ಮುಂಬೈ(ಪಿಟಿಐ): ಕಳೆದ ಹಣಕಾಸು ವರ್ಷದಲ್ಲಿ `ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ'(ಜಿಡಿಪಿ) ದಶಕದಲ್ಲೇ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿತ್ತು. ಇಂಥ ಸಂದರ್ಭದಲ್ಲಿ ದೇಶ ತ್ವರಿತಗತಿಯಲ್ಲಿ ಆರ್ಥಿಕ ಪ್ರಗತಿ ಹೊಂದಬೇಕಾದರೆ ಬಾಕಿಯಾಗಿರುವ ಬೃಹತ್ ಯೋಜನೆಗಳಿಗೆ ಶೀಘ್ರ ಅನುಮತಿ ನೀಡಬೇಕು ಮತ್ತು ಬಂಡವಾಳ ಹರಿವು ಹೆಚ್ಚಳಕ್ಕಾಗಿ ಹೂಡಿಕೆ ಸ್ನೇಹಿ ವಾತಾವರಣ ರೂಪಿಸಬೇಕಾದ ತುರ್ತು ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಕಿವಿಮಾತು ಹೇಳಿದೆ.
`ಪ್ರಗತಿಯ ಹಾದಿಗೆ ಮರು ಚೈತನ್ಯ ನೀಡಬೇಕಾದರೆ ಮುಖ್ಯವಾಗಿ ಈ ಎರಡೂ ಕ್ರಮಗಳನ್ನು ಆದಷ್ಟೂ ಬೇಗ ಕೈಗೊಳ್ಳಬೇಕಿದೆ' ಎಂದು `ಆರ್ಬಿಐ' ಗವರ್ನರ್ ಡಿ.ಸುಬ್ಬರಾವ್ ಇಲ್ಲಿ ಹೇಳಿದರು.

ಪರಿಕರ ತಯಾರಿಕಾ ಕ್ಷೇತ್ರದ ಕಳಪೆ ಸಾಧನೆ ಮುಂದುವರಿದಿದೆ. ಮಾರ್ಚ್ನಲ್ಲಿ ತಕ್ಕಮಟ್ಟಿಗಿನ ಪ್ರಗತಿ ದಾಖಲಿಸಿದ್ದ ಕೈಗಾರಿಕಾ ಉತ್ಪನ್ನ ವಲಯ, ಏಪ್ರಿಲ್ನಲ್ಲಿ ಶೇ 2.3ರ ಮಟ್ಟಕ್ಕೆ ಕುಸಿದಿದೆ. ಇನ್ನೊಂದೆಡೆ ಕೃಷಿ, ಗಣಿಗಾರಿಕೆ ಮತ್ತು ಪರಿಕರ ತಯಾರಿಕೆ ಉದ್ಯಮ ವಲಯ ಜನವರಿ-ಮಾರ್ಚ್ನಲ್ಲಿ ಶೇ 4.8ರಷ್ಟು ಕಳಪೆ ಸಾಧನೆ ತೋರಿರುವುದನ್ನು ಮರೆಯುವಂತಿಲ್ಲ. ಹಾಗಾಗಿ ದೇಶದ ಪ್ರಗತಿಗಾಗಿ ವಿವಿಧ ಕ್ಷೇತ್ರಗಳಿಗೆ ಹೆಚ್ಚು ಬಂಡವಾಳ ಹರಿದುಬರಬೇಕಿದೆ. ಬೃಹತ್ ಯೋಜನೆಗಳು ಶೀಘ್ರ ಆರಂಭಗೊಳ್ಳಬೇಕಿದೆ. ಕಳೆದ ಬಾರಿಯಂತಾಗಿದೆ ಉತ್ತಮ ಮುಂಗಾರು ಆಗಮನವಾಗಿ, ಕೃಷಿ ಕ್ಷೇತ್ರದಿಂದ ಹೆಚ್ಚಿನ ಕೊಡುಗೆ ಬರಬೇಕಿದೆ ಎಂದು ಹೇಳಿದ್ದಾರೆ.

ಆಹಾರ ಪದಾರ್ಥ ತುಟ್ಟಿ
ದೇಶದಲ್ಲಿನ ಸದ್ಯ ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರುಮುಖವಾಗಿಯೇ ಇರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸುಬ್ಬರಾವ್, ಮುಖ್ಯವಾಗಿ ಈ ಅಂಶವೇ ಹಣದುಬ್ಬರ ಮೇಲ್ಮಟ್ಟದಲ್ಲೇ ಉಳಿಯಲು ಕಾರಣವಾಗಿದೆ ಎಂದು ಗಮನ ಸೆಳೆದಿದ್ದಾರೆ.

ಏಕದಳ ಧಾನ್ಯಗಳು ಮತ್ತು ತರಕಾರಿಗಳ ಬೆಲೆಯಂತೂ ಗಗನ ಮುಖಿಯಾಗಿದೆ. ಪರಿಣಾಮ ಆಹಾರ ಪದಾರ್ಥಗಳನ್ನು ಆಧರಿಸಿದ ಹಣದುಬ್ಬರವನ್ನು ನಿಯಂತ್ರಿಸಲೇ ಆಗುತ್ತಿಲ್ಲ ಎಂದಿದ್ದಾರೆ.

ವರುಣ ದೇವನಾದರೂ ಕೃಪೆ ತೋರಿ ಉತ್ತಮ ಮುಂಗಾರು ಋತುವಿನ ಆಶೀರ್ವಾದ ನೀಡಿದರೆ ಕೃಷಿ ಕ್ಷೇತ್ರದಲ್ಲಿ ಚೈತನ್ಯ ಮೂಡುತ್ತದೆ. ಆಹಾರ ಪದಾರ್ಥಗಳ ಉತ್ಪಾದನೆ-ಇಳುವರಿ ಹೆಚ್ಚುತ್ತದೆ. ಆಗಲಾದರೂ ಧಾನ್ಯಗಳ ಬೆಲೆ ತಗ್ಗಿ ಹಣದುಬ್ಬರವೂ ಕೆಳಕ್ಕಿಳಿಯಬಹುದು ಎಂದು ಅವರು ಆಶಾವಾದದ ಮಾತನಾಡಿದ್ದಾರೆ.

ಚಿನ್ನ ಆಮದು-`ಸಿಎಡಿ' ಚಿಂತೆ
ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ ಸೇರಿದಂತೆ ವಿವಿಧ ಸರಕುಗಳ ಧಾರಣೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ಇನ್ನೊಂದೆಡೆ ದೇಶದ ಚಿನ್ನದ ಆಮದು ಸಹ ತಗ್ಗುವ ಸೂಚನೆ ಸಿಕ್ಕಿದೆ. ಇದು ಕಳವಳಕಾರಿ ಮಟ್ಟದಲ್ಲಿ ಹೆಚ್ಚಿರುವ `ಆಮದು-ರಫ್ತು ಕೊರತೆ ಅಂತರ'ವನ್ನು(ಸಿಎಡಿ) ತಗ್ಗಿಸುವ ಸಾಧ್ಯತೆ ಇದೆ ಎಂದು `ಆರ್ಬಿಐ' ಸೋಮವಾರ ಪ್ರಕಟಿಸಿದ ಹಣಕಾಸು ನೀತಿ ಪರಾಮರ್ಶೆ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.