ಮಂಗಳವಾರ, ಜೂನ್ 15, 2021
26 °C

ರಕ್ಷಿತಾ ಇಂದು ಬಿಜೆಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ ಟಿಕೆಟ್‌ ನಿರಾಕರಿಸಿದ ನಂತರ ಬೇಸತ್ತ ನಟಿ ರಕ್ಷಿತಾ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ.ಗುರುವಾರ ಬೆಳಿಗ್ಗೆ ಅವರು ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ಉಪಾಧ್ಯಕ್ಷ ಬಿ.ಎನ್‌.ವಿಜಯಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಮೋದಿ ಪ್ರವಾಸ:  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಇದೇ 31 ಅಥವಾ ಏ.1ರಂದು ರಾಜ್ಯದಲ್ಲಿ ಒಂದು ದಿನದ ಪ್ರಚಾರ ನಡೆಸಲಿದ್ದಾರೆ.31ರಂದು ಯುಗಾದಿ ಹಬ್ಬ ಇರುವ ಕಾರಣ ಏ.1ರಂದು ರಾಜ್ಯದ ನಾಲ್ಕು ಕಡೆ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಬೆಳಗಾವಿ, ಮೈಸೂರು, ಬಾಗಲಕೋಟೆ ನಗರಗಳಲ್ಲಿ ಆಯೋಜಿಸುವ ರ್‌್ಯಾಲಿಗಳನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.