ಬೆಂಗಳೂರು: ಮೊಬೈಲ್ ಟವರ್ಗಳ ನಿರ್ಮಾಣಕ್ಕೆ ಅನುಮತಿ ನೀಡುವ ವಿಚಾ ರದಲ್ಲಿ ಕೇಂದ್ರ ಸರ್ಕಾರದ ಮಾರ್ಗ ಸೂಚಿ ಅನುಸರಿಸುವಂತೆ ರಾಜ್ಯ ಸರ್ಕಾರಗಳಿಗೆ ದೂರಸಂಪರ್ಕ ಉದ್ಯಮ ಮನವಿ ಮಾಡಿದೆ.

ಕೇಂದ್ರದ ನೂತನ ಮಾರ್ಗಸೂಚಿಯ ಲ್ಲಿಯೂ ಮೊಬೈಲ್ ಟವರ್ಗಳಿಂದ ‘ಇಎಂಎಫ್’ (ವಿಕಿರಣ ಹೊರಸೂಸು ವಿಕೆ) ಮಟ್ಟ ನಿಗದಿಪಡಿಸುವಾಗ ಕಠಿಣ ನಿಯಮ ಅನುಸರಿಸಲಾಗಿದೆ. ವಿದ್ಯುತ್ ಹರಿವು ಸಾಂದ್ರತೆ ಮಿತಿಯನ್ನೂ ತಂತ್ರ ಜ್ಞಾನವನ್ನು ಆಧರಿಸಿಯೇ ನಿಗದಿ ಪಡಿ ಸಲಾಗಿದೆ ಎಂದು ದೂರಸಂಪರ್ಕ ಸೇವಾ ಸಂಸ್ಥೆಗಳ ಪ್ರಾತಿನಿಧಿಕ ಸಂಸ್ಥೆ ಯಾದ ‘ಸಿಒಎಐ’ನ ಮಹಾ ನಿರ್ದೇಶಕ ರಾಜನ್ ಎಸ್.ಮ್ಯಾಥ್ಯೂ ಹೇಳಿದ್ದಾರೆ.

ದೇಶದಲ್ಲಿ ೯೨.೨೦ ಕೋಟಿ ದೂರವಾಣಿ ಸಂಪರ್ಕಗಳಿದ್ದು, ಇದರಲ್ಲಿ ೮೯.೩೦ ಕೋಟಿ ನಿಸ್ತಂತು ಸಂಪರ್ಕಗಳೇ ಆಗಿವೆ. ದೊಡ್ಡ ಗ್ರಾಹಕ ಸಮೂಹಕ್ಕೆ ಸೇವೆ ಒದಗಿಸಲು ಹೆಚ್ಚು ಮೊಬೈಲ್ ಟವರ್ಗಳ ಅಗತ್ಯವಿದೆ. ಮೂಲ ಸೌಕರ್ಯ ಉದ್ಯಮಕ್ಕಿರುವ ಸವಲತ್ತು ಗಳನ್ನು ಮೊಬೈಲ್ ಟವರ್ ಉದ್ಯಮ ಕ್ಕೂ ಒದಗಿಸಬೇಕು ಎಂದು ರಾಜ್ಯಗಳಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.