40 ವರ್ಷಗಳ ರೇಸಿಂಗ್ ಇತಿಹಾಸ ಹೊಂದಿರುವ ಕೆಟಿಎಂ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯಿಂದ ವೈಜ್ಞಾನಿಕವಾಗಿ ಬೈಕ್ ಸವಾರರ ಹಿತ ಕಾಪಾಡುವಲ್ಲಿ ಹಾಗೂ ಅವರಿಗೆ ಬೈಕ್ ಸವಾರಿಯ ಹೊಸ ಅನುಭವ ನೀಡುವತ್ತ ಸದಾ ಹೊಸ ಆವಿಷ್ಕಾರಗಳನ್ನು ನಡೆಸುತ್ತಲೇ ಬಂದಿದೆ.

ಕೆಲವು ದಿನಗಳ ಹಿಂದೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಬಜಾಜ್ ಪ್ರೊಬೈಕಿಂಗ್ ಮಳಿಗೆಯಲ್ಲಿ ಕೆಟಿಎಂ ಬೈಕುಗಳು ಬಿಡುಗಡೆಗೊಂಡವು. ವಿದೇಶಿ ಬೈಕುಗಳಿಗೆ ಭಾರತದಲ್ಲಿ ಸದಾ ಬೇಡಿಕೆ ಇದ್ದೇ ಇದೆ. ಹಾಗೆಯೇ ಕೆಟಿಎಂ ಭಾರತಕ್ಕೆ ಬರುತ್ತಿರುವುದನ್ನು ಅರಿತ ಅಪ್ಪಟ ಕೆಟಿಎಂ ಪ್ರಿಯರು ಮೊದಲೇ ಹಣ ನೀಡಿ ಬೈಕುಗಳಿಗಾಗಿ ಮುಂಗಡ ಬುಕ್ಕಿಂಗ್ ಮಾಡಿದ್ದರು. ಅಂದು ತಮ್ಮ ಬೈಕುಗಳನ್ನು ಪಡೆಯಲು ಅವರೆಲ್ಲರೂ ಆಗಮಿಸಿದ್ದರು.

ಬೈಕ್ ಪಡೆದು ಅದನ್ನು ಏರುವ ಕುತೂಹಲ, ತಾವಲ್ಲದೇ ಬೇರೆ ಯಾರೂ ಆ ಬೈಕನ್ನು ಮೊದಲು ಹತ್ತಬಾರದು ಎನ್ನುವಷ್ಟು ಉತ್ಸಾಹ ಅವರಲ್ಲಿ ಉತ್ಕಟವಾಗಿತ್ತು. ಹಾಗಿದ್ದರೆ ಹುಚ್ಚೆಬ್ಬಿಸುವಂಥ ಅದ್ಯಾವ ಸಂಗತಿ ಕೆಟಿಎಂ ಬೈಕ್ನಲ್ಲಿದೆ?

`ಸೋಲು ಒಂದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಕೆಟಿಎಂ ಡ್ಯೂಕ್ 200ರಲ್ಲಿ ನೀವು ಅನುಭವಿಸಬಹುದು~ ಎನ್ನುವುದು ಡ್ಯೂಕ್ ಕುರಿತು ಕೆಟಿಎಂನ ವ್ಯಾಖ್ಯಾನ. ಅದು ಬಹುತೇಕ ನಿಜವೇ ಇರಬೇಕು. ಏಕೆಂದರೆ 200 ಸಿ.ಸಿ. ಸಾಮರ್ಥ್ಯದ ಎಂಜಿನ್ ಹೊಂದಿರುವ ಬೈಕ್ಗಳು ಈಗಾಗಲೇ ಭಾರತದಲ್ಲಿ ಲಭ್ಯವಿದೆ.

ಆದರೆ ಅವು ಯಾವುವೂ 25 ಬ್ರೇಕ್ ಅಶ್ವ ಶಕ್ತಿ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಇದನ್ನು ರೇಸಿಂಗ್ ಬೈಕ್ ಅಥವಾ ಸ್ಟ್ರೀಟ್ ಬೈಕ್ ಎಂದೇ ಕರೆಯಲಾಗುತ್ತದೆ. ವೇಗವನ್ನು ಹೆಚ್ಚಾಗಿ ಇಷ್ಟಪಡುವ 18ರಿಂದ 25ರೊಳಗಿನ ಯುವಕರನ್ನೇ ಗುರಿಯಾಗಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಬೈಕ್ ಇದು.

ಹೀಗೆ ಕಳೆದ 50 ವರ್ಷಗಳಿಂದ ರೇಸ್ಗಳಿಗೆ ಬೈಕ್ ಸಿದ್ಧಪಡಿಸುತ್ತಿರುವ ಕೆಟಿಎಂ ಕಂಪೆನಿಯಲ್ಲಿ ಡ್ಯೂಕ್ 990 ಹಾಗೂ 690 ಎಂಬ ಬೈಕ್ಗಳು ಈಗಾಗಲೇ ರೇಸಿಂಗ್ ಪ್ರಿಯರ ಅಚ್ಚುಮೆಚ್ಚು ಎಂದೆನಿಸಿಕೊಂಡಿದೆ. ಇದೀಗ ಭಾರತೀಯ ಬೈಕ್ ಪ್ರಿಯರಿಗಾಗಿ ಹಾಗೂ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವಂಥ ಡ್ಯೂಕ್ 200 ಬೈಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಡ್ಯೂಕ್ 690 ಹಾಗೂ 990 ಬೈಕ್ನ ಅವತರಣಿಕೆ.

ಹೊಸ ತಂತ್ರಜ್ಞಾನಗಳ ಅಳವಡಿಕೆ
ಕೆಟಿಎಂ ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದು. ಹೀಗಾಗಿ ರಸ್ತೆಯಲ್ಲಿ ಕಾಣುವ ಇತರ ಬೈಕ್ಗಳಿಗಿಂಥ ಕೆಟಿಎಂ ಸಾಕಷ್ಟು ವಿಭಿನ್ನವಾಗಿದೆ. ಹೊಸ ತಂತ್ರಜ್ಞಾನ ಹಾಗೂ ಆಕರ್ಷಕ ವಿನ್ಯಾಸ ಇದರ ಪ್ರಮುಖ ಅಂಶಗಳು.

ಕೆಟಿಎಂ ಡ್ಯೂಕ್ 200 ಬೈಕ್ ಎಲ್ಲಾ ಬೈಕ್ಗಳಂತೆಯೇ ಕಂಡರೂ ಇದರ ಚಾಸೀಸ್, ಬ್ರೇಕ್, ಶಾಕ್ಸ್, ಫೋರ್ಕ್, ಎಂಜಿನ್ ಇತ್ಯಾದಿ ಅಂಶಗಳು ತೀರಾ ಭಿನ್ನವಾಗಿವೆ. ಡ್ಯೂಕ್ 200ಕ್ಕೆ ಬಳಸಿರುವ ಚಾಸೀಸ್ ಫ್ರೇಮ್ ಹಗುರವಾಗಿ ಕೊಳವೆ ರೀತಿಯಲ್ಲಿದೆ.

ಈ ವಿನ್ಯಾಸ ಈಗಾಗಲೇ ಕೆಟಿಎಂ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಟ್ಟು ಸುರಕ್ಷಿತ ಹಾಗೂ ಉತ್ತಮ ಎಂಬುದು ಸಾಬೀತಾಗಿದೆ. ಜತೆಗೆ ಬೈಕ್ನ ಆಕಾರಕ್ಕೆ ತಕ್ಕಂತೆ ಬೈಕ್ ಹಾಗೂ ಸವಾರನ ಭಾರವು ಬೈಕ್ನ ಮಧ್ಯಭಾಗದಲ್ಲಿ ಕೇಂದ್ರೀಕೃತವಾಗಿರುವುದರಿಂದ ಬೈಕ್ ದೃಢವಾಗಿ ಚಲಿಸಲಿದೆ.

ಸ್ವಿಂಗ್ ಆರ್ಮ್ ಹಾಗೂ ಹಿಂಬದಿಯ ಚಕ್ರವನ್ನು ಡೈ ಕಾಸ್ಟ್ ಅಲ್ಯುಮಿನಿಯಂನಿಂದ ತಯಾರಿಸಿರುವುದರಿಂದ ಹಗುರವಾಗಿದೆ. ಇದು ಬೈಕ್ ಹೆಚ್ಚು ಶಕ್ತಿ ಉತ್ಪಾದಿಸಲು ಸಹಕಾರಿಯಾಗಿದೆ. ಕೆಟಿಎಂ ಬೈಕ್ನ ಈ ತಂತ್ರಜ್ಞಾನದಿಂದ 200 ಸಿಸಿ ಸಾಮರ್ಥ್ಯದ ಇತರ ಬೈಕ್ಗಳಿಗಿಂಥ ಶಕ್ತಿ ಉತ್ಪಾದನೆಯಲ್ಲಿ ಹಾಗೂ ವೇಗ ಹೆಚ್ಚಿಸಿಕೊಳ್ಳುವುದರಲ್ಲಿ ಹೆಚ್ಚು ಮುಂದಿದೆ.

ಚಾಸೀಸ್ನಂತೆ ಹೊಸತನದಿಂದ ಕೂಡಿರುವ ಮತ್ತೊಂದು ಭಾಗವೆಂದರೆ ಅದು ಮುಂಭಾಗದ ಫೋರ್ಕ್. ಸಾಮಾನ್ಯ ಬೈಕ್ಗಳಲ್ಲಿ ಮುಂಭಾಗದ ಫೋರ್ಕ್ ಸ್ಟೀಲ್ನಂತೆ ಸಣ್ಣ ನಳಿಕೆಯೊಂದು ಚಕ್ರಕ್ಕೆ ಹೊಂದಿಕೊಂಡಿರುವ ದೊಡ್ಡದಾದ ಕಪ್ಪು ನಳಿಕೆಯೊಳಗಿರುತ್ತದೆ. ರಸ್ತೆಯ ಉಬ್ಬು ತಗ್ಗುಗಳಿಗೆ ತಕ್ಕಂತೆ ಸಣ್ಣ ನಳಿಕೆಯು ಮೇಲಿಂದ ಕೆಳಗೆ ಇಳಿದೇಳುವ ಕೆಲಸ ಮಾಡುತ್ತದೆ.

ಆದರೆ ಡ್ಯೂಕ್ ಬೈಕ್ನಲ್ಲಿ ಇದು ಸಂಪೂರ್ಣವಾಗಿ ತಲೆ ಕೆಳಗಾಗಿದೆ. ಕಪ್ಪಗಿರುವ ದೊಡ್ಡ ನಳಿಕೆ ಮೇಲೆ ಹಾಗೂ ಸಣ್ಣ ನಳಿಕೆ ಚಕ್ರಕ್ಕೆ ಹೊಂದಿಕೊಂಡಿದೆ. ಈ ತಂತ್ರಜ್ಞಾನದಿಂದ ಬೈಕ್ ಸವಾರ ಹೆಚ್ಚು ದಣಿವಿಲ್ಲದೆ ಬೈಕ್ ಚಾಲನೆ ಮಾಡಬಹುದಾಗಿದೆ.

ಎಕ್ಸಾಸ್ಟ್ ಸಿಸ್ಟಂ
ಸಾಮಾನ್ಯವಾಗಿ ಬೈಕ್ಗಳೆಂದರೆ ಉದ್ದನೆಯ ಸೈಲೆನ್ಸರ್ ಇದ್ದೇ ಇರುತ್ತದೆ. ಆದರೆ ಕೆಟಿಎಂ ಡ್ಯೂಕ್ 200 ಬೈಕ್ನ ಸೈಲೆನ್ಸರ್ನ ಉದ್ದ ಕಿರುಬೆರಳಿಗಿಂಥಲೂ ಚಿಕ್ಕ. ಇದರಿಂದ ಸುಮಾರು ಆರು ಕಿಲೋ ತೂಕ ಕಡಿಮೆಯಾದಂತಾಗಿದೆ.

ಎಂಜಿನ್ ಅಡಿಯಲ್ಲೇ ಮೂರು ವಿಭಾಗಗಳನ್ನು ಹೊಂದಿರುವ ಸೈಲೆನ್ಸರ್ ಚೇಂಬರನ್ನು ಸ್ಟೈನ್ಲೆಸ್ ಸ್ಟೀಲ್ನಿಂದ ನಿರ್ಮಿಸಲಾಗಿದೆ. ವೇಗವರ್ಧಕ ಪರಿವರ್ತಕ ನಿಯಂತ್ರಣ ಸಾಧನದಿಂದಾಗಿ ಹೆಚ್ಚು ಹೊಗೆ ಚೆಲ್ಲದಂಥ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬೈಕ್ ರೇಸಿಂಗ್ ಬೈಕ್ನಂಥ ಸದ್ದುಂಟು ಮಾಡುತ್ತದೆ.

ಎಂಜಿನ್
ಕೆಟಿಎಂ ಡ್ಯೂಕ್ 200 ಬೈಕ್ ಏಕ ಸಿಲಿಂಡೆರ್ನ 4 ಸ್ಟ್ರೋಕ್ ಬೈಕ್. ಒಟ್ಟು 199.5 ಸಿಸಿ ಎಂಜಿನ್ ಇದಾಗಿದ್ದು, ಪ್ರತಿ ನಿಮಿಷಕ್ಕೆ 10 ಸಾವಿರ ಆವರ್ತನಕ್ಕೆ 25 ಬ್ರೇಕ್ ಅಶ್ವ ಶಕ್ತಿ ಉತ್ಪಾದಿಸಬಲ್ಲ ಹಾಗೂ ಪ್ರತಿ ನಿಮಿಷಕ್ಕೆ 8 ಸಾವಿರ ಆವರ್ತನದಲ್ಲಿ 19.2 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಆರು ಗೇರ್ಗಳು, ಬಾಷ್ ಇಎಫ್ಐ ಇಂಧನ ಪೂರೈಕೆ ವ್ಯವಸ್ಥೆ ಹಾಗೂ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಎಂಜಿನ್ ನಿರ್ವಹಣೆಗೂ ಬಾಷ್ ಇಎಂಎಸ್ ಸಾಧನ ಅಳವಡಿಸಲಾಗಿದೆ. ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನ ಅಳವಡಿಸಿರುವುದರಿಂದ ಇಂಧನ ಪೂರೈಕೆ ವ್ಯವಸ್ಥೆ (38 ಮಿ.ಮೀ ಥ್ರಾಟಲ್ ವಾಲ್ವ್ ಸೆನ್ಸರ್)ಯನ್ನು ಅತ್ಯಂತ ನಾಜೂಕಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಪ್ರೀ ಪ್ರೋಗ್ರಾಮ್ ಮಾಡಲಾಗಿದೆ. ಇದರಿಂದ ಹೆಚ್ಚು ಶಕ್ತಿ ಹಾಗೂ ಅಧಿಕ ಇಂಧನ ಕ್ಷಮತೆ ನೀಡುವಂಥ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಕಾಕ್ಪಿಟ್
ಸ್ಪೀಡೋಮೀಟರ್ ಇರಬೇಕಾದ ಜಾಗದಲ್ಲಿ ಅತ್ಯಾಧುನಿಕ ಕಾಕ್ಪಿಟ್ ಅಳವಡಿಸಲಾಗಿದೆ. ವೇಗ, ಪರಿವರ್ತಕ, ಗೇರ್ನ ಮಾಹಿತಿ, ಸಮಯ, ಓಡೋಮೀಟರ್, ದೂರ ಕ್ರಮಿಸಲು ತೆಗೆದುಕೊಂಡ ಸಮಯ, ಇಂಧನ ಮಾಹಿತಿ, ಇಂಧನ ಕ್ಷಮತೆ ಹಾಗೂ ಇರುವ ಇಂಧನದಲ್ಲಿ ಕ್ರಮಿಸಬಹುದಾದ ದೂರ ಈ ಎಲ್ಲಾ ಮಾಹಿತಿಗಳನ್ನು ಪುಟ್ಟ ಡಿಜಿಟಲ್ ಪರದೆಯ ಮೇಲೆ ನೋಡಬಹುದಾಗಿದೆ. ಈ ವ್ಯವಸ್ಥೆ ಹೊಂದಿರುವ ಸ್ಪೀಡೋಮೀಟರ್ ದುಬಾರಿ ಕಾರುಗಳಲ್ಲಿವೆ.

ಇನ್ನು ಬೈಕ್ ಅಂದದ ವಿಭಾಗಕ್ಕೆ ಬಂದಲ್ಲಿ, ಏರೋ ಡೈನಮಿಕ್ ಆಕಾರ ಹೊಂದಿರುವುದರಿಂದ ನೋಡಲು ಅಂದವಾಗಿರುವುದರ ಜತೆಗೆ ಸವಾರ ಸ್ನೇಹಿ ಬೈಕ್ ಕೂಡಾ ಹೌದು. ಹೆಚ್ಚು ಸ್ಲಿಮ್ ಆಗಿರುವ ಡ್ಯೂಕ್ 200 ತನ್ನ ಸಾಂಪ್ರದಾಯಿಕ ಬಣ್ಣವಾದ ಕಿತ್ತಳೆ-ಕಪ್ಪು ಬಣ್ಣಗಳಲ್ಲಿ ಲಭ್ಯ. ಎಲ್ಇಡಿ ಇಂಡಿಕೇಟರ್, ಹಿಂಬದಿ ದೀಪ ಹಾಗೂ ನಂಬರ್ ಪ್ಲೇಟ್ ಮೇಲೊಂದು ಎಲ್ಇಡಿ ಅಳವಡಿಸಲಾಗಿದೆ.

ಮುಂದಿನ ಹಾಗೂ ಹಿಂದಿನ ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಬೈಕ್ ಎತ್ತರವಾಗಿದ್ದರೂ ಸವಾರನ ಆಸನ ನೆಲದಿಂದ 810 ಮಿ.ಮೀ ಮಾತ್ರ. ಶೀಘ್ರವಾಗಿ ವೇಗ ಹೆಚ್ಚಿಸುವ ಹಾಗೂ ಸುಲಭವಾಗಿ ನಿಯಂತ್ರಣಕ್ಕೆ ತರಬಹುದಾದ ಬೈಕ್ ಇದಾಗಿದೆ.

ಭಾರತದಲ್ಲೇ ತಯಾರಾಗುವ `ಕೆಟಿಎಂ ಡ್ಯೂಕ್ 200~ ಹೊರ ದೇಶಗಳಿಗೂ ರಫ್ತಾಗುತ್ತಿದೆ. ಇಲ್ಲಿ ಇದರ ಮಾರುಕಟ್ಟೆ ಜವಾಬ್ದಾರಿಯನ್ನು ಬಜಾಜ್ ಪ್ರೊ-ಬೈಕಿಂಗ್ ಜಾಲಕ್ಕೆ ನೀಡಲಾಗಿದೆ. ದೇಶದ 34 ಕೇಂದ್ರಗಳಲ್ಲಿ ಕೆಟಿಎಂ ಬೈಕ್ ಲಭ್ಯ. ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಲಭ್ಯವಿದೆ.

ಮುಂಬರುವ ದಿನಗಳಲ್ಲಿ ಕರ್ನಾಟಕದ ಮತ್ತಷ್ಟು ನಗರಗಳಿಗೆ ಇದರ ವ್ಯಾಪ್ತಿ ವಿಸ್ತರಿಸುವುದು ಸಂಸ್ಥೆಯ ಗುರಿ. ಬೆಂಗಳೂರಿನಲ್ಲಿ ಕೆಟಿಎಂ ಡ್ಯೂಕ್ನ ಬೆಲೆ 1.19 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ ಬೆಲೆ). ಮುಂಗಡ 30 ಸಾವಿರ ರೂಪಾಯಿ ನೀಡಿದರೆ ಮೂರು ತಿಂಗಳ ನಂತರ ಬೈಕ್ ಕೈ ಸೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.