ಗುರುವಾರ , ಮೇ 13, 2021
24 °C

ಮೈಸೂರು ಅರಮನೆ: ತಾಜ್‌ಗಿಂತಲೂ ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಭವ್ಯ ಪರಂಪರೆ, ಕಲೆಯ ಬಗ್ಗೆ ಕಾಳಜಿ ಹೊಂದಿರುವ ಹಿರಿಯ- ಕಿರಿಯ ಮನಸ್ಸುಗಳು ಒಂದೆಡೆ ಕಲೆತಿದ್ದವು. ಅವರಿಗೆ ಮೈಸೂರು ಅರಮನೆಯ ಹೊಸ ಲೋಕದ ದರ್ಶನವಾಯಿತು. ಮೈಸೂರು ಅರಮನೆ ನಿರ್ಮಾಣದ ಹಿನ್ನೆಲೆ, ಅಲ್ಲಿನ ಶ್ರೀಮಂತ ಸಂಸ್ಕೃತಿ- ಪರಂಪರೆಯ ವೈಭವ, ಪಯಣದ ಬಗ್ಗೆ ಬೆಳಕು ಚೆಲ್ಲಿ ಜಾಗೃತಿ ಮೂಡಿಸಲಾಯಿತು.`ಮೈಸೂರು ಅರಮನೆ- ಸ್ಮಾರಕ ನಿರ್ಮಾಣದ ಪಥ~ ಕುರಿತು ವಿವರವಾಗಿ ಮಾಹಿತಿ ನೀಡಿದವರು ಮೈಸೂರಿನ ರಾಮ್‌ಸನ್ಸ್ ಕಲಾಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ.ಸಿಂಗ್ ಅವರು. ಅವರು ಮೈಸೂರಿನಲ್ಲಿ ಕಳೆದ 20 ವರ್ಷಗಳಿಂದ ಕಲೆ, ಸಂಸ್ಕೃತಿಯ ಚಟುವಟಿಕೆಗಳ ಜಾಗೃತಿ ಮೂಡಿಸುತ್ತಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಸ್ಲೈಡ್ ಶೋ ಮೂಲಕ ಮೈಸೂರು ಅರಮನೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನ (ಇನ್‌ಟ್ಯಾಕ್) ಹಾಗೂ ಆಧುನಿಕ ಕಲೆಗಳ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಆಶ್ರಯದಲ್ಲಿ ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ನಗರದ ಆಧುನಿಕ ಕಲೆಗಳ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಇತ್ತೀಚಿನ ದಿನಗಳಲ್ಲಿ ತಾಜ್‌ಮಹಲ್‌ಗಿಂತಲೂ ಮೈಸೂರು ಅರಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ಅರಮನೆಯಿದು~ ಎಂದು ಅವರು ಬಣ್ಣಿಸಿದರು.`ಪರಂಪರೆಯ ಅಮೂಲ್ಯ ವಸ್ತುಗಳ ರಕ್ಷಣೆಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ಅಗತ್ಯ. ಸಾಂಸ್ಕೃತಿಕ ಪರಂಪರೆ ಹಾಗೂ ಅದರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಬೇಕಿದೆ~ ಎಂದು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು.`ಮೈಸೂರು ಅರಮನೆಯ ಬಗ್ಗೆ ವಿಚಾರ ಮಂಡನೆ ಮಾಹಿತಿಯುಕ್ತವಾಗಿತ್ತು. ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣ ಮುಂದಿನ ಬಾರಿ ಮೈಸೂರಿಗೆ ಭೇಟಿ ನೀಡಿದಾಗ ಹೊಸ ದೃಷ್ಟಿಕೋನದಿಂದ ಮೈಸೂರು ಅರಮನೆ ನೋಡಲು ಸಾಧ್ಯವಾಗುತ್ತದೆ~ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯೊಬ್ಬರು ಉದ್ಘರಿಸಿದರು.

ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನದ ಸಂಯೋಜಕ ಸತ್ಯಪ್ರಕಾಶ್ ವಾರಣಾಸಿ, ಮೀರಾ ಅಯ್ಯರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.