ಹಿರೇಕೆರೂರ: ಭರವಸೆ ಮೂಡಿಸಿದ್ದ ಮೆಣಸಿನ ಬೆಳೆ ಇದ್ದಕ್ಕಿದ್ದಂತೆ ರೋಗದಿಂದ ಅಕಾಲಿಕ ವೃದ್ಧಾಪ್ಯಕ್ಕೀಡಾಗಿ ರೈತರ ಮೊಗದಲ್ಲಿ ಆತಂಕ ಆವರಿಸುವಂತಾಗಿದೆ.

ತಾಲ್ಲೂಕಿನಲ್ಲಿ ಬೇಸಿಗೆ ಕಾಲಕ್ಕೆ ನಾಟಿ ಮಾಡಿದ್ದ ಸಾವಿರಾರು ಎಕರೆ ಮೆಣಸಿನ ಗಿಡಗಳು ರೋಗದಿಂದ ಸಂಪೂರ್ಣ ಹಾಳಾಗಿವೆ. ಫಲಕ್ಕೆ ಬರುವ ಸಮಯಕ್ಕೆ ರೋಗ ತಗುಲಿ ಎಲೆಗಳು, ಹೂ-ಮೋಪುಗಳು ಪೂರ್ಣ ಉದುರಿ ಹೋಗಿವೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ರೈತರು ಬೆಳೆ ಬರುವ ಮುನ್ನವೇ ಗಿಡ ಕೀಳುತ್ತಿದ್ದಾರೆ.

ದೂದೀಹಳ್ಳಿ ಗ್ರಾಮದಲ್ಲಿಯೇ ನೂರಾರು ಎಕರೆ ಮೆಣಸಿನ ಬೆಳೆ ರೋಗದಿಂದ ಹಾಳಾಗಿವೆ. ಕಲ್ಲಪ್ಪ ಬಾಳಿಕಾಯಿ, ಅಶೋಕ ಗುರಳ್ಳಿ, ಶಿವಲಿಂಗಪ್ಪ ಕೋಡಮಗ್ಗಿ, ಬಸವರಾಜಪ್ಪ ಕೋಡಮಗ್ಗಿ, ತೀರ್ಥಪ್ಪ ಬಾಳಿಕಾಯಿ, ಬಸನಗೌಡ ಪಾಟೀಲ, ಕಲ್ಲನಗೌಡ ಮರ್ಕಳ್ಳಿ, ಗಣೇಶ ಚಿಕ್ಕಪ್ಪನವರ, ಶಾರದವ್ವ ಮುಚಡಿ, ಸುಭಾಸ ಬಾಳಿಕಾಯಿ ಮೊದಲಾದವರ ಮೆಣಸಿನ ಬೆಳೆ ಪೂರ್ಣವಾಗಿ ಹಾಳಾಗಿದೆ. ‘ಎಕರೆಕ್ಕ 25 ಸಾವಿರ ರೂಪಾಯಿ ಖರ್ಚು ಮಾಡೇವ್ರಿ, 2 ಕ್ವಿಂಟಲ್ ಮೆಣಸಿನಕಾಯಿ ಸಹ ಬರಲಿಲ್ಲ, ನಮ್ಮ ಹಣೆಬರಹ ಸರಿಯಿಲ್ಲ’ ಎಂದು ನೊಂದು ನುಡಿಯುತ್ತಾರೆ ದೂದೀಹಳ್ಳಿ ಗ್ರಾಮದ ರೈತ ಬಸವರಾಜಪ್ಪ ನೂಲಗೇರಿ.

ರೈತಸಂಘ (ನಂಜುಂಡಸ್ವಾಮಿ ಬಣ)ದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಂ. ಜಯದೇವ, ‘ಸೆಮಿನಿಸ್ ಬೀಜ ಕಂಪೆನಿಯ ಸಿತಾರಾ ಹೆಸರಿನ ಮೆಣಸಿನ ಬೀಜಗಳು ಕಳಪೆಯಾಗಿವೆ. ಈ ತಳಿಯನ್ನು ಬೆಳೆದ ಹಾವೇರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ನೂರಾರು ರೈತರು ತೀವ್ರ ಹಾನಿಯನ್ನು ಅನುಭವಿಸಿದ್ದಾರೆ. ಪ್ರತಿ ಎಕರೆ ಹಾನಿಗೆ ಬೀಜ ಕಂಪೆನಿಯಿಂದ ರೂ. 50 ಸಾವಿರ ಪರಿಹಾರವನ್ನು ರೈತರಿಗೆ ಕೊಡಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಸ್.ಜಿ.ದೊಡ್ಡಗೌಡ್ರ, “ದೂದೀಹಳ್ಳಿ ಗ್ರಾಮದಲ್ಲಿ ಬೆಳೆದ ಮೆಣಸಿನ ಬೆಳೆಯನ್ನು ದೇವಿಹೊಸೂರಿನ ಮೆಣಸಿನಕಾಯಿ ತಳಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದು, ಸೊರಗು ರೋಗ (ವಿಲ್ಟ್ ಡಿಸೀಸ್) ಇದಕ್ಕೆ ಕಾರಣವಾಗಿದೆ. ತಾಲ್ಲೂಕಿನ ಕೋಡ, ಮಾಸೂರು ಭಾಗಗಳಲ್ಲಿಯೂ ರೋಗ ಕಂಡು ಬಂದಿದೆ” ಎಂದು ತಿಳಿಸಿದರು.

“ಭೂಮಿಯಲ್ಲಿ ನೂರಾರು ವರ್ಷಗಳಿಂದ ರೋಗಾಣುಗಳು ಇವೆ. ಇದನ್ನು ತಡೆಯುವ ಶಕ್ತಿ ಮೆಣಸಿನ ಬೆಳೆಯಲ್ಲಿ ಇಲ್ಲ. ಶುಂಠಿ, ಅರಿಷಿಣದಂತಹ ಪರ್ಯಾಯ ಬೆಳೆಯನ್ನು ಬೆಳೆಯುವ ಮೂಲಕ ಈ ರೋಗ ನಿಯಂತ್ರಣ ಸಾಧ್ಯವಿದೆ. ಬೆಳೆ ಹಾನಿಗೆ ಪರಿಹಾರ ನೀಡುವ ಬಗ್ಗೆ ರೈತ ಮುಖಂಡರು ಹಾಗೂ ಬೀಜ ಕಂಪೆನಿ ಜೊತೆ ಚರ್ಚಿಸಲಾಗುವುದು” ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.