ಹಾವೇರಿ: ದಿನನಿತ್ಯ ಕೈಯಲ್ಲಿ ಪುಸ್ತಕ ಹಿಡಿದು ಕಾಲೇಜಿಗೆ ತೆರಳಿ ವರ್ಗಗಳಲ್ಲಿ ಕುಳಿತ ಪಾಠ ಕೇಳಿದ ವಿದ್ಯಾರ್ಥಿಗಳು, ಒಂದು ವಾರ ಅವರು ಕೇವಲ ವಿದ್ಯಾರ್ಥಿಗಳಾಗಿರಲಿಲ್ಲ. ಸಂಪ್ರದಾಯ ವಾಹಕರಾಗಿ, ಹುಚ್ಚು ಮನಸ್ಸಿನ ಹತ್ತು ಮುಖಗಳಾಗಿ, ಅಡುಗೆ ಭಟ್ಟರಾಗಿ, ಕಲಾವಿದರಾಗಿ ಹೀಗೆ ಹಲವು ವಿಶಿಷ್ಟತೆಯಲ್ಲಿ ಹೊಸದು ಹಳತರ ಕೊಂಡಿಯಾಗಿ ಗಂಭೀರವಾಗಿದ್ದ ಕಾಲೇಜಿನ ವಾತಾವರಣವನ್ನು ಮೋಜಿನ ಸಂತೆಯನ್ನಾಗಿ ಮಾಡಿದ್ದರು. ಇಂತಹದೊಂದು ಮೋಜಿನಿ ಸಂತೆ ನಡೆದಿದ್ದು, ಹಾವೇರಿ ನಗರದ ಹೊರ ವಲಯದ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ.

ಪ್ರತಿ ವರ್ಷದಿಂದ ಈ ವರ್ಷವೂ `ಮೋಜಿನ ವಾರ~ ಆಚರಣೆ ಮಾಡಿದ ವಿದ್ಯಾರ್ಥಿಗಳು, ಆರು ದಿನಗಳ ಕಾಲ ನಡೆದ ಈ ಮೋಜಿನ ವಾರದಲ್ಲಿ ಅವರ ಉಡುಗೆ , ತೊಡುಗೆ, ಆಚಾರ, ವಿಚಾರಗಳೇ ಬದಲಿಯಾಗಿದ್ದವು.

ಮೋಜಿನ ವಾರದ ಮೊದಲನೆ ದಿನ ಪಕ್ಕಾ ಸಂಪ್ರದಾಯವಾದಿಗಳಂತೆ ಅಪ್ಪಟ ಗ್ರಾಮೀಣ ಉಡುಗೆ ತೊಡುಗೆ ಎನಿಸಿಕೊಂಡ ಧೋತರ, ಜುಬ್ಬಾ, ತಲೆ ಮೇಲೆ ನೆಹರೂ ಟೋಪಿ ಹಾಕಿಕೊಂಡ ವಿದ್ಯಾರ್ಥಿಗಳು ಒಂದಡೆಯಾದರೆ, ಭಾರತೀಯ ನಾರಿ ಪರಿಕಲ್ಪನೆಗೆ ಇಂಬುಕೊಡುವಂತೆ ಸೀರೆ ಉಟ್ಟಕೊಂಡ ವಿದ್ಯಾರ್ಥಿನಿಯರು ಇನ್ನೊಂದೆಡೆ, ಇವರ ಜತೆಯ ಕೆಲವರು ಊರಿನ ಗೌಡ, ಕುಲಕರ್ಣಿ, ಶಾನಭೋಗ, ಸ್ವಾಮೀಜಿ, ಕೂರ್ಗ, ಅರಬ್ ಪ್ರಜೆಯ ಉಡುಗೆ ತೊಟ್ಟು ಇಡೀ ಜಗತ್ತೆ ಒಂದೇ ಕಡೆ ಮೇಳೈಸುವಂತೆ ಮಾಡಿದ್ದರು.

ಇಡಿ ದಿನ ಎಲ್ಲರೂ ಸೇರಿ ತಮ್ಮ ಸಾಂಪ್ರದಾಯಿಕ ಉಡುಗೆ, ತೊಡುಗೆಗಳ ಬಗ್ಗೆ ಮಾತನಾಡಿಕೊಂಡು, `ನಾವು ಎಷ್ಟೇ ಆಧುನಿಕತೆಗೆ ಮಾರು ಹೋಗಿದ್ದರೂ ನಮ್ಮ ಸಂಪ್ರದಾಯವನ್ನು ಮರೆಯುವುದು ಸಾಧ್ಯವಿಲ್ಲ. ಅದೇ ನಮಗೆ ಅಂದ ಚಂದ~ ಎನ್ನುವ ಸಂದೇಶವನ್ನು ಸಾರಿದರು.

ಎರಡನೇ ದಿನ ವಿದ್ಯಾರ್ಥಿಗಳು ತಮ್ಮ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಪರಿಚಯಿಸುವ ಹೊಂದಾಣಿಕೆಯಿಲ್ಲದ ದಿನವನ್ನಾಗಿ ಆಚರಿಸಿದರು. ಅಂದು ಕಾಲೇಜಿನ ವಿದ್ಯಾರ್ಥಿಗಳು ಒಂದಕ್ಕೊಂದು ಹೊಂದಾಣಿಕೆ ಆಗದ ಉಡುಗೆ ತೊಟ್ಟು ಕಾಲೇಜಿಗೆ ಆಗಮಿಸಿದ್ದರು. ನೈಟ್ ಪ್ಯಾಂಟ್ ಮೇಲೆ ಸೂಟ್ ಧರಸಿ ಟೈ ಕಟ್ಟಿಕೊಂಡಿದ್ದು, ಪ್ಯಾಂಟ್ ಮೇಲೆ ಬರ್ಮುಡಾ ಧರಿಸಿದ್ದು, ಅಂಗಿ ಮೇಲೆ ಬನಿಯನ್ ಹಾಕಿ ಟೈ ಕಟ್ಟಿಕೊಂಡಿದ್ದು, ಒಂದು ಕಾಲಿಗೆ ಚಪ್ಪಲ್, ಇನ್ನೊಂದು ಕಾಲಿಗೆ ಬೂಟ್ ಧರಿಸಿದ್ದು ಹೀಗೆ ಹತ್ತಾರ ಅವತಾರಗಳನ್ನು ಸೃಷ್ಟಿಸಿಕೊಂಡು ನೋಡುಗರ ಕಣ್ಣಿಗೆ ಪಕ್ಕಾ ಹುಚ್ಚರಂತೆ ಕಾಣಿಸಿಕೊಳ್ಳುವ ಮೂಲಕ ಮೋಜಿನ ವಾರಕ್ಕೆ ಮೆರಗು ತಂದರು.

ಮೂರನೇ ದಿನ ಕಪ್ಪು ಬಿಳುಪು ದಿನವನ್ನಾಗಿ ಆಚರಿಸಿದ ವಿದ್ಯಾರ್ಥಿಗಳು, ಅಂದು ಬಣ್ಣ ಬಣ್ಣದ ಉಡುಗೆಗೆಗಳಿಗೆ ಗುಡ್ ಬೈ ಹೇಳಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಪ್ಪು ಅಂಗಿ ಬಿಳಿ ಪ್ಯಾಂಟ್, ಬಿಳಿ ಅಂಗಿ ಕಪ್ಪು ಪ್ಯಾಂಟ್, ಕಪ್ಪು ಇಲ್ಲವೇ ಬಿಳಿ ಶೂಗಳನ್ನು ಧರಿಸಿ ಮಹಾವಿದ್ಯಾಲಯಕ್ಕೆ ಕಪ್ಪು ಬಿಳುಪಿನ್ ಟಚ್ ನೀಡಿದ್ದರು.

ಇಲ್ಲಿವರೆಗೆ ಉಡುಗೆಗೆ ಸೀಮಿತವಾಗಿದ್ದ ಮೋಜಿನ ವಾರದ ನಾಲ್ಕನೇ ದಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇಶ ವಿನ್ಯಾಸ ಹಾಗೂ ಆಹಾರ ಮೇಳದ ದಿನವನ್ನಾಗಿ ಆಚರಿಸಿದರು. ವಿದ್ಯಾರ್ಥಿ ನಿಯರು ಕಲಾತ್ಮಕವಾಗಿ ಕೇಶ ವಿನ್ಯಾಸ ಮಾಡಿ ಕೊಂಡಿದ್ದರೆ, ವಿದ್ಯಾರ್ಥಿಗಳು ಚಿತ್ರ ವಿಚಿತ್ರ ನಾನಾ ಆಕಾರದ ಕೇಶ ವಿನ್ಯಾಸ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಕೆಲ ವಿದ್ಯಾರ್ಥಿಗಳು ಬಣ್ಣ ಬಣ್ಣದ ವಿಗ್ ಧರಿಸಿದ್ದರೆ, ಕೆಲವರು ತಮ್ಮ ನೈಜ ಕೂದಲಿಗೆ ಕೆಂಪು, ಕಪ್ಪು ಮೆಹಂದಿ ಹಚ್ಚಿಕೊಂಡು ಕೂದಲಿನ ಬಣ್ಣವನ್ನೆ ಬದಲಿಸಿದ್ದರು. ಇನ್ನೂ ಕೆಲವರು ತಮ್ಮ ಗಡ್ಡಗಳಿಗೆ ವಿಶೇಷ ರೂಪ ನೀಡಿ ಗಮನ ಸೆಳೆದರು.

ಇದೇ ದಿನ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಾವೇ ತಯಾರಿಸಿದ ವಿಶಿಷ್ಟ ರುಚಿಗಳ ತಿಂಡಿ ತಿನಿಸುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಷ್ಟೇ ಅಲ್ಲದೇ ಕಾಲೇಜು ಅಧ್ಯಾಪಕರ ಬಾಯಲ್ಲಿ ನೀರೂರಿಸುವಂತೆ ಮಾಡಿದವು.

ಅಡುಗೆ ಭಟ್ಟರಂತೆ ಕಂಡ ವಿದ್ಯಾರ್ಥಿಗಳು, ಗೋಬಿ ಮಂಚೂರಿ, ನ್ಯೂಡಲ್ಸ್, ಮಿರ್ಚಿ ಮಂಡಕ್ಕಿ, ಪಾನಿಪುರಿ ತಯಾರಿಸಿ ನೀಡುವುದರ ಜತೆಗೆ ಹೆಚ್ಚಿಗೆ ಮಾರಾಟ ಮಾಡುವ ಸ್ಪರ್ಧೆಯನ್ನು ಸಹ ಏರ್ಪಡಿಸಿದ್ದರು. ಅದೊಂದು ದಿನ ಕಾಲೇಜು ಫಾಸ್ಟ್ಪುಡ್ ಕ್ಯಾಂಟಿನ್ ಆಗಿ ಮಾರ್ಪಟ್ಟಿತ್ತು.
ಕೊನೆಯ ದಿನ ದಿನನಿತ್ಯದ ಜೀನ್ಸ್, ಟೀ ಶರ್ಟ್ ಬಿಟ್ಟು ಪ್ಯಾಂಟ್, ಅಂಗಿ, ಟೈ, ಬೆಲ್ಟ್, ಶೂಗಳನ್ನು ಧರಿಸಿಕೊಂಡು ಅಧಿಕಾರಿಗಳಂತೆ ಗೋಚರಿಸಿದರು.

`ಈ ಒಂದು ವಾರ ಜೀವನದಲ್ಲಿ ಮರೆಯಲಾರದ ದಿನಗಳಾಗಿದ್ದವು. ಕಾಲೇಜಿನ ಅಧ್ಯಾಪಕರ ಸಹಕಾರದೊಂದಿಗೆ ಹಿರಿಯರು ಕಿರಿಯರು ಎನ್ನುವ ಬೇಧ ಭಾವವಿಲ್ಲದೇ ಕಾಲೇಜಿನ 900ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಂದೇ ಎನ್ನುವ ಭಾವದೊಂದಿಗೆ ಮೋಜಿನವಾರ ಆಚರಿಸಿದೇವು. ಒಂದೊಂದು ದಿನವೂ ನಮಗೆ ಅವಿಸ್ಮರಣೀಯ~ಎನ್ನುತ್ತಾರೆ ಬಸನಗೌಡ ಪಾಟೀಲ, ಪವನ ಕುಲಕರ್ಣಿ, ಹನುಮಂತ ಬಚ್ಚಣ್ಣನವರ, ಕೃಷ್ಣಾ ಬೆಂಗೇರಿ, ಇಮ್ರಾನ್ ಬಿಸ್ತಿ,ಸಿದ್ಧರಾಮಗೌಡ ಪಾಟೀಲ.

`ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಒಂದೊಂದು ಘಟನಾವಳಿಗಳು ಅವರ ಜೀವನದಲ್ಲಿ ಸದಾ ನೆನಪು ಉಳಿಯುತ್ತವೆ. ಕಾರಣಕ್ಕೆ ಪಾಠದ ಜತೆಗೆ ವಿದ್ಯಾರ್ಥಿಗಳಿಗೆ ಇಂತಹ ಚಟುವಟಿಕೆ ನಡೆಸುವ ಮೂಲಕ ಅವರಲ್ಲಿ ಜೀವನೋತ್ಸಾಹ ತುಂಬುವ ಕೆಲಸವನ್ನು ಮಾಡಲಾಗುತ್ತದೆ ಎಂದು ಹೇಳುತ್ತಾರೆ ಕಾಲೇಜಿನ ಪ್ರಾಚಾರ್ಯ ಕೆ.ಬಿ.ಪ್ರಕಾಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.