ಗುರುವಾರ , ಜೂನ್ 24, 2021
29 °C

ಯಂತ್ರಮಾನವ: ರಷ್ಯಾ ಸರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರಿಕ್ಷ ಹಾಗೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಗಗನಯಾತ್ರಿಗಳು ನಡೆಸುತ್ತಿರುವ ಪ್ರಯೋಗಗಳಿಗೆ ನೆರವು ನೀಡುವ ಉದ್ದೇಶದಿಂದ ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ `ನಾಸಾ~, ಜನರಲ್ ಮೋಟಾರ್ಸ್‌ ಕಂಪೆನಿಯ ನೆರವಿನೊಂದಿಗೆ ರೋಬೋನಾಟ್2 (ಆರ್2) ಎಂಬ ರೋಬೋಟ್ ರೂಪಿಸಿ `ಐಎಸ್‌ಎಸ್~ಗೆ ಕಳುಹಿಸಿರುವುದು ನೆನಪಿದೆ ತಾನೇ?`ಆರ್2~ ಈಗಾಗಲೇ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ನಡೆಸುತ್ತಿರುವ ಕೆಲಸಗಳಿಗೆ ಹೆಗಲು ಕೊಡುತ್ತಿದೆ. ಈ ಯಂತ್ರಮಾನವನ ಸೇವೆಯನ್ನು `ಐಎಸ್‌ಎಸ್~ಗೆ ಮಾತ್ರ ಸೀಮಿತಗೊಳಿಸದೆ ಭವಿಷ್ಯದ ಇತರ ಬಾಹ್ಯಾಕಾಶ ಯೋಜನೆಗಳಿಗೂ ಬಳಸಿಕೊಳ್ಳುವುದು `ನಾಸಾ~ದ ಯೋಜನೆಯಾಗಿದೆ.

ಈಗ ರಷ್ಯಾದ ಸರದಿ..!`ನಾಸಾ~ದ ಹಾದಿಯಲ್ಲೇ ರಷ್ಯಾದ ಸಂಯುಕ್ತ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, `ರೊಸ್ಕೊಸ್ಮೊಸ್~ ಕೂಡ ಸಾಗುತ್ತಿದೆ.  ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸಬಲ್ಲ ಯಂತ್ರಮಾನವನನ್ನು ಸೃಷ್ಟಿಸಲು ಅದು ಯಶಸ್ವಿಯಾಗಿದೆ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ರಷ್ಯಾ ರೂಪಿಸಿರುವ ಮೊದಲ ಅಂತರಿಕ್ಷ ರೊಬೋಟ್ ಇದಾಗಿದೆ.ಈ ಬಾಹ್ಯಾಕಾಶ ರೋಬೋಟ್‌ಗೆ `ಎಸ್-400~ ಎಂದು ರೊಸ್ಕೊಸ್ಮೊಸ್ ಹೆಸರಿಟ್ಟಿದೆ.    ಬೋಲ್ಟ್ ತಿರುಪಿಸುವುದು,  ನೌಕೆಯಲ್ಲಿ ಹಾನಿಗೊಳಗಾದ ಭಾಗ ಪತ್ತೆ ಹಚ್ಚುವುದು ಸೇರಿದಂತೆ ಅತ್ಯಂತ ಸರಳ ಕೆಲಸಗಳನ್ನು ಮಾಡುವ ಸಾಮರ್ಥ್ಯ ಈ ಯಂತ್ರಮಾನವನಿಗಿದೆ ಎಂದು ತಜ್ಞರು ಹೇಳಿದ್ದಾರೆ.ಮುಂದಿನ ಎರಡು ವರ್ಷಗಳ ಒಳಗಾಗಿ `ಎಸ್-400~ನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಯೋಜನೆಯಲ್ಲಿ  ರಷ್ಯಾ ಇದೆ. ಆ ನಂತರ ಇದೇ ರೋಬೋಟನ್ನು ಭವಿಷ್ಯದಲ್ಲಿ ಕೈಗೊಳ್ಳಲಾಗುವ  ಚಂದ್ರ, ಮಂಗಳನ ಅನ್ವೇಷಣೆ ಕಾರ್ಯಕ್ರಮಗಳಲ್ಲಿ ಬಳಸುವ ಆಲೋಚನೆ ಅದರದು.`ಎಸ್-400~ `ಐಎಸ್‌ಎಸ್~ಗೆ ಕೈಗೊಳ್ಳುವ ಪ್ರವಾಸವು ಅದರ ಕಾರ್ಯನಿರ್ವಹಣೆಯ ಸಾಮರ್ಥ್ಯ  ಅಳೆಯಲು ವಿಜ್ಞಾನಿಗಳಿಗೆ ಅವಕಾಶ ನೀಡಲಿದೆ ಎಂದು ಗಗನಯಾತ್ರಿ ಸರ್ಜಿ ಅವ್ಡೆಯೆವ್ ಹೇಳಿದ್ದಾರೆ.`ಅಂತರಿಕ್ಷದ ಪ್ರಯೋಗಗಳಲ್ಲಿ ರೋಬೊಟ್ ಗಗನಯಾತ್ರಿಗಳನ್ನು ಬಳಸುವ ವಿಚಾರದಲ್ಲಿ ದೇಶವು ಇಟ್ಟಿರುವ ಮೊದಲ ಹೆಜ್ಜೆ ಇದು~ ಎಂದು `ಎಸ್-400~ ಸೃಷ್ಟಿಯನ್ನು `ರೊಸ್ಕೊಸ್ಮೊಸ್~ ಅಧಿಕಾರಿಯೊಬ್ಬರು ಬಣ್ಣಿಸಿದ್ದಾರೆ.ಇತ್ತ ರಷ್ಯಾ ಅಂತರಿಕ್ಷದ ಬಳಕೆಗಾಗಿ  `ಯಂತ್ರ ಮಾನವ~ನನ್ನು ಸೃಷ್ಟಿಸಿದ ಸುದ್ದಿ ಬಹಿರಂಗವಾಗುತ್ತಲೇ, ಅತ್ತ ಜಪಾನ್ ಮತ್ತು ಜರ್ಮನಿ ಇಂತಹುದೇ ಯಂತ್ರಮಾನವರನ್ನು ನಭಕ್ಕೆ ಚಿಮ್ಮಿಸಲು ಚಿಂತನೆ ನಡೆಸಿರುವ ಮಾಹಿತಿಯು ಹೊರ ಬಿದ್ದಿದೆ. ಅಂತರಿಕ್ಷದಲ್ಲಿ ಯಂತ್ರಮಾನವರು ನಡೆದಾಡುದ ದಿನಗಳು ದೂರವಿಲ್ಲ..! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.