ಗುರುವಾರ , ಮೇ 13, 2021
16 °C

ಯೋಜನೆಯ ಲಾಭ ಬಡವರಿಗೆ ದಕ್ಕುವಂತಾಗಲಿ

-ಕಿಕ್ಕೇರಿ ಎಂ.ಚಂದ್ರಶೇಖರ್,ಬೆಂಗಳೂರು Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿಯವರು ಘೋಷಿಸಿದ ಕೆಲವು ಉತ್ತಮ ಕಾರ್ಯಕ್ರಮಗಳ ಲಾಭ ಕೆಳವರ್ಗದ ಜನರಿಗೆ ಲಭ್ಯವಾಗುವಂತೆ ಮಾಡುವ ಉತ್ತಮ ಅಧಿಕಾರಿಗಳ ಕೊರತೆ ರಾಜ್ಯದಲ್ಲಿ ಇದೆ. ಇಂದು  ಬಿಪಿಎಲ್ ಕಾರ್ಡ್, ಆಹಾರ ಇಲಾಖೆ ಅಧಿಕಾರಿಗಳ ಮುಖ್ಯ ದಂಧೆಯಾಗಿದೆ. ಈ ಕಾರ್ಡ್‌ಗಳು ಸ್ಥಿತಿವಂತರ ಪಾಲಾಗಿವೆ. ಮುಖ್ಯವಾಗಿ ರಸ್ತೆ ಕಾಮಗಾರಿಯ ಕೂಲಿಯಾಳುಗಳು, ಒಳಚರಂಡಿಯ ಕೆಲಸಗಾರರಿಗೆ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ. ಈ ಕಾರ್ಡ್‌ಗಳು 3 ಸಾವಿರದಿಂದ 5 ಸಾವಿರ ರೂಪಾಯಿಗೆ ಮಾರಾಟವಾಗುತ್ತಿವೆ. ಕೂಲಿ ಯಾಳುಗಳು ಇಷ್ಟು ಹಣ ಕೊಟ್ಟು ಖರೀದಿಸಲು ಹೇಗೆ ಸಾಧ್ಯ ?ಸಾಲಮನ್ನಾ ಘೋಷಣೆಯ ಬಗ್ಗೆ ಯೋಚಿಸುವುದು ಸೂಕ್ತ. ಗ್ರಾಮೀಣ ಜನತೆ ಕಂತು ಕಟ್ಟುವ ಚಿಂತೆ ಇಲ್ಲದೆ ಸುಲಭವಾಗಿ ಸಿಗುವ ಸಾಲದಿಂದಾಗಿ ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಇದರ ಬದಲಾಗಿ ಸಬ್ಸಿಡಿ ದರದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಬಿತ್ತನೆಯ ಬೀಜ ನೀಡಬೇಕು. ತಿಂಗಳಿಗೊಮ್ಮೆ ಜಿಲ್ಲಾ ರೈತ ಮುಖಂಡರ ಜತೆ ಚರ್ಚಿಸಿ ಯಾವ ಜಿಲ್ಲೆಗೆ ಯಾವ ಬೆಳೆ ಸೂಕ್ತ,  ಮತ್ತು ಆಮದು- ರಫ್ತು ಮಾಡಬಹುದಾದ ಬೆಳೆಗಳು ಯಾವುವು ಎನ್ನುವುದನ್ನು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.ಬೆಂಗಳೂರು ನಗರ ನೀರು, ವಿದ್ಯುತ್, ವಾಹನ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದು ಇದಕ್ಕೆ ಕಾರಣ: ರಾಜಕಾರಣಿಗಳು ಮತ್ತು ಪಾಲಿಕೆಯ ಅಧಿಕಾರಿಗಳು ಉದ್ಯಮಿಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸುತ್ತಿರುವುದು. ಬಡವರು ವಾಸಿಸುವ  ಆಡುಗೋಡಿ, ಮಾವಳ್ಳಿ, ವಿವೇಕನಗರ ಈ ಮುಂತಾದೆಡೆಯ ಹಲವಾರು ಬಡಾವಣೆಯ ಲಕ್ಷಾಂತರ ನಿವಾಸಿಗಳಿಗೆ ಹಕ್ಕುಪತ್ರ ನೀಡದ ಕಾರಣ ಪಾಲಿಕೆಗೆ ನಿವಾಸಿಗಳು ಕಂದಾಯ ಮತ್ತು ಬೆಟರ್‌ಮೆಂಟ್ ಚಾರ್ಜ್ ಕಟ್ಟಲು ಆಗದೆ ಪಾಲಿಕೆಗೆ ಹಣ ಸಂದಾಯವಾಗುತ್ತಿಲ್ಲ. ಕೆಳವರ್ಗದ ಜನರು ಶೋಷಣೆಗೆ ಒಳಗಾಗುತ್ತಿರುವುದು ಅಧಿಕಾರಿಗಳಿಂದ ಮತ್ತು ರಾಜಕಾರಣಿಗಳಿಂದ. ಇದನ್ನು ತಪ್ಪಿಸಬೇಕು. ಕಂದಾಯ ಪಾವತಿಗೆ ಅವಕಾಶ ನೀಡಿದರೆ ಪಾಲಿಕೆ ಆದಾಯ ಹೆಚ್ಚುತ್ತದೆ. ಅಭಿವೃದ್ಧಿಯ ಕುರಿತು ಮುಖ್ಯಮಂತ್ರಿಗಳ ಘೋಷಣೆ ಜಾರಿಗೆ ಬಂದರೆ ಸಾರ್ಥಕವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.