ಹೊಸಕೋಟೆ: ಯೋಗ ಕಲಿಯುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದೇ ಯೋಗ ಶಿಬಿರದ ಮುಖ್ಯ ಉದ್ದೇಶ ಎಂದು ರಾಷ್ಟ್ರೋತ್ಥಾನ ಪರಿಷತ್ನ ಯೋಗ ತಜ್ಞ ಕೇಶವಭಟ್ ಹೇಳಿದರು.

ಹೊಸಕೋಟೆಯ ಸ್ವಾಮಿ ವಿವೇಕಾನಂದ ಯೋಗ ಶಿಕ್ಷಣ ಸಮಿತಿ ಇಲ್ಲಿನ ವಿವೇಕಾನಂದ ವಿದ್ಯಾಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 16 ನೇ ಉಚಿತ ಯೋಗ ತರಬೇತಿ ಶಿಬಿರದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪದ್ಮಪಾದಸ್ವಾಮಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳಸುವಂತೆ ಪೋಷಕರಿಗೆ ಕಿವಿಮಾತು ಹೇಳಿದರು. ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮುನಿಶಾಮಣ್ಣ ಶಿಬಿರ ಉದ್ಘಾಟಿಸಿದರು. ಯೋಗ ಗುರುಗಳಾದ ಎಂ.ಆರ್.ನಾಗರಾಜ್, ಶಿವಕುಮಾರ್ ಉಪಸ್ಥಿತರಿದ್ದರು. ರಾಮಕೃಷ್ಣಪ್ಪ ಸ್ವಾಗತಿಸಿದರು.

ಬ್ರಹ್ಮ ರಥೋತ್ಸವ: ತಾಲ್ಲೂಕಿನ ವಾಗಟ ಅಗ್ರಹಾರ ಗ್ರಾಮದ ಯೋಗಪುರಿ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ ಮಾ. 27 ರಂದು ನಡೆಯಲಿದೆ. ಅದೇ ದಿನ ರಾತ್ರಿ `ಕೃಷ್ಣ ಸಂಧಾನ~ ಎಂಬ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ. ಮಾ.29 ರ ರಾತ್ರಿ ವರದರಾಜಸ್ವಾಮಿ ಮುತ್ತಿನ ಪಲ್ಲಕ್ಕಿ ಸೇರಿದಂತೆ ವಿವಿಧ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.