ಮಂಗಳವಾರ, ಮೇ 18, 2021
22 °C

ರಂಜಿಸಿದ ಹರಿದಾಸ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಜಿಸಿದ ಹರಿದಾಸ ಕಲರವ

ಮಲ್ಲೇಶ್ವರದ ಈಸ್ಟ್‌ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ತ್ರಿವೇಣಿ ಚಾರಿಟಬಲ್ ಟ್ರಸ್ಟ್ ಇತ್ತೀಚೆಗೆ `ಹರಿದಾಸ ಕಲರವ' ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿತ್ತು.ನಿರೀಕ್ಷಾ ಅವರು `ಮೊದಲೊಂದಿಪೆ ನಿನಗೆ ಗಣನಾಥ' ಎಂಬ ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. `ದಾಸನೆನಿಸೋ ಎನ್ನ' `ಎಂದೆಂದೂ ನಿನ್ನ ಪಾದವೇ ಗತಿ' ಗೀತೆಗಳನ್ನು ಹಾಡಿದರು. `ಬಂದ ಕೃಷ್ಣ ಚಂದದಿಂದ', `ವೆಂಕಟರಮಣನೇ ಬಾರೋ', `ರಾಮ ರಾಮ ಎಂಬೆರಡಕ್ಷರದ' ಗೀತೆಗಳನ್ನು ನಿಸರ್ಗ ಹಾಡಿದರು.ಮೇಘನಾ ಮತ್ತು ಆದಿತ್ಯ `ಕೇಶವ ಮಾಧವ', `ತಾರಕ್ಕ ಬಿಂದಿಗೆ', `ದೃಷ್ಟಿ ನಿನ್ನ ಪಾದದಲ್ಲಿ' ಗೀತೆಗಳನ್ನು ಹಾಡಿ ರಂಜಿಸಿದರು. ಮಾನ್ಯ ಅವರು `ಶರಣು ಶರಣು', `ನಂಬಿದೆ ನಿನ್ನಾ ಪಾದ', `ಬಾರೆ ಭಾಗ್ಯದ ನಿಧಿಯೇ' ಮುಂತಾದ ಗೀತೆಗಳನ್ನು ಪ್ರಸ್ತುತಪಡಿಸಿದರು.ನಂತರ ಜಯಂತ್, ಚೇತಶ್ರೀ ಮತ್ತು ಪ್ರಿಯಾಂಕ ಅವರು ಹರಿದಾಸ ಕೃತಿಗಳಿಗೆ ನೃತ್ಯ ಮಾಡಿದರು. ಶ್ರೀನಿವಾಸ (ಕೀಬೋರ್ಡ್), ಮಾರುತಿ ಪ್ರಸಾದ್ (ತಬಲಾ) ವಾದ್ಯ ಸಹಕಾರ ನೀಡಿದರು.ಅರಳು ಮಲ್ಲಿಗೆ ಪಾರ್ಥಸಾರಥಿ, ಪುರಂದರ ಇಂಟರ್‌ನ್ಯಾಷನಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುವರ್ಣ ಮೋಹನ್, ವಿದುಷಿ ರಮಾ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.