ಅಮೆರಿಕ ಮೂಲಕ ಜನಪ್ರಿಯ ಆನ್ಲೈನ್ ಶಾಪಿಂಗ್ ತಾಣ ‘ಇ-ಬೆ’ ಮೊಬೈಲ್ ಚಂದಾದಾರರಿಗಾಗಿ ಹೊಸ ಖರೀದಿ ಕೊಡುಗೆ ಪ್ರಕಟಿಸಿದೆ. ಮೊಬೈಲ್ ಮೂಲಕವೇ ಶಾಪಿಂಗ್ ಮಾಡಲು ಅನುಕೂಲವಾಗುವಂತಹ ತಂತ್ರಾಂಶವೊಂದನ್ನು ಕಂಪೆನಿ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶ ಬಳಸಿ ಮೊಬೈಲ್ ಬಳಕೆದಾರರ ತಮಗೆ ಬೇಕಾದ ವಸ್ತುವನ್ನು ಕೊಂಡುಕೊಳ್ಳಬಹುದು.

‘ಇ-ಬೆ’ ತಾಣದಲ್ಲಿ ಉಪ್ಪಿನಿಂದ ಹಿಡಿದು ಕರ್ಪೂರದವರೆಗೆ ಎಲ್ಲ ವಸ್ತುಗಳು ಖರೀದಿಗೆ ಸಿಗುತ್ತವೆ. ಸದ್ಯ 2.5 ದಶಲಕ್ಷ ಭಾರತೀಯ ಬಳಕೆದಾರರು ‘ಇ-ಬೆ’ ತಾಣದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೊಸ ತಂತ್ರಾಂಶ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಮೊಬೈಲ್ ಹ್ಯಾಂಡ್ಸೆಟ್ಗಳಲ್ಲಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ ಎನ್ನುತ್ತಾರೆ ಈ ತಾಣದ ಭಾರತೀಯ ಮಾರುಕಟ್ಟೆ ವ್ಯವಸ್ಥಾಪಕ ಮುರಳಿಕೃಷ್ಣನ್.

ಸದ್ಯ 750 ದಶಲಕ್ಷ ಮೊಬೈಲ್ ಬಳಕೆದಾರರು ಭಾರತದಲ್ಲಿದ್ದಾರೆ. ಮೊಬೈಲ್ ಮೂಲಕವೇ ಶಾಪಿಂಗ್ ನಡೆಸಲು ಇಷ್ಟಪಡುವ ಯುವಜನರ ಸಂಖ್ಯೆಯೂ ದೊಡ್ಡದಿದೆ ಎನ್ನುವ ಅವರು, ಎಸ್ಎಂಎಸ್ ಕಳುಹಿಸುವ ಮೂಲಕವೂ ಬಳಕೆದಾರರು ವಸ್ತುಗಳ ಬೆಲೆಗಳನ್ನು ತಿಳಿದುಕೊಳ್ಳಬಹುದು ಹಾಗೂ ತಮಗೆ ಬೇಕಾದ ಆಯ್ಕೆಗಳನ್ನು ಮಾಡಿಕೊಳ್ಳಬಹುದು ಎನ್ನುತ್ತಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ‘ಇ-ಬೆ’ ತಾಣ ಶೇ 64ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ಇನ್ನೇಕೆ ತಡ ಜೇಬಲ್ಲಿರುವ ಮೊಬೈಲ್ ಹೊರತೆಗೆದು ‘ಇ-ಬೆ’ ತಾಣಕ್ಕೆ ನುಗ್ಗಿ, ಶಾಪಿಂಗ್ ಮಾಡಲು ಜೇಬು ಗಟ್ಟಿ ಇರಬೇಕೆಂದಿಲ್ಲ, ಜೇಬಲ್ಲಿ ಮೊಬೈಲ್ ಇದ್ದರೆ ಸಾಕು.

ವಾಣಿಜ್ಯ ಕರೆ ನಿರ್ಬಂಧ; ಮೊರೆ
ಅನಪೇಕ್ಷಿತ ಕರೆ ನಿಷೇಧ ನೋಂದಣಿ ಜಾರಿಯಾಗಿರುವ ಬೆನ್ನ ಹಿಂದೆಯೇ, ಟೆಲಿ ಮಾರುಕಟ್ಟೆ ಕಂಪೆನಿಗಳು ‘ಕರೆ ನಿಷೇಧ ನೋಂದಣಿ ಪಟ್ಟಿ’ಯಿಂದ (Do-not-call registry) ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಚಂದಾದಾರರ ಮೊರೆ ಹೋಗುತ್ತಿವೆ
‘ಎಸ್ಎಂಎಸ್’ಗಳ ಮೂಲಕ ಗ್ರಾಹಕರ ಮನವೊಲಿಕೆಗೆ ಮುಂದಾಗಿರುವ ಕಂಪೆನಿಗಳು, ‘ಈಗಾಗಲೇ ನಿಮ್ಮ ಮೊಬೈಲ್ ಸಂಖ್ಯೆಯು ಕರೆ ನಿಷೇಧ ನೋಂದಣಿ ಪಟ್ಟಿಯಲ್ಲಿದೆ. ಇದರಿಂದ ನಿಮಗೆ ಮೌಲ್ಯ ವರ್ಧಿತ ಸೇವೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಖ್ಯೆಯನ್ನು ಈ ಪಟ್ಟಿಯಿಂದ ಹಿಂದಕ್ಕೆ ಪಡೆಯಿರಿ ಹಾಗೂ ಹಲವು ಸೌಲಭ್ಯಗಳನ್ನು ಪಡೆಯಿರಿ’ ಎನ್ನುವ ಸಂದೇಶವನ್ನು ದಿನನಿತ್ಯ ಕಳುಹಿಸುತ್ತಿವೆ.

ಮಾರ್ಚ್ 1ರಿಂದ ಅನಪೇಕ್ಷಿತ ಕರೆ ಮತ್ತು ‘ಎಸ್ಎಂಎಸ್’ ನಿಷೇಧ ಜಾರಿಗೊಂಡಿದೆ. ಈಗಾಗಲೇ ಸಾವಿರಾರು ಮೊಬೈಲ್ ಚಂದಾದಾರರು ಟೆಲಿಮಾರುಕಟ್ಟೆ ಕರೆಗಳ ನಿಷೇಧಕ್ಕಾಗಿ ‘ಸಂಪೂರ್ಣ ಕರೆ ನಿಷೇಧ’ ನೋಂದಣಿ ಪಟ್ಟಿ’ಯಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡಿದ್ದಾರೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಮಾರುಕಟ್ಟೆ ಕಂಪೆನಿಗಳಿಗೆ ಕಠಿಣ ಸೂಚನೆ ನೀಡಿದ್ದು, ನಿಯಮ ಉಲ್ಲಂಘಿಸುವ ಕಂಪೆನಿಗಳಿಗೆ ಮೊದಲ ಬಾರಿ ` 25 ಸಾವಿರ, ಎರಡನೇ ಉಲ್ಲಂಘನೆಗೆ ` 75 ಸಾವಿರ, 3ನೇ ಬಾರಿ ` 80 ಸಾವಿರ 4ನೇ ಬಾರಿ ` 1.25 ಲಕ್ಷ ಹಾಗೂ ಐದು ಮತ್ತು ಆರನೇ ಬಾರಿ ಕ್ರಮವಾಗಿ ` 1.50 ಮತ್ತು ` 2.5 ಲಕ್ಷ ದಂಡ ವಿಧಿಸಲಾಗುವುದು ಎಂದು ಹೇಳಿದೆ.

ಒಮ್ಮೆ ಚಂದಾದಾರ ಸಂಪೂರ್ಣ ಕರೆ ನಿಷೇಧಕ್ಕೆ ನೋಂದಾಯಿಸಿಕೊಂಡರೆ ನಂತರ ಯಾವುದೇ ವಾಣಿಜ್ಯ ಕರೆ, ಎಸ್ಎಂಎಸ್ಗಳನ್ನು ಕಂಪೆನಿಗಳು ಮಾಡುವಂತಿಲ್ಲ. ಇದರಿಂದ ಟೆಲಿಮಾರುಕಟ್ಟೆ ಕಂಪೆನಿಗಳ ಆದಾಯಕ್ಕೆ ತೀವ್ರ ಧಕ್ಕೆಯಾಗುವ ಸಾಧ್ಯತೆ ಇದ್ದು, ಹಲವು ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿವೆ. ವಾಣಿಜ್ಯ ಕರೆಗಳನ್ನು ಚಂದಾದಾರರು ಸುಲಭವಾಗಿ ಗುರುತಿಸಲು ‘ಟ್ರಾಯ್’ ಈ ಕರೆಗಳಿಗೆ ‘140’ ಸರಣಿ ಸಂಖ್ಯೆಯನ್ನು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.