ಸೋಮವಾರ, ಮೇ 17, 2021
21 °C

ರಸಗೊಬ್ಬರ: ನಿಯಮಾವಳಿ ಅನುಸರಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: `ನಿಗದಿತ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವ ಮೂಲಕ ನಿಯಮಾವಳಿ ಅನುಸರಿಸಿ ಹಾಗೂ ದರ ಪಟ್ಟಿ ಪ್ರದರ್ಶಿಸಿ' ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಜಿ.ನಾಗಣ್ಣವರ ಕೃಷಿ ಪರಿಕರ ಮಾರಾಟಗಾರರಿಗೆ ಸೂಚನೆ ನೀಡಿದರು.ಇತ್ತೀಚೆಗೆ ನಗರದ ತಾ.ಪಂ. ಸಭಾಂಗಣದಲ್ಲಿ ಜರುಗಿದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲು, ಬಿಲ್ ನೀಡಲು ಹಾಗೂ ಕಳಪೆ ಮಟ್ಟದ ಪರಿಕರಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿದರು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.ರೈತ ಮುಖಂಡರಾದ ಶಿವನಗೌಡ ಗೌಡರ ಹಾಗೂ ಗಣಪತಿ ಇಳಿಗೇರ ಮಾತನಾಡಿ, ರೈತರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಪರಿಕರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್.ಸಂಕ್ರಿ ವಹಿಸಿದ್ದರು.

ಕೃಷಿ ಅಧಿಕಾರಿಗಳಾದ ಆರ್.ಬಿ.ನಾಯ್ಕರ, ಬಸವರಾಜ ದಳವಾಯಿ, ಮಂಜುನಾಥ ಜನಮಟ್ಟಿ, ಎಲ್.ಎನ್. ಕೌಜಗೇರಿ, ರೇಣುಕಾ ಹಿರೇಕುರುಬರ ಉಪಸ್ಥಿತರಿದ್ದರು.`ಉತ್ತಮ ಪರಿಸರ ಮುಖ್ಯ'

ಮೂಡಲಗಿ: `ಗಿಡ ಮರಗಳನ್ನು ಬೆಳೆಸಿ ಉತ್ತಮ ಪರಿಸರ ಹೊಂದುವುದು ಮುಖ್ಯ' ಎಂದು ಸಿ.ಪಿ.ಐ. ಎಸ್.ಎಂ. ಓಲೇಕಾರ ಅವರು ಹೇಳಿದರು.ಇಲ್ಲಿಯ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕುವುದರ ಮೂಲಕ ವನಮಹೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರಿದ್ದರೆ ಮಾತ್ರ ಸಕಲ ಪ್ರಾಣಿ ಪಕ್ಷಿಗಳು ಭೂಮಿಯಲ್ಲಿ ಬದುಕಲು ಸಾಧ್ಯ ಎಂದರು.ಪಿ.ಎಸ್.ಐ. ಎಸ್.ವೈ. ಮರಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡ ಬೆಳೆಸಿದರೆ ಪರಿಸರ ವಿನಾಶ ಎನ್ನುವ ಪ್ರಶ್ನೆಯೇ ಇರುವುದಿಲ್ಲ ಎಂದರು. ಠಾಣೆಯ ಆವಣದಲ್ಲಿ ಸದ್ಯ 50 ಸಸಿಗಳನ್ನು ನೆಡಲಾಗುತ್ತಿದೆ ಎಂದು ಅವರು ತಿಳಿಸಿದರು. ಠಾಣೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.