ಬೆಂಗಳೂರು-ಬಳ್ಳಾರಿ ಹೆದ್ದಾರಿಯಲ್ಲಿರುವ ಐತಿಹಾಸಿಕ ಸ್ಥಳ ಯಲಹಂಕ. ಅದಕ್ಕೆ ಈ ಹೆಸರು ಬಂದದ್ದು `ಯಲವ~ದಿಂದ. ಯಲವ ಎಂದರೆ ಬೂರಗದ ಮರ. ಚಾಲುಕ್ಯರ ಕಾಲದಲ್ಲಿ ಇಳೈ ಪಕ್ಕ ನಾಡು ಎಂದಿದ್ದ ಯಲವ, ಹೊಯ್ಸಳರ ಕಾಲದಲ್ಲಿ ಎಲಹಕ್ಕ ಮುಂದೆ ಎಲೆಹಂಕ, ಯಲವಂಕ ಕ್ರಮೇಣ ಯಲಹಂಕ ಎಂದಾಯಿತು.

ಕ್ರಿ.ಶ. 1418-1433ರ ವರೆಗೆ ಬೆಂಗಳೂರು ನಗರದ ಸ್ಥಾಪಕ ಮಾಗಡಿ ಕೆಂಪೇಗೌಡರ ಆಡಳಿತದ ರಾಜಧಾನಿಯಾಗಿತ್ತು. ಈಗ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಆಡಳಿತಕ್ಕೆ ಒಳಪಟ್ಟಿದ್ದು, ನಗರದ ಒಂದು ಪ್ರತಿಷ್ಠಿತ ಬಡಾವಣೆಯಾಗಿದೆ. ಯಲಹಂಕದಲ್ಲಿ ಅನೇಕ ಪುರಾತನ, ಐತಿಹಾಸಿಕ ದೇವಲಯಗಳಿವೆ.

ಅದರಲ್ಲೂ ಕ್ರಿ.ಶ. 1410ರಲ್ಲಿ ಹೊಯ್ಸಳರ ಮಾಚರಸ ಶಟುವೀರ ದೇವರಾಯನ ಕಾಲದಲ್ಲಿ ಸ್ಥಾಪಿಸಿದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಊರ ಕೆರೆ ಬದಿಯಲ್ಲಿರುವ ನರಸಿಂಹ ದೇವಾಲಯ, ಬೊಮ್ಮಸಂದ್ರ ಬಳಿಯ ಈಶ್ವರ ದೇವಾಲಯ ಪ್ರಮುಖವಾದವು.

ಇವಕ್ಕೆಲ್ಲ ಮುಕುಟಪ್ರಾಯವಾಗಿದೆ ಉತ್ತರ ಕೆರೆಕೋಡಿ ರಸ್ತೆ ಬಳಿ ಪ್ರಶಾಂತ ವಾತಾವರಣದಲ್ಲಿ ನಿರ್ಮಾಣವಾದ ಶ್ರೀ ಚೌಡೇಶ್ವರಿ ದೇವಾಲಯ. ಸ್ಥಳೀಯ ತೊಗಟವೀರ ಕ್ಷತ್ರಿಯ ಕುಲಬಾಂಧವರ ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಆಂಧ್ರ ಪ್ರದೇಶದ ನಂದಾವರಂನ ಮೂಲ ಚೌಡೇಶ್ವರಿ ಪ್ರತಿಮೆ ಹಾಗೂ ದೇಗುಲವನ್ನೇ ಹೋಲುವ ಮಾದರಿಯಲ್ಲಿ ಇಲ್ಲಿ ಮಂದಿರವನ್ನು ನಿರ್ಮಿಸಲಾಗಿದೆ. ಶ್ರೀ ಚೌಡೇಶ್ವರಿ ಅಮ್ಮನವರೇ ಇಲ್ಲಿನ ಪ್ರಧಾನ ದೇವಿ.

ತಾಯಿಯ ಸನ್ನಿಧಿಯಲ್ಲಿ ಪರಿವಾರ ದೇವತೆಗಳಾಗಿ ಬಲಭಾಗದಲ್ಲಿ ಶ್ರೀ ಮಹಾಗಣಪತಿ, ವಾಮಭಾಗದಲ್ಲಿ ಶ್ರೀ ಸುಬ್ರಹ್ಮಣ್ಯ ಮತ್ತು ದೇವಾಲಯದ ಪೂರ್ವಾಭಿಮುಖದಲ್ಲಿ ನವಗ್ರಹ ಗುಡಿಗಳಿವೆ. ಈ ದೇವಾಲಯದ ವೈಶಿಷ್ಟ್ಯವೆಂದರೆ ಭಕ್ತಾದಿಗಳು ದಕ್ಷಿಣ ದ್ವಾರದಿಂದ ಉತ್ತರಾಭಿಮುಖವಾಗಿ ಪ್ರವೇಶಿಸಿ, ದರ್ಶನದ ನಂತರ ಪೂರ್ವಾಭಿಮುಖವಾಗಿ ಹೊರಬರಬೇಕು.

ದೇಗುಲದ ಛಾವಣಿಯ ಆವರಣದಲ್ಲಿ ಕಾಲ ಪ್ರತೀಕವಾದ ಕೂರ್ಮಪಾದ ಶೈಲಿಯಲ್ಲಿ ನವಗ್ರಹ ರಾಶಿ ಕುಂಡಲಿಯನ್ನು ನಿರ್ಮಿಸಲಾಗಿದೆ. ವಾಸ್ತು ರೀತಿಯಲ್ಲಿ ಗೋಪುರ, ಧ್ವಜಸ್ತಂಭ ಹಾಗೂ ಗೋಪುರದ ಮಧ್ಯದಲ್ಲಿ ಸ್ವಯಂಪ್ರಕಾಶಿತ ಬೆಳಕಿನ ಕಿಂಡಿಯನ್ನು ನಿರ್ಮಿಸಲಾಗಿದೆ.

ದೇವಸ್ಥಾನದಲ್ಲಿ ನಿತ್ಯಪೂಜೆಯಿದ್ದು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಿಂಬೆಹಣ್ಣಿನ ಆರತಿ, ಭಜನೆಗಳು ನಡೆಯುತ್ತಿರುತ್ತವೆ. ಇದಲ್ಲದೆ ವರ್ಷದ ಎಲ್ಲಾ 365 ದಿನಗಳು ತೊಗಟವೀರ ಕ್ಷತ್ರಿಯ ಕುಲಬಾಂಧವರಿಂದ ಸರದಿ ಪ್ರಕಾರ ವಿಶೇಷ ಪೂಜೆಗಳು ನಿರಂತರವಾಗಿ ನಡೆಯುವುದೊಂದು ವಿಶೇಷ.

ಪ್ರತಿ ಫೆಬ್ರುವರಿಯಲ್ಲಿ ಅಮ್ಮನವರ ವಾರ್ಷಿಕೋತ್ಸವ, ಯುಗಾದಿಗೆ ಜ್ಯೋತಿಉತ್ಸವ, ಮೇ ತಿಂಗಳಲ್ಲಿ ಪಲ್ಲಕ್ಕಿ ಉತ್ಸವ, ಆಷಾಡದ ಅಡಿ ಅಮಾವಾಸ್ಯೆ ಪ್ರಯುಕ್ತ ಜಯಂತಿ ಮಹೋತ್ಸವ, ದಸರಾ ಶರನ್ನವರಾತ್ರಿಗಳಲ್ಲಿ ವಿಶೇಷ ಪೂಜಾ ಅಲಂಕಾರಗಳು ಮತ್ತು ಕಾರ್ತೀಕ ಹುಣ್ಣಿಮೆಯಂದು ಅಮ್ಮನವರ ಸನ್ನಿಧಿಯಲ್ಲಿ ಗಿರಿಜಾ ಕಲ್ಯಾಣ ಮತ್ತು ಉಯ್ಯೊಲೆ ಸೇವೆಗಳು ಅಪಾರ ಭಕ್ತರನ್ನು ಆಕರ್ಷಿಸುತ್ತವೆ.

ದೇವಸ್ಥಾನದಲ್ಲಿ ಯಾವುದೇ ಸೇವೆಗಳಿಗೆ ನಿರ್ದಿಷ್ಟ ಶುಲ್ಕ ಇಲ್ಲ. ಭಕ್ತರು ತಮ್ಮ ಅಪೇಕ್ಷೆಗೆ ಅನುಸಾರವಾಗಿ ಸೇವೆ ಮಾಡಿಸಬಹುದು. ಮಾಹಿತಿಗೆ ದೇವಸ್ಥಾನದ ಪ್ರಧಾನ ಕೋಶಾಧಿಕಾರಿ ಬಿ.ವಿ. ನಾಗರಾಜ್ ಅವರನ್ನು (98456 30456) ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.