ಶುಕ್ರವಾರ, ಫೆಬ್ರವರಿ 26, 2021
18 °C

ಮೇವಿನ ಬೀಜ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇವಿನ ಬೀಜ ವಿತರಣೆ

ಬಸವಾಪಟ್ಟಣ: ಇಲ್ಲಿನ ದುರ್ಗಾಂಬಿಕಾ ಜಲಾನಯನ ಸಮಿತಿ ವತಿಯಿಂದ ಗುರುವಾರ ಪಶು ಸಂಗೋಪನಾ ಇಲಾಖೆ ನೀಡಿದ ಮಲ್ಟಿಕಟ್ ಸ್ವರ್ಗಂ ಎಂಬ ಮೇವಿನ ಬೀಜಗಳನ್ನು ರೈತರಿಗೆ ತಲಾ ಐದು ಕಿಲೋ ನಂತೆ ವಿತರಿಸಲಾಯಿತು.ವಿತರಣೆ ಮಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ. ಖಲಂದರ್ ಮಾತನಾಡಿ, ರೈತರ ಮೇವಿನ ಕೊರತೆಯನ್ನು ನಿವಾರಿಸಲು ಪಶುಸಂಗೋಪನಾ ಇಲಾಖೆ ಇಂತಹ  ಪೌಷ್ಟಿಕ ಸತ್ವವುಳ್ಳ ಮೇವಿನ ಬೀಜಗಳನ್ನು ನೀಡಿ ಸಹಕರಿಸಿದೆ. ರೈತರು ತಮ್ಮ ಹೊಲಗಳಲ್ಲಿ ಈ ಬೀಜಗಳನ್ನು ಬಿತ್ತಿ ಮೇವು ಬೆಳೆದು ತಮ್ಮ ಜಾನುವಾರುಗಳನ್ನು ಉತ್ತಮ ರೀತಿಯಲ್ಲಿ ಸಾಕಬೇಕು ಎಂದರು.ಕೃಷಿ ಅಧಿಕಾರಿ ರಾಜೇಶ್ ಮಾತನಾಡಿ, ರೈತರು ಮೇವು ಬೆಳೆಯುವುದಕ್ಕಾಗಿ ತಮ್ಮ ಹಿಡುವಳಿಗಳಲ್ಲಿ ಸ್ವಲ್ಪ ಭೂಮಿಯನ್ನು ಮೀಸಲಾಗಿಟ್ಟು ಇಡೀ ವರ್ಷ ಮೇವು ಬೆಳೆಯುವ ಯೋಜನೆ ಹಾಕಿಕೊಳ್ಳಬೇಕು ಎಂದರು. ಗುರುರಾಜ ಸ್ವಾಗತಿಸಿದರು. ಕೆ. ಹಾಲೇಶ್ ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.