ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು. ಭೂ ಹಂಚಿಕೆ, ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಿಗೆ ನಾಡಿನ ಜನತೆ ಅರಸು ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಅರಸು ಅವರ ಚಿಂತನೆ ಮತ್ತು ಅವರು ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ, ಅರಸು ಜನ್ಮ ಶತಮಾನೋತ್ಸವದ ನೆನಪಿನಲ್ಲಿ ನಾಟಕವೊಂದು ಸಿದ್ಧಗೊಳ್ಳುತ್ತಿದೆ. ಅದರ ಹೆಸರು ‘ಜನಮಿತ್ರ ಅರಸು’.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅರಸು ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ರಾಜ್ಯದ ವಿವಿಧೆಡೆ ನಾಟಕದ ಪ್ರದರ್ಶನ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಆಗಸ್ಟ್ 18ರಂದು ಕಲಾವಿದರು ನಾಟಕ ಪ್ರದರ್ಶಿಸಲಿದ್ದಾರೆ.

ಹೊಸಪೇಟೆಯ ಭಾವೈಕ್ಯತಾ ವೇದಿಕೆ ಹಾಗೂ ಇತರ ತಂಡಗಳ ಕಲಾವಿದರು ನಾಟಕದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ನಗರದ ಗುರುನಾನಕ್ ಭವನ ರಂಗಮಂದಿರಲ್ಲಿ ಕಲಾವಿದರು ಈಚೆಗೆ ಪೂರ್ಣ ಪ್ರಮಾಣದ ತಾಲೀಮು ನಡೆಸಿದರು. ಈ ಸಂದರ್ಭ ನಿರ್ದೇಶಕಿ ಸಹನಾ ಪಿಂಜಾರ ಅವರು ನಾಟಕದ ಬಗ್ಗೆ ಮಾಹಿತಿ ಹಂಚಿಕೊಂಡರು.

*ನಾಟಕದ ಮೂಲಕ ಏನು ಹೇಳಲು ಹೊರಟಿದ್ದೀರಿ?
ಡಿ.ದೇವರಾಜ ಅರಸು ಅವರು ಹಲವು ಸಾಮಾಜಿಕ ಸುಧಾರಣೆಗಳನ್ನು ತಂದರು. ಅವರ ಕಾಲದಲ್ಲಿ ಜಾರಿಗೆ ಬಂದ ಕಾಯ್ದೆಗಳಿಂದ ಫಲಾನುಭವಿಗಳಾದವರ ಸಂಖ್ಯೆ ಅದೆಷ್ಟೋ. ಅವರ ಹೆಸರಿನಲ್ಲಿ ಇಂದು ವಿದ್ಯಾರ್ಥಿ ವೇತನ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳಿವೆ. ಇಂಥ ಯೋಜನೆಗಳ ಫಲಾನುಭವ ಪಡೆಯುತ್ತೇವೆ. ಆದರೆ ಅವರು ಯಾರು ಎಂಬುದನ್ನು ತಿಳಿದಿರುವುದಿಲ್ಲ. ಅರಸು ಬಗ್ಗೆ ಹಾಗೂ ಅವರು ಜಾರಿಗೊಳಿಸಿದ ಯೋಜನೆಗಳ ಪರಿಚಯವನ್ನು ನಾಟಕದ ಮೂಲಕ ಸಾರಿ ಹೇಳಲು ಹೊರಟಿದ್ದೇವೆ.

* ಪ್ರದರ್ಶನ ಆರಂಭವಾಗಿದೆಯೇ?
‘ಜನಮಿತ್ರ ಅರಸು’ ರಾಜ್ಯವ್ಯಾಪಿ ಪ್ರದರ್ಶನ ಕಾಣುವ ನಾಟಕ. ಮಂಡ್ಯ ರಮೇಶ್, ಪ್ರಮೋದ್ ಶಿಗ್ಗಾಂವ್, ಮಹದೇವ್ ಹಡಪದ್ ಮತ್ತು ನನ್ನ ನಿರ್ದೇಶನದಲ್ಲಿ ನಾಲ್ಕು ಪ್ರತ್ಯೇಕ ತಂಡಗಳು ರಾಜ್ಯದ ವಿವಿಧೆಡೆ ನಾಟಕ ಪ್ರದರ್ಶನ ನೀಡುತ್ತಿವೆ. ನಾನು ನಿರ್ದೇಶಿಸಿರುವ ತಂಡವು ಆ.18ರಂದು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನೀಡಲಿದೆ.

* ಅರಸು ನಾಟಕದ ಬಗ್ಗೆ ಹೇಳಿ...
ನಾಟಕದ ಸಂಭಾಷಣೆ ಬರೆದವರು ಡಿ.ಎಸ್.ಚೌಗಲೆ. ನಾಟಕದ ಅವಧಿ ಒಂದೂವರೆ ಗಂಟೆ. ಈ ಮುಂಚೆ ಬೆಂಗಳೂರಿನಲ್ಲಿ ಸಣ್ಣ ಉತ್ಸವ ಮಾಡಿ ನಾಟಕ ಪ್ರದರ್ಶಿಸಿದ್ದೆವು. ಇದೀಗ ರಾಜ್ಯವ್ಯಾಪಿ ಪ್ರವಾಸ ನಡೆಯುತ್ತಿದೆ. ಸಮಾಜ ಸುಧಾರಣೆಯ ಅಗತ್ಯ ಮತ್ತು ಔಚಿತ್ಯ ಬಿಂಬಿಸುವುದು ನಾಟಕದ ಉದ್ದೇಶ.

‘ಜೀತ ಪದ್ಧತಿ ನಿರ್ಮೂಲನೆ’, ‘ಉಳುವವನೇ ಭೂಮಿಯ ಒಡೆಯ’ ಕಾಯ್ಡೆಯ ಫಲಾನುಭವಿಗಳಿಗೆ ಇವು ಯಾರ ಪರಿಕಲ್ಪನೆ ಎಂಬುದು ಗೊತ್ತಾಗಬೇಕು. ಹೊಸ ತಲೆಮಾರಿನ ಜನರಿಗೆ ಅರಸು ಪರಿಚಯ ಆಗಬೇಕು. ಗಾಂಧಿ, ಅಂಬೇಡ್ಕರ್ ಅವರನ್ನು ಗುರುತಿಸುವಂತೆ ಅರಸು ಅವರನ್ನೂ ನನ್ನ ಜನ ನೆನೆಯಬೇಕು ಎಂಬುದು ನಮ್ಮ ಆಶಯ.

* ನಾಟಕದ ವೈಶಿಷ್ಟ್ಯವೇನು?
ಈ ನಾಟಕದಲ್ಲಿ ಅರಸು ಅವರ ಪಾತ್ರವೇ ಇಲ್ಲ. ಅವರ ವಿಚಾರಗಳನ್ನಷ್ಟೇ ಕೇಂದ್ರೀಕರಿಸಿ ನಾಟಕ ಹೆಣೆಯಲಾಗಿದೆ. ಜಾದೂಗಾರರು ಕಥಾನಕಗಳನ್ನು ನಿರೂಪಿಸುವ ತಂತ್ರ ಬಳಕೆಯಾಗಿದೆ.

*ನಿಮ್ಮ ತಂಡದ ಮಾಹಿತಿ ಕೊಡಿ
ರಂಗಮಂದಿರದಲ್ಲಿ ಬಳಸುವ ವಿವಿಧ ಪರಿಕರಗಳನ್ನು (ಸೆಟ್) ಮಹಮ್ಮದ್ ಯೂನಿಸ್ ವಿನ್ಯಾಸ ಮಾಡಿದ್ದಾರೆ. ಇನ್ಸಾಫ್ ಮತ್ತು ರಾಮಚಂದ್ರ ಅಡಪ (ಸಂಗೀತ), ಕೋಮಲ್ (ಬೆಳಕು), ನಾಗರಾಜ ಪತ್ತಾರ್ (ಸಹಾಯಕ) ನಾಟಕಕ್ಕಾಗಿ ತೆರೆಯ ಹಿಂದೆ ಶ್ರಮಿಸಿದ್ದಾರೆ. ಭಾವೈಕ್ಯತೆ ವೇದಿಕೆ ಕಲಾ ತಂಡದ ಎಂಟು ಮಂದಿ, ರಾಜ್ಯದ ಬೇರೆ ಬೇರೆ ತಂಡಗಳ ಕಲಾವಿದರು ಸೇರಿದಂತೆ ಒಟ್ಟು 30 ಮಂದಿ ನಾಟಕ ತಂಡದಲ್ಲಿದ್ದಾರೆ. 20 ದಿನಗಳ ತಾಲೀಮು ನಡೆದಿದೆ.

ಅರಸುಗೆ ರಂಗ ಗೌರವ
ರಂಗಭೂಮಿ ಮೂಲಕ ಅರಸು ಅವರನ್ನು ಪರಿಚಯಿಸಬೇಕು ಎಂಬ ಕಲ್ಪನೆ ಐದು ತಿಂಗಳ ಹಿಂದೆ ಹುಟ್ಟಿಕೊಂಡಿತು. ಅರಸು ಅವರ ಒಡನಾಡಿಗಳು ಮತ್ತು ರಂಗ ಬರಹಗಾರರು ಶ್ರೀರಂಗಪಟ್ಟಣದಲ್ಲಿ ಐದು ದಿನದ ಕ್ಯಾಂಪ್ ಮಾಡಿದ್ದೆವು. ಕೆ.ಎಚ್.ಶ್ರೀನಿವಾಸ ಅವರು ಅರಸು ಅವರಿಗೆ ಸಂಬಂಧಿಸಿದ ಪುಸ್ತಕಗಳು ಎಲ್ಲೆಲ್ಲಿ ಇವೆ ಎಂದು ಹೇಳಿದರು.

ಅರಸು ಅವರ ಹುಟ್ಟು, ಬಾಲ್ಯ, ಮುಖ್ಯಮಂತ್ರಿ ಆಗುವವರೆಗೆ ಏನೆಲ್ಲಾ ಆಗಿದೆ ಎಂಬುದನ್ನು ಈ ನಾಟಕ ಪ್ರೇಕ್ಷಕರಿಗೆ ಮನಗಾಣಿಸುತ್ತೆ.
ಒಟ್ಟು ನಾಲ್ಕು ತಂಡಗಳು ರಾಜ್ಯದ ವಿವಿಧೆಡೆ ನಾಟಕ ಪ್ರದರ್ಶಿಸುತ್ತಿವೆ.

ಮಂಡ್ಯ ರಮೇಶ್, ಮಹದೇವ್ ಹಡಪದ್, ಪ್ರಮೋದ್ ಶಿಗ್ಗಾಂವ ಅವರ ನಿರ್ದೇಶನದ ನಾಟಕದಲ್ಲಿ ಅರಸು ಅವರ ಪಾತ್ರ ಬರುತ್ತದೆ. ಆದರೆ ಸಹನಾ ನಿರ್ದೇಶನ ಮಾಡುತ್ತಿರುವ ನಾಟಕದಲ್ಲಿ ಅರಸು ಬರುವುದಿಲ್ಲ. ಬದಲಿಗೆ ಅವರ ನಿರ್ಧಾರಗಳಿಂದ ಫಲ ಪಡೆದ ಪಾತ್ರಗಳು ಬರುತ್ತವೆ.

ಸಾಮಾಜಿಕ ಅನಿಷ್ಟಗಳಾದ ಜೀತ ಪದ್ದತಿ, ಮಲ ಹೊರುವ ಪದ್ಧತಿಗಳಿಗೆ ಇತಿಶ್ರೀ ಹಾಡಿದ ಅರಸು ದುರ್ಬಲ ವರ್ಗದವರು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಅಧಿಕಾರವನ್ನು ಹಿಡಿಯುವ ಅವಕಾಶವನ್ನು ಕಲ್ಪಿಸಿದರು. ಅಲಕ್ಷಿತ ಜಾತಿಗಳ ನಾಯಕರಿಗೆ ಟಿಕೆಟ್ ಕೊಟ್ಟರು. ಅವರಿಗೆ ರಂಗಭೂಮಿ ಮೂಲಕ ಗೌರವ ಸಲ್ಲಿಸುತ್ತೇವೆ.

ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವಕ್ಕೆ ರಂಗಭೂಮಿ ಸಲ್ಲಿಸುತ್ತಿರುವ ಗೌರವ ಇದು. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಕಾಯ್ದೆಗಳ ಫಲಗಳನ್ನು ಇದೀಗ ನಾವು ಅನುಭವಿಸುತ್ತಿದ್ದೇವೆ.

ನಾವೀಗ ಮಾವಿನಹಣ್ಣು ತಿನ್ನುತ್ತಿದ್ದೇವೆ ಅಂದರೆ, ಅದರ ಹಿಂದೆ ನಮ್ಮ ಅಪ್ಪ ಅಥವಾ ತಾತ ಪಟ್ಟ ಶ್ರಮ ಎಂಬುದು ಗೊತ್ತಿರಬೇಕು. ಫಸಲು ಬಂದಾಗ ಎಲ್ಲರೂ ಮಾಲೀಕರಾಗುತ್ತಾರೆ, ಆದರೆ ಗಿಡ ನೆಟ್ಟವರನ್ನು ಮರೆಯುತ್ತಾರೆ. ಹೀಗೆ ಆಗಬಾರದು ಅಲ್ಲವೇ?
–ಸಿ.ಬಸವಲಿಂಗಯ್ಯ
(ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.