ಭಾನುವಾರ, ಜುಲೈ 25, 2021
24 °C

`ಮೇವು ಕೊಳೆಯುತ್ತಿದೆ, ವಿತರಣೆ ಮಾಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಬರಗಾಲದ  ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ತಾಲ್ಲೂಕು ಆಡಳಿತ  ವಿತರಣೆ ಮಾಡದಿರುವುದರಿಂದ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ  ಕೊಳೆಯುತ್ತಿದೆ.6 ತಿಂಗಳ ಹಿಂದೆ ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬರಗಾಲವನ್ನು  ಸಲುವಾಗಿ  ಜಾನುವಾರುಗಳಿಗೆ ಮೇವು ಒದಗಿಸಲು  ತಾಲ್ಲೂಕು ಆಡಳಿತ ಕೆಲವಾರು ರೈತರ ಮನವೊಲಿಸಿ ಪ್ರವಾಸಿ ಮಂದಿರದಲ್ಲಿ ಸಂಗ್ರಹಿಸಿಡಲಾಗಿತ್ತು.  ಅಗತ್ಯವಿದ್ದ ರೈತರಿಗೆ  ವಿತರಣೆ ಮಾಡಲೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶೇಖರಿಸಿಟ್ಟಿರುವ ಮೇವು ವಿತರಣೆಯಾಗದ ಪರಿಣಾಮ ಮೇವು ಬಿಸಿಲು, ಮಳೆ, ಗಾಳಿಗೆ ಸಿಲುಕಿ ಕೊಳೆಯಲಾರಂಭಿಸಿದೆ. ಈ ಬಗ್ಗೆ ಗಮನ ಹರಿಸದೆ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ಉದಾರವಾಗಿ ಮೇವು ನೀಡಿದ ದಾನಿಗಳು ಹಾಗು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.`ಕೆಲವು ಸಾಂದರ್ಭಿಕ ಕಾರಣಗಳಿಂದಾಗಿ ಸಂಗ್ರಹಿಸಿದ್ದ ಮೇವನ್ನು ವಿತರಣೆ ಮಾಡಲು ಸಾಧ್ಯವಾಗಲಿಲ್ಲ.  ಈ ಮೇವನ್ನು ಅಗತ್ಯವುಳ್ಳ ಮೇಲುಕೋಟೆ ಹಾಗೂ ಚಿನಕುರಳಿ ಹೋಬಳಿಯ ರೈತರ ಜಾನುವಾರುಗಳಿಗೆ ವಿತರಿಸುವ ಕ್ರಮಕೈಗೊಳ್ಳಲಾಗುವುದು' ಎಂದು ತಹಶೀಲ್ದಾರ್ ಶಿವಕುಮಾರಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.