ಬುಧವಾರ, ಏಪ್ರಿಲ್ 14, 2021
24 °C

ಮೈಸೂರು ರಸ್ತೆ ಅಪಘಾತ: 4 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮೈಸೂರು, (ಪಿಟಿಐ): ಇಲ್ಲಿಂದ 60 ಕಿ.ಮೀ ದೂರದ ಕೃಷ್ಣರಾಜನಗರದ ಹತ್ತಿರದಲ್ಲಿ ಗುರುವಾರ ನಡೆದ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತನ್ನ 4 ವರ್ಷದ ಮಗಳು ಮತ್ತು ಆರು ತಿಂಗಳ ಕೂಸು ಮುಂದೆ ಕೂಡಿಸಿಕೊಂಡು ಮಹದೇವ (30) ಮೋಟಾರ್  ಸೈಕಲ್ ಓಡಿಸುತ್ತಿದ್ದರು. ಅವರ ತಂಗಿ  ಮಂಜುಳಾ ಹಿಂದೆ ಕುಳಿತಿದ್ದರು. ಅವರ ಮೋಟಾರ್  ಸೈಕಲ್ ಗೆ  ಮಠವೊಂದಕ್ಕೆ ಸೇರಿದ್ದ ಶಾಲಾ ವಾಹನವೊಂದು ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. 

ಭೀಕರವಾಗಿ ನಡೆದ ಈ ಅಪಘಾತದಲ್ಲಿ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ವಿಷಯ ತಿಳಿದ ರಸ್ತೆ ಪಕ್ಕದ  ಗ್ರಾಮಸ್ಥರು ಆ ಶಾಲಾ ವಾಹನಕ್ಕೆ ಕಲ್ಲು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ವಲ್ಪ ಸಮಯ ರಸ್ತೆ ತಡೆ ಕೂಡ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರ ಸಾವಿಗೆ ಕಾರಣವಾದ ಈ ಅಪಘಾತದ ನಂತರ ಸ್ಥಳದಿಂದ ನಾಪತ್ತೆಯಾಗಿರುವ ಶಾಲಾ ವಾಹನದ ಚಾಲಕನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.