ರಾಯಬಾಗ: ಈಚೆಗೆ ಸಸಾಲಟ್ಟಿ ಗ್ರಾಮದ ಈರಣ್ಣ ದೇವಾಲಯವನ್ನು ನವೀಕರಿ ಸುವ ಸಂದರ್ಭದಲ್ಲಿ ನೆಲ ಅಗೆಯುವಾಗ ನಾಲ್ಕು ಅಡಿ ಎತ್ತರದ ನೂತನ ಶಾಸನ ಪತ್ತೆಯಾಗಿದೆ.

ಇದನ್ನು ಹಾರೂಗೇರಿಯ ದರೂರ ವೃಷಭೇಂದ್ರ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿ.ಎಸ್. ಮಾಳಿ ಹಾಗೂ ವೃಷಭೇಂದ್ರ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಸದರಿ ಶಾಸನ ಹಳೆಗನ್ನಡದಲ್ಲಿದ್ದು, ಇದರಲ್ಲಿ ಹನ್ನೆರಡು ಶಾಸನಗಳಿವೆ.

ಶಾಸನದ ಹಿಂಬಾಗದಲ್ಲಿ ಶಿವಲಿಂಗ ಇದೆ. ಇದು 12 ಅಥವಾ 13ನೆಯ ಶತಮಾನದ ಶಾಸನ ಆಗಿರಬಹುದು ಎಂದು ತಿಳಿಸಿದ್ದಾರೆ.ಶಾಸನದಲ್ಲಿ ರಟ್ಟ ದೊರೆ ಕಾರ್ತವೀರ್ಯನ ಉಲ್ಲೇಖವಿದೆ. ಆದ್ದರಿಂದ ಇದು ರಟ್ಟರ ಶಾಸನವೆಂದು ಸ್ಪಷ್ಟವಾಗಿದೆ ಎಂದು ಡಾ. ಮಾಳಿ ತಿಳಿಸಿದ್ದಾರೆ.

ಶಾಸನದಲ್ಲಿ ದಂಡನಾಯಕ ಕೇತರಸನ ಕುರಿತು ವಿವರಗಳಿಲ್ಲ. ರಟ್ಟರಾಜ ಕಾರ್ತವೀರ್ಯ ಎಷ್ಟನೆಯವನು ಎಂಬುದು ಸ್ಪಷ್ಟವಿಲ್ಲ. ರಟ್ಟ ಅರಸರಲ್ಲಿ ನಾಲ್ವರು ಕಾರ್ತವೀರ್ಯರಿದ್ದು ಶಾಸನದಲ್ಲಿ ಉಲ್ಲೇಖಿತ ಕಾರ್ತವೀರ್ಯನು ನಾಲ್ಕನೆಯವನು ಆಗಿರಬಹುದು ಎಂದು ಶಾಸನ ತಜ್ಞ ಡಾ.ಹನುಮಾಕ್ಷಿ ಗೋಗಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.