳ ನಂತರ ಮೇಲುಗೊಬ್ಬರ ನೀಡಬೇಕಾಗುತ್ತದೆ ಹಾಗೂ ಮಣ್ಣನ್ನು ಹಗುರವಾಗಿ ಸಡಿಲಿಸಿ ಕಳೆಗಳನ್ನು ಕಿತ್ತು ಹಾಕಬೇಕು* ಮೆಂತ್ಯದ ಸೊಪ್ಪಿನಲ್ಲಿ ಮೊದಲ ಕಟಾವು ಆದ ನಂತರ ಹೊಸ ಚಿಗುರು ಬರುತ್ತದೆ. ಹೀಗೆ ಸುಮಾರು 4–6 ಕೊಯ್ಲು ಸಾಧ್ಯ. ಪ್ರತಿ ಸಾರಿ ಸೊಪ್ಪನ್ನು ಕೊಯ್ಲು ಮಾಡಿದ ನಂತರ ಹೆಕ್ಟೇರಿಗೆ 20 ಕಿ.ಗ್ರಾಂ. ಗೊಬ್ಬರ ಕೊಟ್ಟು ನೀರು ಹಾಯಿಸಬೇಕು* ಬಿತ್ತನೆ ಮಾಡಿದ ಸುಮಾರು 150–160 ದಿನಗಳಲ್ಲಿ ಬೀಜ ಪಕ್ವಗೊಳ್ಳುತ್ತವೆ. ಕೂಳೆ ಬೆಳೆಗಳನ್ನು ತೆಗೆಯದೆ ಹಾಗೆಯೇ ಬಿಟ್ಟಲ್ಲಿ ಹೆಚ್ಚು ಕಾಳು ಸಾಧ್ಯ. ಮೆಂತ್ಯದ ಬೆಳೆಯಲ್ಲಿ ಕಾಡು ಮೆಂತ್ಯ, ಕುದುರೆ ಮಸಾಲೆ ಮುಂತಾದ ಅನ್ಯ ಬಗೆ ಗಿಡಗಳು ಕಂಡುಬರುತ್ತವೆ. ಅವುಗಳನ್ನು ಕಿತ್ತುಹಾಕಬೇಕು* ಬಿತ್ತನೆ ಮಾಡಿದ 20–30 ದಿನಗಳಲ್ಲಿ ಸಸಿಗಳು ಸುಮಾರು 20–25 ಸೆಂ.ಮೀ. ಬೆಳೆದು ಕಟಾವಿಗೆ ಸಿದ್ಧವಿರುತ್ತವೆ. ಹೆಕ್ಟೇರಿಗೆ 10 ರಿಂದ 13 ಟನ್ ಇಳುವರಿ ಸಾಧ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.